ಬಾಗಲಕೋಟೆ: ಸ್ವಯಂ ರಕ್ಷಣೆಗಾಗಿ ಪ್ರತಿಯೊಬ್ಬ ಹಿಂದೂ ಮನೆಯಲ್ಲಿ ಆಯುಧ ಹೊಂದಿರಬೇಕು. ಆಯುಧ ಖರೀದಿಸಿ ಆಯುಧ ಪೂಜೆ ಮಾಡಿ ಎಂದು ರಾಜ್ಯಸಭಾ ಸದಸ್ಯ ನಾರಾಯಣ ಭಾಂಡಗೆ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ರಕ್ಷಣೆ, ಅನ್ಯಾಯದ ವಿರುದ್ಧ ಹೋರಾಡಲು ಶಕ್ತಿ ಬೇಕು. ಸಮರಕ್ಕೆ ಶಸ್ತ್ರ ಹಾಗೂ ಅಭ್ಯಾಸಕ್ಕೆ ಶಾಸ್ತ್ರ ಬೇಕು. ಶಕ್ತಿಶಾಲಿ ಹಿಂದೂ ಸಮಾಜ ನಿರ್ವೀರ್ಯ ಆಗಬಾರದು. ಸಹಿಷ್ಣುಗಳು ಹೌದು. ಆದರೆ, ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ಕೊಡುವುದಲ್ಲ. ಎರಡೂ ಕೆನ್ನೆಗೆ ಹೊಡೆಯಬೇಕು. ಅನ್ಯಾಯದ ವಿರುದ್ಧ ಧ್ವನಿ ಎತ್ತುವಂತಹ ಹಿಂದೂ ಸಮಾಜ ಕಟ್ಟಬೇಕಿದೆ ಎಂದು ಹೇಳಿದರು.
ಸ್ವಯಂ ರಕ್ಷಣೆಗಾಗಿ ಆಯುಧ ಇಟ್ಟುಕೊಳ್ಳಿ. ಎಲ್ಲ ಕಡೆಗೂ ಪೊಲೀಸರು ಬರಲು ಆಗುವುದಿಲ್ಲ. ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳದಿದ್ದರೆ, ಸಮಾಜ ಹೇಗೆ ರಕ್ಷಣೆ ಮಾಡತ್ತೇವೆ ಎಂದು ಪ್ರಶ್ನಿಸಿದರು.
ಆರ್‌ಎಸ್‌ಎಸ್ ಶತಮಾನದ ಸಂಭ್ರಮ: ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ 100 ವರ್ಷ ತುಂಬಿದೆ. ಸಂಸ್ಕೃತಿ, ಪರಂಪರೆ ಉಳಿಸಿ, ಬೆಳೆಸಲು ನಿರಂತರ ಕೆಲಸ ಮಾಡುತ್ತ ಬಂದಿದೆ. ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ದೇಶ ದೊಡ್ಡದು ಎನ್ನುವುದನ್ನು ಕಲಿಸಿದೆ. ನೂರು ವರ್ಷಗಳಲ್ಲಿ ಎದುರಾದ ಎಲ್ಲ ಅಡೆತಡೆಗಳನ್ನು ಮೀರಿ ಜನಪರ, ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ ಎಂದರು.
ಬಾಗಲಕೋಟೆಯಲ್ಲಿ ಅ.5ರಂದು ಆರ್‌ಎಸ್‌ಎಸ್ ಪಥಸಂಚಲನ ನಡೆಯುತ್ತಿದೆ. ಯಾವುದೋ ಕಾರಣಕ್ಕೆ ಸಂಘದಿಂದ ದೂರ ಉಳಿದವರು ಮತ್ತೆ ಸಂಘಕ್ಕೆ ಬರಬೇಕು ಎಂದು ಮನವಿ ಮಾಡಿದರು.
ಸ್ಪಷ್ಟತೆ ಇಲ್ಲದ ಸಮೀಕ್ಷೆ: ರಾಜ್ಯ ಸರ್ಕಾರ ನಡೆಸುತ್ತಿರುವ ಸಮೀಕ್ಷೆಯನ್ನು ಯಾವ ಕಾರಣಕ್ಕೆ ಮಾಡಲಾಗುತ್ತಿದೆ ಎಂಬ ಸ್ಪಷ್ಟತೆ ಸರ್ಕಾರಕ್ಕೆ ಇಲ್ಲ. ಜನರಲ್ಲಿ ಅನಾವಶ್ಯಕವಾಗಿ ಗೊಂದಲ ಸೃಷ್ಟಿ ಮಾಡಲಾಗುತ್ತಿದೆ. ಆಟಕ್ಕುಂಟು ಲೆಕ್ಕಕ್ಕಿಲ್ಲದ ಎಂಬಂತಾಗಿದೆ ಎಂದು ಟೀಕಿಸಿದರು.
ಸಿದ್ದರಾಮಯ್ಯ ಸರ್ಕಾರ ಲಿಂಗಾಯತ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್ ಸೇರಿದಂತೆ ಹಲವು ಹೊಸ ಜಾತಿಗಳನ್ನು ಹುಟ್ಟು ಹಾಕಿದೆ. ವಿರೋಧ ವ್ಯಕ್ತವಾದ ನಂತರ ಅವುಗಳನ್ನು ಕೈಬಿಡಲಾಗಿದೆ. ಗೊಂದಲ ಇಂದಿಗೂ ಮುಂದುವರೆದಿದೆ. ಎಲ್ಲರೂ ಧರ್ಮದ ಕಾಲಂನಲ್ಲಿ ಹಿಂದು ಎಂದು ಬರೆಯಿಸಬೇಕು. ಜಾತಿ ಕಾಲಂನಲ್ಲಿ ಏನು ಬರೆಸಬೇಕು ಎನ್ನುವುದು ಜನರ ವಿವೇಚನೆಗೆ ಬಿಡುತ್ತೇನೆ ಎಂದು ಹೇಳಿದರು.
ಬಾಗಲಕೋಟೆಯಲ್ಲಿ ಅ.5ರಂದು ಆರ್‌ಎಸ್‌ಎಸ್ ಪಥಸಂಚಲನ ನಡೆಯುತ್ತಿದೆ. ಯಾವುದೋ ಕಾರಣಕ್ಕೆ ಸಂಘದಿಂದ ದೂರ ಉಳಿದವರು ಮತ್ತೆ ಸಂಘಕ್ಕೆ ಬರಬೇಕುನಾರಾಯಣ ಭಾಂಡಗೆ, ರಾಜ್ಯಸಭಾ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.