ADVERTISEMENT

ಸೇತುವೆ ಕಾಮಗಾರಿ ತ್ವರಿತ ಆರಂಭಕ್ಕೆ ಆಗ್ರಹ ಉಪವಾಸ ಸತ್ಯಾಗ್ರಹ

ಕಾಮಗಾರಿ ಆರಂಭವಾಗುವವರೆಗೆ ಉಪವಾಸ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 8:48 IST
Last Updated 17 ಡಿಸೆಂಬರ್ 2025, 8:48 IST
ರಬಕವಿ ಬನಹಟ್ಟಿ ಸಾರ್ವಜನಿಕರು ಸಮೀಪದ ಕೃಷ್ಣಾ ನದಿಗೆ ಮಹೀಷವಾಡಗಿ ಸೇತುವೆ ಕಾಮಗಾರಿಯನ್ನು ತ್ವರಿತವಾಗಿ ಆರಂಭಿಸುವುದಕ್ಕೆ ಆಗ್ರಹಿಸಿ ಹಮ್ಮಿಕೊಂಡ ಉಪವಾಸ ಸತ್ಯಾಗ್ರಹದಲ್ಲಿ ರವಿ ಜಮಖಂಡಿ ಮಾತನಾಡಿದರು
ರಬಕವಿ ಬನಹಟ್ಟಿ ಸಾರ್ವಜನಿಕರು ಸಮೀಪದ ಕೃಷ್ಣಾ ನದಿಗೆ ಮಹೀಷವಾಡಗಿ ಸೇತುವೆ ಕಾಮಗಾರಿಯನ್ನು ತ್ವರಿತವಾಗಿ ಆರಂಭಿಸುವುದಕ್ಕೆ ಆಗ್ರಹಿಸಿ ಹಮ್ಮಿಕೊಂಡ ಉಪವಾಸ ಸತ್ಯಾಗ್ರಹದಲ್ಲಿ ರವಿ ಜಮಖಂಡಿ ಮಾತನಾಡಿದರು   

ರಬಕವಿ ಬನಹಟ್ಟಿ: ಸಮೀಪದ ಕೃಷ್ಣಾ ನದಿಗೆ ನಿರ್ಮಾಣ ಮಾಡುತ್ತಿರುವ ಸೇತುವೆ ಕಾಮಗಾರಿ ಆರಂಭವಾಗಿ ಒಂದು ದಶಕ ಕಳೆದರೂ ಈ ವರೆಗೂ ಪೂರ್ಣಗೊಂಡಿಲ್ಲ. ಇದರಿಂದಾಗಿ ರಬಕವಿ ಬನಹಟ್ಟಿ ಹಾಗೂ ಅಥಣಿ ತಾಲ್ಲೂಕಿನ ಪ್ರಮುಖ ನಗರ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ತೊಂದರೆಯಾಗಿದೆ. ಕಾಮಗಾರಿ ಆರಂಭವಾಗುವವರೆಗೆ ಉಪವಾಸ ಸತ್ಯಾಗ್ರಹವನ್ನು ಮುಂದುವರೆಸಲಾಗುವುದು ಎಂದು ರಬಕವಿಯ ಸಾಮಾಜಿಕ ಕಾರ್ಯಕರ್ತ ರವಿ ಜಮಖಂಡಿ ತಿಳಿಸಿದರು.

ಇಲ್ಲಿನ ಶಂಕರಲಿಂಗ ದೇವಸ್ಥಾನದ ಮುಂಭಾಗದಲ್ಲಿ ಸಮೀಪದ ಕೃಷ್ಣಾ ನದಿಗೆ ಸೇತುವೆ ನಿರ್ಮಾಣ ಕಾಮಗಾರಿಯನ್ನು ತ್ವರಿತವಾಗಿ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಂಗಳವಾರ ಹಮ್ಮಿಕೊಂಡ ಉಪವಾಸ ಸತ್ಯಾಗ್ರಹದಲ್ಲಿ ಮಾತನಾಡಿದರು.

