
ಹುನಗುಂದ: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಮತ್ತು ಅವರ ಪಕ್ಷದ ಪದಾಧಿಕಾರಿಗಳು ಪದೇ ಪದೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ವಿವಿಧ ರೀತಿಯ ಸಂಚು ರೂಪಿಸಿ ಅವಮಾನ ಮಾಡುವುದನ್ನು ಖಂಡಿಸಿ ಇಳಕಲ್ ನಗರ ಮಂಡಲ ಹಾಗೂ ಗ್ರಾಮೀಣ ಮಂಡಲದ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಪಟ್ಟಣದ ಗ್ರೇಡ್ 2 ತಹಶೀಲ್ದಾರ್ ಮಹೇಶ ಸಂದಿಗೌಡ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
‘ಕಾಂಗ್ರೆಸ್ ನಾಯಕರು ರೂಪಿಸಿರುವ ಸಂಚಿನ ಭಾಗವಾಗಿ ಫೆ.8 ರಂದು ಕರ್ನಾಟಕ ಯೂತ್ ಕಾಂಗ್ರೆಸ್ಸಿನ ಪದಾಧಿಕಾರಿಗಳು ದೇಶದ ಪ್ರಧಾನ ಮಂತ್ರಿ ಅವರ ಭಾವಚಿತ್ರವನ್ನು ಬಳಸಿ ದೇಶದ ಸಂಸತ್ತಿಗೆ ಬರಲು ಧೈರ್ಯವಿಲ್ಲದ ಪುಕ್ಕಲ ದೇಶವನ್ನು ಹೇಗೆ ರಕ್ಷಿಸುತ್ತಾರೆ? ಎಂಬ ಸುಳ್ಳು ಸುದ್ದಿಯ ಬ್ಯಾನರ್ ನ್ನು ಸಂಸತ್ ಮುಂದೆ ಹಾಕಿದ್ದಾರೆ. ಪ್ರಧಾನಿ ಅವರನ್ನು ಅವಮಾನಿಸುತ್ತಿರುವ ಕಾಂಗ್ರೆಸ್ ಪಕ್ಷದ ನಾಯಕರ ಮತ್ತು ಕಾರ್ಯಕರ್ತರ ನಡೆಯನ್ನು ಬಿಜೆಪಿ ಮಹಿಳಾ ಮೋರ್ಚಾ ತೀವ್ರವಾಗಿ ಖಂಡಿಸುತ್ತದೆ. ಕಾಂಗ್ರೆಸ್ ಪಕ್ಷದ ನಾಯಕರು ಹೇಳಿಕೆಗಳು ಇದೇ ರೀತಿ ಮುಂದುವರಿದರೆ ಮಹಿಳಾ ಮೋರ್ಚಾದಿಂದ ಮುಂದಿನ ದಿನಗಳಲ್ಲಿ ರಾಜ್ಯದೆಲ್ಲಡೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸುತ್ತೇವೆ’ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷೆ ದೇವಮ್ಮ ಪಾಟೀಲ, ಸಂಗೀತಾ ಗದಗಿನ, ಭಾರತಿ ದೇಸಾಯಿ, ದೀಪಾ ಹಣಗಿ, ಶಾಂತಾ, ಜಳಕಿ, ಬಸವರಾಜ ಹುನುಕುಂಟಿ, ಶ್ರೀಶೈಲ ಇಮ್ರಾಪೂರ, ಕೆಂಚಪ್ಪ ಮಾದರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.