
ಕೆರೂರ: ‘ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿದ್ದರೂ ಅಧಿಕಾರಿ ಹಿಡಿಯುವಲ್ಲಿ ವಿಫಲವಾಗಿದ್ದು ಎಲ್ಲಿ ಎಂದು ಆತ್ಮಾಅವಲೋಕನ ಮಾಡಿಕೊಳ್ಳಬೇಕು’ ಎಂದು ರಾಜಕೀಯ ಮುಖಂಡ ಮಾಹಾಂತೇಶ ಮೇಣಸಗಿ ಹೇಳಿದರು.
ಪಟ್ಟಣದ ಹಳಪೇಟಿ ಬಡಾವಣೆಯ ಅಭಿಮಾನಿ ಬಳಗದವರು ಪ.ಪಂ ನೂತನ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರಿಗೆ ಭಾನುವಾರ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಸರ್ಕಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮೀಸಲಾತಿ ಆದೇಶ ಹೊರಡಿಸಿದ ಮೇಲೆ ಪಟ್ಟಣದಲ್ಲಿ ರಾಜಕೀಯ ಚಟುವಟಿಕೆಗಳು ದಿನಕ್ಕೊಂದು ತಿರುವು ಪಡೆದುಕೊಂಡವು. ಸದಸ್ಯರನ್ನು ಸವಾಲಿಗಿಟ್ಟ ಸಂದರ್ಭದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ನೋವಾಗಿ, ಬಂಡಾಯ ಅಭ್ಯರ್ಥಿಯಾಗಿ ಗೆಲ್ಲುವಂತಹ ಸ್ಥಿತಿ ನಿರ್ಮಾಣವಾಯಿತು’ ಎಂದರು.
‘ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಉಚ್ಚಾಟನೆ ಮಾಡುತ್ತಾ ಹೋದರೆ ಮುಂದೆ ನಿಮಗೆ ಓಟು ಹಾಕವವರು ಯಾರು? ಮೊದಲು ನೀವು ವಾಸ್ತವವನ್ನು ಅರಿತುಕೊಳ್ಳಿ’ ಎಂದು ಹೇಳಿದರು.
ನೂತನ ಅಧ್ಯಕ್ಷೆ ನಿರ್ಮಲಾ ಮದಿ ಮಾತನಾಡಿ, ‘ಅಧಿಕಾರ ಶಾಶ್ವತವಲ್ಲ ನಾವು ಮಾಡುವ ಸೇವೆ ಶಾಶ್ವತ. ಪಟ್ಟಣ ಅಬಿವೃದ್ದಿ ಹೊಂದಲು ಪ್ರತಿಯೊಬ್ಬರ ಸಹಕಾರ ಅಗತ್ಯ’ ಎಂದು ಹೇಳಿದರು.
ನಿವೃತ್ತ ಶಿಕ್ಷಕ ಬಿ.ಎಂ.ಬಂತಿ ಮಾತನಾಡಿದರು, ಸಾನ್ನಿಧ್ಯ ವಹಿಸಿದ್ದ ಶಿವುಕುಮಾರ ಸ್ವಾಮೀಜಿ, ರುದ್ರಮುನಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಪ.ಪಂ ಉಪಾಧ್ಯಕ್ಷ ಮೋದಿನಸಾಬ್ ಚಿಕ್ಕೂರ, ಪ.ಪಂ ಸದಸ್ಯ ಪರಶುರಾಮ ಮಲ್ಲಾಡದ, ಸದಾನಂದ ಮದಿ, ಬಸವರಾಜ ಹುಂಡೇಕಾರ, ಮಾಂತೇಶ ಕತ್ತಿ, ನಿಂಗಪ್ಪ ಬಡಿಗೇರ, ಧನಂಜಯ ಕಂದಕೂರ, ಬಸವರಾಜ ಮಠಪತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.