ADVERTISEMENT

ಸಕಲರ ಏಳಿಗೆ ಬಯಸುವುವರು ಬ್ರಾಹ್ಮಣರು: ಕೆ.ಎಸ್.ದೇಶಪಾಂಡೆ

​ಪ್ರಜಾವಾಣಿ ವಾರ್ತೆ
Published 29 ಮೇ 2023, 14:59 IST
Last Updated 29 ಮೇ 2023, 14:59 IST
ಮುದೋಳದ  ಶ್ರೀರಾಘವೇಂದ್ರಸ್ವಾಮಿ ಕಲ್ಯಾಣ ಮಂಟಪದಲ್ಲಿ ಭಾನುವಾರ ತಾಲ್ಲೂಕು ಬ್ರಾಹ್ಮಣ ಸಂಘ ಆಯೋಜಿಸಿದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಸನ್ಮಾನಿಸಲಾಯಿತು
ಮುದೋಳದ  ಶ್ರೀರಾಘವೇಂದ್ರಸ್ವಾಮಿ ಕಲ್ಯಾಣ ಮಂಟಪದಲ್ಲಿ ಭಾನುವಾರ ತಾಲ್ಲೂಕು ಬ್ರಾಹ್ಮಣ ಸಂಘ ಆಯೋಜಿಸಿದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಸನ್ಮಾನಿಸಲಾಯಿತು   

ಮುಧೋಳ: ಅಪಾರವಾದ ದೇಶಭಕ್ತಿ ಹೊಂದಿರುವ ಬ್ರಾಹ್ಮಣ ಸಮಾಜದವರು ನಮ್ಮ ಹಿರಿಯರು ನಡೆಸಿಕೊಂಡು ಬಂದಂತಹ ತಮ್ಮ ಪಾಂಡಿತ್ಯದ ಸದ್ಬಳಿಕೆ ಮಾಡಿಕೊಂಡು ಸಮಾಜದ ಎಳಿಗೆ ಸಾಧಿಸಿ ಸರ್ವೇ ಜನಹಃ ಸುಖಿನೋ ಭವತು ಎಂದು ಬಾಳುತ್ತಿದ್ದೇವೆ. ಆದರೆ ಸಂಘಟನೆಯ ಕೊರತೆ, ಸಮಾಜದ ಇನ್ನೂಬ್ಬರ ಎಳಿಗೆ ಸಹಿಸದಿರುವುದು ಒಳ್ಳೆಯದಲ್ಲ ಎಂದು ಬ್ರಾಹ್ಮಣ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ದೇಶಪಾಂಡೆ ಹೇಳಿದರು.

ಅವರು ಭಾನುವಾರ ಶ್ರೀರಾಘವೇಂದ್ರಸ್ವಾಮಿ ಕಲ್ಯಾಣ ಮಂಟಪದಲ್ಲಿ ಭಾನುವಾರ ತಾಲ್ಲೂಕು ಬ್ರಾಹ್ಮಣ ಸಂಘ ಆಯೋಜಿಸಿದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ವಾನ್ ಪಾಂಡುರಂಗಾಚಾರ್ಯ ಜೋಷಿ ಮಾತನಾಡಿ ಪಾಶ್ಚಿಮಾತ್ಯ ಸಂಸ್ಕೃತಿ ಮೋಹಕ್ಕೆ ಭಾರತೀಯ ಸಂಸ್ಕೃತಿಗಳ ಕಡೆಗಣನೆ ಬೇಡ, ವಿದ್ಯಾರ್ಥಿದಶೆಯಲ್ಲಿ ಕೇವಲ ವಿದ್ಯೆಯ ಬಗ್ಗೆ ಲಕ್ಷ ವಹಿಸಬೇಕು. ಅನ್ಯ ಚಟುವಟಿಕೆ ಬೇಡ ಎಂದು ಹೇಳಿದರು.

ADVERTISEMENT

ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಅಣ್ಣಾರಾವ (ರಾಘವೇಂದ್ರ) ಕುಲಕರ್ಣಿ ಅಧ್ಯಕ್ಷವಹಿಸಿ ಮಾತನಾಡಿದರು. ವಿದ್ವಾನ ವಿಠಲಭಟ್ ಕವಟೇಕರ, ಜಿಲ್ಲಾ ಘಟಕದ ಉಪಾಧ್ಯಕ್ಷ ಸೋನಪ್ಪಿ ಕುಲಕರ್ಣಿ, ಪಂ.ರಾಘವಾಚಾರ್ಯ ಮುತ್ತಿ, ಋಷಿಕೇಶಾಚಾರ್ಯ ಜೋಷಿ ಮಾತನಾಡಿದರು.

ಪ್ರಮೋದ ಬಾಜಿ, ಬಿ.ಎಲ್ ಬಬಲಾದಿ ವೇದಿಕೆಯಲ್ಲಿದ್ದರು. ಸಂತೋಷ ದೇಶಪಾಂಡೆ ಸ್ವಾಗತಿಸಿದರು. ಸುನೀತಾ ದೇಶಪಾಂಡೆ ನಿರೂಪಿಸಿದರು. ಆನಂದ ಜೇರೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.