ಬಾಗಲಕೋಟೆ: ಇಲ್ಲಿನ ಕೂಡಲಸಂಗಮದ ಬಸವಧರ್ಮ ಪೀಠ ಮಾತೆ ಮಹಾದೇವಿ ಅವರ ಹೆಸರಿನಲ್ಲಿ ಈ ವರ್ಷ ಆರಂಭಿಸಿರುವ ‘ಬಸವಾತ್ಮಜೆ’ಪ್ರಶಸ್ತಿಯನ್ನು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಅವರಿಗೆ ನೀಡಲಾಗುತ್ತಿದೆ. ಪ್ರಶಸ್ತಿ ಮೊತ್ತ ₹51 ಸಾವಿರ ಹಾಗೂ ಸ್ಮರಣಿಕೆ ಒಳಗೊಂಡಿದೆ.
ಜನವರಿ 13ರಂದು ಕೂಡಲಸಂಗಮದಲ್ಲಿ ಶರಣಮೇಳ ಉದ್ಘಾಟಿಸಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಬಸವಧರ್ಮಪೀಠದ ಅಧ್ಯಕ್ಷೆ ಮಾತೆ ಗಂಗಾದೇವಿ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದೇ ವೇಳೆ ಬೆಂಗಳೂರಿನ ಎನ್.ಪುಟ್ಟರುದ್ರ ಹಾಗೂ ಬೀದರ್‌ನ ಕಾಶಪ್ಪ ಧನ್ನೂರ ಅವರಿಗೆ ಶರಣ ಕಾಯಕ ರತ್ನ, ಹಿರಿಯ ವಕೀಲ ಜೆ.ಜೈರಾಜ್ ಅವರಿಗೆ ಕ್ರೀಡಾ ರತ್ನ ಪ್ರಶಸ್ತಿ ನೀಡಲಾಗುವುದು ಎಂದರು.
ಜನವರಿ 11ರಿಂದ 14ರವರೆಗೆ ಕೂಡಲಸಂಗಮದಲ್ಲಿ ಶರಣ ಮೇಳ ನಡೆಯಲಿದೆ.ಜನವರಿ 13ರಂದು ಬಸವಧರ್ಮ ಪೀಠದಲ್ಲಿಮಾತೆ ಮಹಾದೇವಿ ಅವರ ಮೂರ್ತಿಯನ್ನು ಹರಿದ್ವಾರದ ಪತಂಜಲಿ ಯೋಗ ಪೀಠದ ಸಂಸ್ಥಾಪಕ ಅಧ್ಯಕ್ಷ ಬಾಬಾ ರಾಮದೇವ ಅನಾವರಣ ಮಾಡುವರು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.