ಬೀಳಗಿ: ‘ಕನ್ನಡದ ಸಾಹಿತ್ಯಿಕ, ಸಾಂಸ್ಕೃತಿಕ ಕ್ಷೇತ್ರಕ್ಕೆ ಹಲವು ಕೊಡುಗೆ ನೀಡಿ ಈ ಕ್ಷೇತ್ರಗಳಿಗೆ ಭದ್ರ ಬುನಾದಿ ಹಾಕಿದವರು ಜೈನ ಸಮುದಾಯ’ ಎಂದು ತಹಶೀಲ್ದಾರ್ ವಿನೋದ ಹತ್ತಳ್ಳಿ ಹೇಳಿದರು.
ಸ್ಥಳೀಯ 1008 ಪಾರ್ಶ್ವನಾಥ ದಿಗಂಬರ ಜೈನ ಮಂದಿರದಲ್ಲಿ ಏರ್ಪಡಿಸಿದ್ದ 2624ನೇ ಭಗವಾನ್ ಮಹಾವೀರ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಜೈನ ಸಮುದಾಯಕ್ಕೆ ಸೇರಿದ ರತ್ನತ್ರಯರಲ್ಲಿ ಒಬ್ಬರಾದ ಕವಿ ಚಕ್ರವರ್ತಿ ರನ್ನ ನಮ್ಮ ಜಿಲ್ಲೆಯವರು ಎನ್ನುವುದು ಹೆಮ್ಮೆಯ ವಿಷಯ’ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ದೇವಿಂದ್ರ ಧನಪಾಲ, ‘ಅಂಹಿಸಾವಾದಿಗಳಾಗಿರುವ ಜೈನ್ ಸಮುದಾಯ ತ್ಯಾಗ, ಪ್ರೀತಿ, ಮಮತಾಮಯಿ ಗುಣ ಹೊಂದಿರುವರು’ ಎಂದರು.
ದಲಿತ ಸಂಘರ್ಷ ಸಮಿತಿಯ ಬೆಳಗಾವಿ ವಿಭಾಗಿಯ ಸಂಚಾಲಕ ಮಾಹಾದೇವ ಹಾದಿಮನಿ, ಸಿಪಿಐ ಎಚ್. ಜಿ.ಸಣಮನಿ ಮಾತನಾಡಿದರು.
‘ಜೈನ ಮಂದಿರದ ಎದುರು ಮಾನಸ್ತಂಭ ನಿರ್ಮಾಣವಾದಾಗ ಜೈನ ಮಂದಿರ ಪೂರ್ಣವಾಗುತ್ತದೆ. ಮಾನಸ್ತಂಭದ ನಿರ್ಮಾಣಕ್ಕೆ ಸರ್ಕಾರದಿಂದ ಸಹಾಯ ಸಹಕಾರ ನೀಡಬೇಕು’ ಎಂದು ಸಮಾಜದ ಮುಖಂಡರು ಅಧಿಕಾರಿಗಳಿಗೆ ವಿನಂತಿಸಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಮುತ್ತು ಬೊರ್ಜಿ, ರಾಜು ಜಡ್ರಾಂಕುಂಟಿ, ಭರತರಾಜ ಬೀಳಗಿ,ಆರ್.ಡಿ.ಅಣ್ಣಿಗೇರಿ, ಚಂದ್ರನಾಥ ಕೊಪ್ಪದ, ಅಜೀತ ಕೊಪ್ಪದ, ಎಸ್.ಸಿ.ಬಾಳಿಕಾಯಿ, ಲೋಹಿತ ಕೊಪ್ಪದ ಇದ್ದರು.
ಬೀಳಗಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಹಾವೀರ ಜಯಂತಿ ಆಚರಿಸಲಾಯಿತು. ಮುಖ್ಯಶಿಕ್ಷಕ ಹಾಗೂ ಸಿಬ್ಬಂದಿ ಇದ್ದರು.
ಗುಳೇದಗುಡ್ಡ ವರದಿ: ಪಟ್ಟಣದ ಭಂಡಾರಿ ಮತ್ತು ರಾಠಿ ಪದವಿ ಪೂರ್ವ ಕಾಲೇಜಿನಲ್ಲಿ ಮಹಾವೀರ ಜಯಂತಿ ಆಚರಿಸಲಾಯಿತು. ಪದವಿ ಪೂರ್ವ ಕಾಲೇಜು ವಿಭಾಗದ ಚೇರ್ಮನ್ ಸಿದ್ದಲಿಂಗಪ್ಪ ಬರಗುಂಡಿ ಮಹಾವೀರನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಪ್ರಾಚಾರ್ಯೆ ಅರ್ಚನಾ ದೊಡ್ಡಮನಿ ಕಾಲೇಜು ಸಿಬ್ಬಂದಿ ಇದ್ದರು.
‘ಮಹಾವೀರರ ಬೋಧನೆ ಸದಾ ಪ್ರಸ್ತುತ’
ರಾಂಪುರ: ‘ಅಹಿಂಸೆಯೇ ಪರಮೋಧರ್ಮ ಎಂದು ವಿಶ್ವಕ್ಕೆ ಸಾರಿದ ಭಗವಾನ ಮಹಾವೀರರ ಬೋಧನೆಗಳು ಸದಾಕಾಲ ಪ್ರಸ್ತುತ’ ಎಂದು ಸೋಮು ಕುರಿಗಾರ ಹೇಳಿದರು.