‘ಸಚಿವೆ ಉಮಾಶ್ರೀ ದಶಕಗಳ ಹಿಂದೆ ಲೋಕೋಪಯೋಗಿ ಸಚಿವರಾಗಿದ್ದ ಎಚ್.ಸಿ. ಮಹಾದೇವಪ್ಪನವರಿಂದ ಯೋಜನೆಗೆ ಅಂದಾಜು ₹ 36 ಕೋಟಿ ಹಣವನ್ನು ಮಂಜೂರು ಮಾಡಿಸಿದ್ದರು. ನಂತರ ಹಲವಾರು ತಾಂತ್ರಿಕ ಕಾರಣಗಳಿಂದಾಗಿ ಸೇತುವೆ ಕಾಮಗಾರಿ ಸ್ಥಗಿತಗೊಂಡಿತು. ನಂತರ ಮತ್ತೆ ಶಾಸಕ ಸಿದ್ದು ಸವದಿ ₹10 ಕೋಟಿ ಮಂಜೂರು ಮಾಡಿಸಿದರು ಎಂದು ಹೇಳಿದರು.

ADVERTISEMENT

‘ಕಾಮಗಾರಿಯನ್ನು ತ್ವರಿತವಾಗಿ ಕೈಗೊಳ್ಳಲು ಬಾಗಲಕೋಟೆ ಜಿಲ್ಲಾಧಿಕಾರಿಗೆ ಮತ್ತು ಜಮಖಂಡಿ ಉಪವಿಭಾಗಾಧಿಕಾರಿಗೂ ಹಲವು ಸಲ ಮನವಿ  ಸಲ್ಲಿಸಲಾಗಿತ್ತು. ನಂತರ ಲೋಕೋಪಯೋಗಿ ಸಚಿವ ಸತೀಶ ಜಾರಿಕಿಹೊಳಿ ಅವರು ಕೂಡಾ ಸೇತುವೆ ಕಾಮಗಾರಿಯನ್ನು ಎರಡು ಬಾರಿ ಪರಿಶೀಲನೆ ಮಾಡಿದ್ದರು. ಇದೇ ಡಿಸೆಂಬರ್ ಒಳಗಾಗಿ ಸೇತುವೆ ಕಾಮಗಾರಿಯನ್ನು ಮುಕ್ತಾಯಗೊಳಿಸುವುದಾಗಿಯೂ ಭರವಸೆ ನೀಡಿದ್ದರು. ಆದರೆ ಸೇತುವೆ ಕಾಮಗಾರಿ ಪೂರ್ಣಗೊಂಡಿಲ್ಲ’ ಎಂದು ವಿವರಿಸಿದರು.

ಸಂಗಪ್ಪ ಕುಂದಗೋಳ, ರಾಜೇಂದ್ರ ಭದ್ರನವರ, ಶಂಕರ ಕೆಸರಗೊಪ್ಪ, ಬನಹಟ್ಟಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಬದರಿನಾರಾಯಣ ಭಟ್ಟಡ, ಕಾರ್ಯದರ್ಶಿ ಈರಣ್ಣ ಬಾಣಕಾರ ನೀಲಕಂಠ ಮುತ್ತೂರು, ಬ್ರಿಜ್ಮೋಹನ ಡಾಗಾ, ಮಹಾವೀರ ದಾನಿಗೊಂಡ, ಮಹಾದೇವ ಗಿಡದಾನಪ್ಪಗೋಳ ಮಾತನಾಡಿದರು.

ಧರೆಪ್ಪ ಉಳ್ಳಾಗಡ್ಡಿ, ಭೀಮಶಿ ಪಾಟೀಲ, ಬಾಬು ಮಹಾಜನ, ಬಸವರಾಜ ತೆಗ್ಗಿ, ಮುರಳಿ ಕಾಬರಾ, ಗಿರೀಶ ಕಾಡದೇವರ, ರಾಮಣ್ಣ ಹುಲಕುಂದ, ಚಿದಾನಂದ ಸೊಲ್ಲಾಪುರ, ಶಿವಾನಂದ ಬಾಗಲಕೋಟಮಠ, ಶ್ರೀಶೈಲ ಧಬಾಡಿ, ಇದ್ದರು.

ಸೇತುವೆ ಕಾಮಗಾರಿಯನ್ನು ಬೇಗ ಮುಕ್ತಾಯ ಮಾಡಲು ಸಂಬಂಧಪಟ್ಟವರು ಗಮನ ನೀಡಬೇಕು
– ಸುರೇಶ ಚಿಂಡಕ, ಬನಹಟ್ಟಿ ನಗರದ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.