
ಬಾಗಲಕೋಟೆ: ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎನ್.ವಿ.ವಿಜಯ್ ಅವರ ನೇತೃತ್ವದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ಬಾಕಿ ಇರುವ 5,885 ಹಾಗೂ ವಾಜ್ಯ ಪೂರ್ವ ಪ್ರಕರಣಗಳಲ್ಲಿ 27,808 ಪ್ರಕರಣ ಸೇರಿ ಒಟ್ಟು 33,693 ಪ್ರಕರಣಗಳನ್ನು ರಾಜಿ ಸಂದಾನ ಮೂಲಕ ಇತ್ಯರ್ಥ ಪಡಿಸಲಾಯಿತು.
ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಬಾಗಲಕೋಟೆ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‍ನಲ್ಲಿ ಬಾಕಿ ಇರುವ 11,833 ಪೈಕಿ 5,885 ಪ್ರಕರಣ, ವಾಜ್ಯ ಪೂರ್ವ ಪ್ರಕರಣಗಳಲ್ಲಿ 31,282 ಪೈಕಿ 27,808 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಯಿತು. ಅದಾಲತ್‍ನಲ್ಲಿ ₹42.86 ಕೋಟಿ ಪ್ರಕರಣ ಪರಿಹಾರ ಒದಗಿಸಲಾಯಿತು.
ಕೌಟುಂಬಿಕ ವಿವಾದದ ಹಿನ್ನಲೆಯಲ್ಲಿ ಜಿಲ್ಲಾ ಮತ್ತು ಅಧೀನ ಕುಟುಂಬ ನ್ಯಾಯಾಲಯದಲ್ಲಿ ವಿಚ್ಚೇದನ ಬಯಸಿ ಅರ್ಜಿ ಸಲ್ಲಿಸಿದ್ದ 58 ಜೋಡಿ ಪೈಕಿ 8 ಜೋಡಿಗಳು ಮತ್ತೆ ಒಂದಾಗುವ ಮೂಲಕ ಹೊಸ ಜೀವನ ಆರಂಭಿಸಲು ಅಣಿಯಾದರು. ಜಿಲ್ಲಾ ನ್ಯಾಯಾಲಯದಲ್ಲಿ ಬಾಕಿ ಇರುವ 4,807 ಪ್ರಕರಣಗಳ ಪೈಕಿ 1,872, ಬೀಳಗಿ ನ್ಯಾಯಾಲಯದಲ್ಲಿ 448 ಪೈಕಿ 316, ಮುಧೋಳ ನ್ಯಾಯಾಲಯದಲ್ಲಿ 801 ಪೈಕಿ 708, ಬನಹಟ್ಟಿ ನ್ಯಾಯಾಲಯದಲ್ಲಿ 1,734 ಪೈಕಿ 466, ಹುನಗುಂದ ನ್ಯಾಯಾಲಯದಲ್ಲಿ 1,467 ಪೈಕಿ 613, ಇಳಕಲ್ ನ್ಯಾಯಾಲಯದಲ್ಲಿ 446 ಪೈಕಿ 386, ಬಾದಾಮಿ ನ್ಯಾಯಾಲಯದಲ್ಲಿ 836 ಪೈಕಿ 761, ಜಮಖಂಡಿ ನ್ಯಾಯಾಲಯದಲ್ಲಿ 1,254 ಪೈಕಿ 762 ಹಾಗೂ ಎಫ್.ಟಿ.ಎಸ್.ಸಿ-1 ಕೋರ್ಟಿನಲ್ಲಿ 31 ಪೈಕಿ ಒಂದು ಪ್ರಕರಣ ಇತ್ಯರ್ಥಪಡಿಸಲಾಯಿತು.
ವಾಜ್ಯಪೂರ್ವ ಪ್ರಕರಣಗಳಲ್ಲಿ ಬ್ಯಾಂಕಿಗೆ ಸಂಬಂಧಿಸಿದ ನಾಲ್ಕುರ ಪೈಕಿ ಒಂದು ಪ್ರಕರಣ ₹5.19 ಲಕ್ಷ ಪರಿಹಾರಕ್ಕೆ ಇತ್ಯರ್ಥಗೊಂಡರೆ, ಭೂ ಸ್ವಾಧೀನ ಪ್ರಕರಣಕ್ಕೆ ಸಂಬಂಧಿಸಿದ 1,757 ಪೈಕಿ 23ಕ್ಕೆ ₹3.98 ಕೋಟಿ, ಕಾರ್ಮಿಕರಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ 12 ಪೈಕಿ 12ಕ್ಕೆ ₹15 ಸಾವಿರ, ಸಿವಿಲ್ ಪ್ರಕರಣಗಳಲ್ಲಿ ಪಾಟಿಶನ್ ಸೂಟ್‍ದಲ್ಲಿ 8,74 ಪೈಕಿ 3,34ಕ್ಕೆ ₹12.38 ಕೋಟಿ, ಎಂ.ಎ.ಟಿ.ಸಿ ಪ್ರಕರಣಗಳಲ್ಲಿ 2,07 ಪೈಕಿ 62ಕ್ಕೆ ₹3.4 ಕೋಟಿಗೆ ಇತ್ಯರ್ಥ ಮಾಡಲಾಯಿತು.
ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಹಾಗೂ ಎಫ್‍ಟಿಎಸ್‍ಸಿ-1 ನ್ಯಾಯಾಧೀಶರಾದ ಪಿ.ಎಸ್.ಸದರ ಜೋಶಿ, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧಿಶ ಜಿ.ಎ.ಮೂಲಿಮನಿ, 4ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ರಾಜೇಶ ಕರಣಮ್ ಕೆ, 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರಮೇಶ ಎಕಬೋಟೆ, ಜಿಲ್ಲಾ ನ್ಯಾಯಾಧೀಶ ಮತ್ತು ಕುಟುಂಬ ನ್ಯಾಯಾಲಯದ ಕೃಷ್ಣಮೂರ್ತಿ ಪಡಸಲಗಿ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಮಹೇಶ ಪಾಟೀಲ, ಒಂದನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧಿಶ ಸುದೀಪ ನಾಯಕ, 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ರಾಜಶೇಖರ ತಿಳಗಂಜಿ, ಪ್ರಧಾನ ಸಿವಿಲ್ ನ್ಯಾಯಾಧೀಶ ಮುರಗೇಂದ್ರ ತುಬಾಕೆ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ರೂಪಾ ಮಟ್ಟಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.