ADVERTISEMENT

ಇಳಕಲ್: ಕಾಡುಕೋಣ ಓಡಾಟ; ಆತಂಕ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 6:01 IST
Last Updated 10 ಫೆಬ್ರುವರಿ 2026, 6:01 IST
ಹೊಲದಲ್ಲಿ ಕಂಡ ಕಾಡುಕೋಣ
ಹೊಲದಲ್ಲಿ ಕಂಡ ಕಾಡುಕೋಣ   

ಇಳಕಲ್: ತಾಲ್ಲೂಕಿನ ಬೂದಿಹಾಳ ಎಸ್.ಕೆ. ಗ್ರಾಮದ ಸುತ್ತಲಿನ ಹೊಲಗಳಲ್ಲಿ ಸೋಮವಾರ ಕಾಡುಕೋಣ ಓಡಾಟ ಕಂಡು ಬಂದಿದ್ದು, ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತರು ದೂರದಿಂದ ಕಾಡುಕೋಣ ಓಡಾಟದ ಚಿತ್ರ ಹಾಗೂ ವಿಡಿಯೊಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

3–4 ದಿನಗಳ ಹಿಂದೆ ತಾಲ್ಲೂಕಿನ ಕೃಷ್ಣಾಪುರ, ಮರಟಗೇರಿ, ಗೋನಾಳ ಎಸ್.ಕೆ., ಕಂದಗಲ್ ಗ್ರಾಮಗಳ ಸುತ್ತಮುತ್ತ ಚಿರತೆ ಓಡಾಡುತ್ತಿದೆ ಎಂಬ ವದಂತಿ ಹಬ್ಬಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಸುದ್ದಿ ಹರಡಿದ ಗ್ರಾಮಗಳಿಗೆ ತೆರಳಿ, ಹುಡುಕಾಟ ನಡೆಸಿ, ಮಾಹಿತಿ ಸಂಗ್ರಹಿಸಿದ್ದರು. ಚಿರತೆ ಓಡಾಟವನ್ನು ಖಚಿತಪಡಿಸುವ ಮಾಹಿತಿಗಳು ಇಲ್ಲ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.