ಸಮೀಪದ ಶಿರೂರ ಪಟ್ಟಣ ಪಂಚಾಯಿತಿಯಲ್ಲಿ ಗುರುವಾರ ನಡೆದ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮಹಾವೀರರು ತೋರಿದ ದಾರಿ, ನೀಡಿದ ಜ್ಞಾನದ ಬೆಳಕು ಮನುಕುಲಕ್ಕೆ ಒಳಿತನ್ನು ಸಾರಿವೆ’ ಎಂದರು.
ಕುಮಾರಗೌಡ, ಎಚ್. ಐ.ಮ್ಯಾಗೇರಿ, ಈರಪ್ಪ ಗಿರಿಜಾ, ಅಣ್ಣಯ್ಯ ಎಮ್ಮಿಮಠ, ರಂಗಪ್ಪ ಅಂಗಡಿ, ವಾದಿರಾಜ ಕಡಿವಾಲ ಸೇರಿ ಪ.ಪಂ ಸಿಬ್ಬಂದಿ ಇದ್ದರು.
ಜೈನ ಮಂದಿರ: ಮಹಾಲಿಂಗಪುರದ ಡಬಲ್ ರಸ್ತೆಯಲ್ಲಿರುವ ಸುಮತಿನಾಥ ಜೈನ ಮಂದಿರದಲ್ಲಿ ಗುರುವಾರ ಮಹಾವೀರ ಜಯಂತಿ ಆಚರಿಸಲಾಯಿತು.
ಪುರಸಭೆ: ‘ಭಗವಾನ್ ಮಹಾವೀರರು ತಮ್ಮ ಬೋಧನೆಗಳ ಮೂಲಕ ಜನರಲ್ಲಿ ವೈಚಾರಿಕ ಬದಲಾವಣೆ ಉಂಟು ಮಾಡಿದರು’ ಎಂದು ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಹೇಳಿದರು.
ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಗುರುವಾರ ಮಹಾವೀರ ಜಯಂತಿ ಅಂಗವಾಗಿ ಅವರ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ‘ಮಹಾವೀರರು ಅಹಿಂಸೆ, ಸತ್ಯ, ಅಚೌರ್ಯ, ಬ್ರಹ್ಮಚರ್ಯ ಹಾಗೂ ಅಪರಿಗ್ರಹವೆಂಬ ಪಂಚಶೀಲ ತತ್ವವನ್ನು ಬೋಧಿಸಿದ್ದಾರೆ’ ಎಂದರು.
ಪುರಸಭೆ ಸದಸ್ಯ ಶೇಖರ ಅಂಗಡಿ, ಎಂ.ಕೆ.ದಳವಾಯಿ, ಎಸ್.ಬಿ.ಚೌಧರಿ, ಸುಮತಿನಾಥ ಜೈನ ಸಂಘದ ಖೇಮಚಂದ ಓಸವಾಲ, ಶಿವಲಾಲ ಜೈನ, ಜುಶರಾಜುಜಿ ಪೋರವಾಲ, ಕಾಂತಿಲಾಲಜಿ ಪೋರವಾಲ, ಅಶೋಕ ಓಸವಾಲ, ಕೇಸರಿಲಾಲ ಓಸವಾಲ, ಪಿಯೂಸ್ ಓಸವಾಲ, ಪಂಕಜ ಪೋರವಾಲ ಇದ್ದರು.
Cut-off box - ರಬಕವಿ: ಮಹಾವೀರರ ಭವ್ಯ ಮೆರವಣಿಗೆ ರಬಕವಿ ಬನಹಟ್ಟಿ: ಭಗವಾನ್ ಮಹಾವೀರ ಜಯಂತಿ ಅಂಗವಾಗಿ ಇಲ್ಲಿನ ಜೈನ ಸಮುದಾಯದಿಂದ ಗುರುವಾರ ಮಹಾವೀರರ ಭಾವಚಿತ್ರದ ಭವ್ಯ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಬೆಳಿಗ್ಗೆ ಜಮಖಂಡಿ ಕುಡಚಿ ಹೆದ್ದಾರಿಯ ಬದಿಯಿರುವ ಜೈನ ಬಸದಿಯಲ್ಲಿ ಜೈನ ಸಮುದಾಯದವರು ವಿಶೇಷ ಪೂಜೆ ನೆರವೇರಿಸಿದರು. ನಂತರ ಜೈನ ಬಸದಿಯಿಂದ ಮಹಾವೀರರ ಭಾವಚಿತ್ರದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಘಟ್ಟಗಿ ಬಸವೇಶ್ವರ ದೇವಸ್ಥಾನ ಜೈನ ಬಸದಿಯವರಿಗೆ ನಡೆಯಿತು. ಕೊಲ್ಲಾಪುರದಿಂದ ಆಗಮಿಸಿದ ಜಾಂಝ ತಂಡವು ಗಮನ ಸೆಳೆಯಿತು. ಸತೀಷ ಹಜಾರೆ ಮಾತನಾಡಿದರು. ಗಣಪತರಾವ ಹಜಾರೆ ಡಾ. ಅಭಯ ಎಂಡೊಳ್ಳಿ ಡಾ. ಅಭಯ ಡೋರ್ಲೆ ಶ್ರೀಮಂತ ಕಾನಗೊಂಡ ಪ್ರಸನ್ನ ಹಜಾರೆ ಧರೆಪ್ಪ ಉಳ್ಳಾಗಡ್ಡಿ ಡಾ. ಅನಂತಮತಿ ಎಂಡೊಳ್ಳಿ ಪ್ರಭಾವತಿ ಹಜಾರೆ ರಾಣಿ ಹಜಾರೆ ಚೌಗಲಾ ಪದ್ಮಾವತಿ ಹಜಾರೆ ಸುಶೀಲಾ ಹಿಪ್ಪರಗಿ ಸುಮತಿ ಬಸಪ್ರಭನ್ನವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.