ಬಾಗಲಕೋಟೆ: ಶ್ರೀಶೈಲ ಜಾತ್ರೆಗೆ ಸಾವಿರಾರು ಭಕ್ತರು ಪಾದಯಾತ್ರೆ ಮೂಲಕ ತೆರಳುತ್ತಾರೆ. ಪಾದಯಾತ್ರೆ ಮೂಲಕ ಹೋಗಲಾರದವರು ಸ್ವಂತ ವಾಹನ, ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಹೋಗುತ್ತಾರೆ. ಭಕ್ತರಿಗಾಗಿ ಸಾರಿಗೆ ಸಂಸ್ಥೆ ವಿಶೇಷ ಬಸ್ ವ್ಯವಸ್ಥೆ ಮಾಡಿದೆ.
ಒಂಬತ್ತು ದಿನಗಳಲ್ಲಿ 137 ವಿಶೇಷ ಬಸ್‌ಗಳು ಶ್ರೀಶೈಲಕ್ಕೆ ಹೋಗಿ, ಬಂದಿವೆ. ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ₹1.08 ಕೋಟಿ ಆದಾಯ ಸಂಗ್ರಹವಾಗಿದೆ.
ಪಾದಯಾತ್ರೆ ಹೊರಡುವವರು ಜಾತ್ರೆಗೆ ಇನ್ನೂ ಹದಿನೈದು ದಿನಗಳ ಕಾಲ ಇದೆ ಎನ್ನುವಾಗಲೇ ಹೊರಟು ಬಿಡುತ್ತಾರೆ. ಅವರಲ್ಲದೇ ವಾಹನಗಳಲ್ಲಿ ತೆರಳುವವರಿಗಾಗಿ ಶ್ರೀಶೈಲ ಮಲ್ಲಿಕಾರ್ಜುನನ ದರ್ಶನಕ್ಕೆ ಹೋಗಲು ಸಾರಿಗೆ ಸಂಸ್ಥೆಯು ವಿಶೇಷ ಬಸ್ ವ್ಯವಸ್ಥೆ ಮಾಡಿದೆ.
ಜಿಲ್ಲೆಯಲ್ಲಿ ಮಲ್ಲಿಕಾರ್ಜುನನ ಭಕ್ತರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ. ಜಿಲ್ಲೆಯ ಎಲ್ಲ ಡಿಪೊಗಳಿಂದಲೂ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಒಂದೇ ಗ್ರಾಮದಿಂದ ಐವತ್ತು ಜನರು ಹೊರಟರೆ ಆ ಗ್ರಾಮದಿಂದಲೇ ವಿಶೇಷ ಬಸ್ ವ್ಯವಸ್ಥೆ ಮಾಡಲಾಗುತ್ತಿದೆ. ಹಲವು ಗ್ರಾಮಗಳ ಜನರು ಬುಕ್ ಮಾಡಿದ್ದು, ಜನರು ಗುಂಪು, ಗುಂಪಾಗಿ ಹೊರಟಿದ್ದಾರೆ.
ಬಾಗಲಕೋಟೆ–ಶ್ರೀಶೈಲಕ್ಕೆ ₹935 ದರ ನಿಗದಿ ಮಾಡಲಾಗಿದೆ. ಜಿಲ್ಲೆಯ ವಿವಿಧ ಸ್ಥಳಗಳಿಂದ ವಿವಿಧ ದರ ನಿಗದಿ ಮಾಡಲಾಗಿದೆ. ಮಹಾನಂದಿ, ಮಂತ್ರಾಯಲಕ್ಕೆ ಭೇಟಿ ನೀಡಬಯಸುವ ಭಕ್ತರಿಗೂ ಹೆಚ್ಚಿನ ದರ ವಿಧಿಸಿ, ವ್ಯವಸ್ಥೆ ಮಾಡಲಾಗುತ್ತದೆ.
ಮಾರ್ಚ್ 18 ರಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಮಾರ್ಚ್ 29ರವರೆಗೆ ಶ್ರೀಶೈಲಕ್ಕೆ ಬಸ್‌ಗಳು ಹೋಗುತ್ತವೆ. ಯುಗಾದಿ ಪಾಡ್ಯದ ದಿನ ಮಾರ್ಚ್ 30 ರಂದು ವಾಪಸ್ ಬರಲಿವೆ.
ಅಂತರರಾಜ್ಯ ಪ್ರಯಾಣ ಆಗಿರುವುದರಿಂದ ರಾಜ್ಯ ಸರ್ಕಾರದ ‘ಶಕ್ತಿ’ ಯೋಜನೆ ಅನ್ವಯವಾಗುವುದಿಲ್ಲ. ಹೀಗಾಗಿ, ಮಹಿಳೆಯರು ಪ್ರಯಾಣ ದರ ಪಾವತಿಸಿ, ಶ್ರೀಶೈಲಕ್ಕೆ ಹೋಗಿ ಬರುತ್ತಿದ್ದಾರೆ.
ಬಸ್‌ನಲ್ಲಿ ಹೋದವರಲ್ಲದೇ, ಪಾದಯಾತ್ರೆ ಹೋಗಿರುವ ಭಕ್ತರು ವಾಪಸ್ ಬಸ್‌ಗಳಲ್ಲಿ ಬರಲಿದ್ದಾರೆ. ಅವರಿಗಾಗಿ 260 ಬಸ್‌ಗಳು ಶ್ರೀಶೈಲದಿಂದ ಜಿಲ್ಲೆಯ ವಿವಿಧೆಡೆ ಬರಲಿವೆ.
₹3.25 ಕೋಟಿ ಆದಾಯ ನಿರೀಕ್ಷೆ: ಕಳೆದ ಬಾರಿ ಶ್ರೀಶೈಲಕ್ಕೆ ವಿಶೇಷ ಬಸ್ ವ್ಯವಸ್ಥೆ ಮಾಡಿದ್ದರಿಂದ ₹2.64 ಕೋಟಿ ಸಂಗ್ರಹವಾಗಿತ್ತು. ಈ ಸಲ ಹೆಚ್ಚಿನ ಭಕ್ತರು ಹೋಗುತ್ತಿರುವುದು ಹಾಗೂ ಬಸ್ ಪ್ರಯಾಣ ದರದಲ್ಲಿ ಹೆಚ್ಚಳವಾಗಿರುವುದರಿಂದ ₹3.25 ಕೋಟಿ ಆದಾಯ ನಿರೀಕ್ಷಿಸಲಾಗಿದೆ.
ಶ್ರೀಶೈಲಕ್ಕೆ ನಿತ್ಯ ಹತ್ತಾರು ಬಸ್ ಗ್ರಾಮಗಳಿಂದಲೇ ಬಸ್ ವ್ಯವಸ್ಥೆ ವಾಪಸ್ ಕರೆತರಲೂ ವಿಶೇಷ ಬಸ್
ಭಕ್ತರ ಅನುಕೂಲಕ್ಕಾಗಿ ಜಿಲ್ಲೆಯ ಎಲ್ಲ ಡಿಪೊಗಳಿಂದ ಬಸ್‌ಗಳನ್ನು ಓಡಿಸಲಾಗುತ್ತಿದೆನಿತಿನ್ ಹೆಗಡೆ ಜಿಲ್ಲಾ ನಿಯಂತ್ರಣಾಧಿಕಾರಿ ಎನ್‌ಡಬ್ಲುಕೆಎಸ್‌ಆರ್‌ಟಿಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.