ADVERTISEMENT

ಮಂದಿರಗಳಿಗಿಂತ ಶಾಲೆಗಳ ಸಂಖ್ಯೆ ಹೆಚ್ಚಾಗಲಿ: ಸಚಿವ ತಿಮ್ಮಾಪುರ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2024, 15:37 IST
Last Updated 11 ಸೆಪ್ಟೆಂಬರ್ 2024, 15:37 IST
ಮುಧೋಳ ತಾಲ್ಲೂಕು ಅಕ್ಕಿಮರಡಿಯಲ್ಲಿ ಪ್ರೌಢಶಾಲೆ ಕೊಠಡಿ ಉನ್ನತೀಕರಣ ಕಾಮಗಾರಿಗೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಆರ್.ಬಿ.ತಿಮ್ಮಾಪುರ ಅವರನ್ನು ಸನ್ಮಾನಿಸಲಾಯಿತು
ಮುಧೋಳ ತಾಲ್ಲೂಕು ಅಕ್ಕಿಮರಡಿಯಲ್ಲಿ ಪ್ರೌಢಶಾಲೆ ಕೊಠಡಿ ಉನ್ನತೀಕರಣ ಕಾಮಗಾರಿಗೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಆರ್.ಬಿ.ತಿಮ್ಮಾಪುರ ಅವರನ್ನು ಸನ್ಮಾನಿಸಲಾಯಿತು   

ಮುಧೋಳ: ಪಾಲಕರು ತಮ್ಮ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಕೊಡಿಸಬೇಕು. ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಮ್ಮ ಮಕ್ಕಳನ್ನು ಸರ್ಕಾರಿ‌ ಶಾಲೆಯಲ್ಲಿ ಓದಿಸಿ ಮತ್ತೊಬ್ಬರಿಗೆ ಮಾದರಿಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.

ತಾಲ್ಲೂಕಿನ ಅಕ್ಕಿಮರಡಿಯಲ್ಲಿ ಆಯೋಜಿಸಿದ್ದ ಪ್ರೌಢಶಾಲೆ ಕೊಠಡಿ ಉನ್ನತೀಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಮಂದಿರಗಳಿಗಿಂತ ಶಾಲೆಗಳ ಸಂಖ್ಯೆ ಹೆಚ್ಚಾಗಬೇಕು. ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಳವಾಗಬೇಕು. ಖಾಸಗಿ ಶಾಲೆಯಲ್ಲಿನ ವಿದ್ಯಾರ್ಥಿಗಳು ಅಧಿಕ ಅಂಕಪಡೆದು ಜಾಗತಿಕ ಜ್ಞಾನವಿಲ್ಲದೆ ಮುಂದಿನ ಜೀವನ ದುಸ್ತರಗೊಳಿಸಿಕೊಳ್ಳುತ್ತಾರೆ. ಆದರೆ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಲೋಕಜ್ಞಾನ ಬೆಳೆದು ಸಾರ್ವಜನಿಕ ಜೀವನದೊಂದಿಗೆ ಬೆರೆತು ಬದುಕು ನಿರ್ಮಿಸಿಕೊಳ್ಳುತ್ತಾರೆ ಎಂದು ಹೇಳಿದರು.

ADVERTISEMENT

ಮುಖಂಡರಾದ ಯಶವಂತ ಚವಾಣ, ಶಂಕರಪ್ಪ ಮಳಲಿ, ಗೋವಿಂದಪ್ಪ ಗುಜ್ಜನ್ನವರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ‌ ಕಿವಡಿ, ಮಹಾಂತೇಶ ಮಾಚಕನೂರ, ಸದುಗೌಡ ಪಾಟೀಲ, ರಾಮಪ್ಪ‌ ಚವಾಣ, ಮಹೇಶ ಕಂಬಿ, ಭೀಮಶಿ‌ ಕಂಬಳಿ, ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲಪ್ಪ ಅಣ್ಣೋಜಿ, ಶಿವಾಜಿ ಕೊಣ್ಣೂರ, ಎಸ್ ಡಿಎಂಸಿ ಅಧ್ಯಕ್ಷ ಶಿವಯ್ಯ ಲಗಳಿ, ಉಪಾಧ್ಯಕ್ಷೆ ಕಸ್ತೂರಿ ಕೊಣ್ಣೂರ, ತಾಪಂ ಇಒ ಉಮೇಶ ಶಿದ್ನಾಳ, ಬಿಇಒ ಎಸ್.ಎಸ್. ಮುಲ್ಲಾ, ರಾಜಶೇಖರ ವಾರದ, ಲಕ್ಷ್ಮಣ ತಳವಾರ, ಮುದಕಣ್ಣ ಅಂಬಿಗೇರ, ಗ್ರಾಪಂ ಸದಸ್ಯೆ ಉಮಾ ಕೊಣ್ಣೂರ, ಉಪಾಧ್ಯಕ್ಷೆ ಕಸ್ತೂರಿ ಕೊಣ್ಣೂರ, ಮಹಾಲಿಂಗ ಪರೀಟ, ತಮ್ಮಣ್ಣ ಡಂಗಿ, ಕೃಷ್ಣಪ್ಪ ಮೇತ್ರಿ, ಸದಾಶಿವ ಕಿವಡನ್ನವರ, ಮಲ್ಲಪ್ಪ ಮಳಲಿ, ಮಲ್ಲಪ್ಪ ಬರಡ್ಡಿ, ಹನಮಂತ ಮಾದರ, ಎಸ್.ಎಂ.ಸುತಾರ ಇದ್ದರು.

ಮುಧೋಳ ತಾಲ್ಲೂಕು ಅಕ್ಕಿಮರಡಿ ಗ್ರಾಮದಲ್ಲಿ ಪ್ರೌಢಶಾಲೆ ಕೊಠಡಿ ಉನ್ನತೀಕರಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಭೂಮಿಪೂಜೆ ನೆರವೇರಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.