
ಪ್ರಜಾವಾಣಿ ವಾರ್ತೆ
ಬೀಳಗಿ: ಸ್ಥಳೀಯ ಕಿಲ್ಲಾ ಗಲ್ಲಿಯಲ್ಲಿರುವ ಬಾವಿಯಲ್ಲಿ ಬಿದ್ದ ಸಾಕು ಬೆಕ್ಕೊಂದನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
50 ಅಡಿ ಆಳದ ಬಾವಿಯಲ್ಲಿ ಬೆಕ್ಕು ಬಿದ್ದದ್ದನ್ನು ಕಂಡು ಸಾರ್ವಜನಿಕರು ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದಾಗ ತಕ್ಷಣ ಸಿಬ್ಬಂದಿ ಜಲವಾಹನದೊಂದಿಗೆ ಘಟನಾ ಸ್ಥಳಕ್ಕೆ ಆಗಮಿಸಿದರು. ಹಗ್ಗದ ಸಹಾಯದಿಂದ ಬಾವಿಗೆ ಇಳಿದು ಬೆಕ್ಕನ್ನು ರಕ್ಷಣೆ ಮಾಡಿ ಕಿಲ್ಲಾ ಓಣಿಯ ಹಿರಿಯರಿಗೆ ಒಪ್ಪಿಸಿ ಮಾನವೀಯತೆ ಮೆರೆದರು.
ಕಾರ್ಯಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿಗಳಾದ ಮಗತುಮ ನದಾಫ, ಬಸವರಾಜ ಹೂಗಾರ, ಮಹಾದೇವ ಮಾಗಿ, ಫಾರೂಕ ಹುಡೇದ, ಕಲ್ಲಪ್ಪ ಮಾದರ ,ಮೂರ್ತ್ಯಪ್ಪ ದೊಡ್ಡಮನಿ, ಶಿವು ಬಗಲಿ, ಲಿಂಗಾರೂಡ ಹಳ್ಳೂರ, ಆನಂದ ಗುಂಜಿ ಇದ್ದರು.