
ಹುನಗುಂದ: ಪಟ್ಟಣವು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೋಮವಾರ ರಾತ್ರಿ ಗಾಳಿ, ಮಳೆ ಜೊತೆಗೆ ಗುಡುಗು, ಸಿಡಿಲುಗಳ ಆರ್ಭಟದೊಂದಿಗೆ ಸುಮಾರು 20 ನಿಮಿಷಗಳ ಕಾಲ ಸಾಧಾರಣ ಮಳೆ ಆಗಿದೆ.
ತಾಲ್ಲೂಕಿನ ಯಡಹಳ್ಳಿ, ಚಿತ್ತವಾಡಗಿ, ವೀರಾಪುರ, ಬನ್ನಿಹಟ್ಟಿ, ಹಿರೇಬಾದವಾಡಗಿ, ಚಿಕ್ಕಬಾದವಾಡಗಿ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಮಳೆ ಆಗಿದೆ. ಕೆಲವಡೆ ಗಾಳಿ ರಭಸಕ್ಕೆ ಮರದ ಟೊಂಗೆಗಳು ಹೆಚ್ಚಾಗಿ ಮುರಿದು ಬಿದ್ದಿವೆ. ಮಳೆಗೆ ಪಟ್ಟಣದ ಮೇಗಲಪೇಟೆ ಹತ್ತಿರ ತೆಂಗಿನ ಮರವೊಂದು ಧರೆಗೆ ಉರುಳಿತು.
ತಾಲ್ಲೂಕಿನಲ್ಲಿ ಕಳೆದ ಒಂದು ವಾರದದಿಂದ ಬಿಸಿಲಿನ ತಾಪ ಹೆಚ್ಚಾಗಿತ್ತು.
ವಿದ್ಯುತ್ ವ್ಯತ್ಯಯ: ಗಾಳಿ ಜೊತೆಗೆ ಇನ್ನೊಂದು ಕಡೆಗೆ ಮರದ ಟೊಂಗೆ ವಿದ್ಯುತ್ ತಂತಿ ಮೇಲೆ ಬಿದ್ದ ಪರಿಣಾಮ ಕೆಲ ಸಮಯದವರೆಗೆ ವಿದ್ಯುತ್ ವ್ಯತ್ಯಯ ಉಂಟಾಯಿತು. ಸೋಮವಾರ ರಾತ್ರಿ ಜೋರಾಗಿ ಬೀಸಿದ ಗಾಳಿಯ ರಭಸಕ್ಕೆ ವಿದ್ಯುತ್ ಕಂಬದ ವೈರ್‌ಗಳ ಮೇಲೆ ಬಿದ್ದ ಪರಿಣಾಮ ವೈರ್‌ಗಳು ತುಂಡಾಗಿ ಶುಕ್ರವಾರ ಬೆಳಿಗ್ಗೆವರೆಗೆ ಪಟ್ಟಣ ಸೇರಿದಂತೆ ತಾಲ್ಲೂಕಿನ ಕೆಲವು ಪ್ರದೇಶಗಳಲ್ಲಿ ಕೆಲ ಸಮಯದವರೆಗೆ ವಿದ್ಯುತ್ ವ್ಯತ್ಯಯ ಉಂಟಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.