ADVERTISEMENT

ರಾಜ್ಯ‌ ಸರ್ಕಾರ ಅಸ್ಥಿರಕ್ಕೆ ಕೇಂದ್ರ‌ ಯತ್ನ: ಬೈರೇಗೌಡ ಆರೋಪ

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 9:43 IST
Last Updated 30 ಜುಲೈ 2024, 9:43 IST
<div class="paragraphs"><p>ಬಾಗಲಕೋಟೆ ಜಿಲ್ಲೆಯ ಯಾದವಾಡ ಸೇತುವೆ ಮುಳುಗಿರುವ ದನ್ನು ಮಂಗಳವಾರ ಸಚಿವ ಕೃಷ್ಣ ಬೈರೇಗೌಡ ವೀಕ್ಷಿಸಿದರು</p></div>

ಬಾಗಲಕೋಟೆ ಜಿಲ್ಲೆಯ ಯಾದವಾಡ ಸೇತುವೆ ಮುಳುಗಿರುವ ದನ್ನು ಮಂಗಳವಾರ ಸಚಿವ ಕೃಷ್ಣ ಬೈರೇಗೌಡ ವೀಕ್ಷಿಸಿದರು

   

ಬಾಗಲಕೋಟೆ: ಕೇಂದ್ರವು ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ ಖಂಡಿಸಿ ಹೋರಾಟ ಮಾಡುತ್ತಿರುವ ಹಿನ್ನಲೆಯಲ್ಲಿ ರಾಜ್ಯಪಾಲರನ್ನು ಬಳಸಿಕೊಂಡು ರಾಜ್ಯ ಸರ್ಕಾರ ಅಸ್ಥಿರಗೊಳಿಸುವ ಕೆಲಸ ಮಾಡಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ‌ ಅವರು, ರಾಜ್ಯದ ಜನರ ಆಶೀರ್ವಾದ ಹಾಗೂ ಸಂವಿಧಾನದ ರಕ್ಷಣೆ ಇರುವುದರಿಂದ ಏನು ಆಗುವುದಿಲ್ಲ ಎಂದರು.

ADVERTISEMENT

ವಾಮಮಾರ್ಗದ ಮೂಲಕ ಸರ್ಕಾರ ಉರುಳಿಸಲು ಸಾಧ್ಯವಾಗುವದಿಲ್ಲ. ಕಾನೂನು, ಜನರ ನಡುವೆ ಹೋಗಿ‌ ಕೇಂದ್ರದ ವಿರುದ್ಧ ಹೋರಾಟ ಮುಂದುವರಿಸಲಿದ್ದೇವೆ ಎಂದರು.

ರಾಜ್ಯದಲ್ಲಿ ಜನರು ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿರುವುದರಿಂದ ಕ್ಷೇತ್ರಗಳ ಪುನರ್ ವಿಂಗಡಣೆ ಮೂಲಕ ಸಂಸದರ‌ ಸ್ಥಾನಗಳನ್ನು ಕಡಿಮೆ ಮಾಡಲು ಬಿಜೆಪಿ ಮುಂದಾಗಿದೆ ಎಂದು ಆರೋಪಿಸಿದರು.

ಭದ್ರಾ‌ ಮೇಲ್ದಂಡೆ ಯೋಜನೆಗೆ ಘೋಷಿಸಿದ್ದ ಅನುದಾನ ಬಿಡುಗಡೆ ಮಾಡಿಲ್ಲ. ಕೆಆರ್ ಎಸ್ ಜಲಾಶಯ ತುಂಬಿ ಲಕ್ಷಾಂತರ ಕ್ಯುಸೆಕ್ ನೀರು ಹರಿದು ಹೋಗುತ್ತಿದೆ. ಮೇಕೆದಾಟು ಯೋಜನೆಗೆ‌ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಕಳಸಾ ಬಂಡೂರಿ ಯೋಜನೆಗೆ ಸಚಿವ ಪ್ರಹ್ಲಾದ ಜೋಶಿ ಅನುಮತಿ ಕೊಡಿಸಿಲ್ಲ‌ ಎಂದು ವಾಗ್ದಾಳಿ ನಡೆಸಿದರು

ರಾಜ್ಯದ ಬಿಜೆಪಿ ನಾಯಕರು ಪಾದಯಾತ್ರೆ ಮೂಲಕ‌ ಜನರ ‌ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಮುಡಾ ವಿಷಯದಲ್ಲಿ ಯಾವುದೇ ತಪ್ಪು ಆಗಿಲ್ಲ. ಮಾಲೀಕರಿಗೆ ಗೊತ್ತಿಲ್ಲದೆ‌ ಅವರ ಭೂಮಿಯನ್ನು ನಿವೇಶನವಾಗಿ ಪರಿವರ್ತಿಸಿದ್ದು ಯಾರು? ಬಿಜೆಪಿ ಸರ್ಕಾರದಲ್ಲಿಯೇ ಪರ್ಯಾಯ ನಿವೇಶನಗಳನ್ನು ನೀಡಲಾಗಿದೆ. ಆದರೂ ಗಿಮಿಕ್ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ತಪ್ಪಿಲ್ಲದಿದ್ದರೂ ತನಿಖೆ ಮಾಡಿಸಲಾಗುತ್ತಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣ ವರ್ಗಾವಣೆ ಆಗಿರುವುದು ನಿಜ.‌ ಅದೂ ತನಿಖೆಯಾಗುತ್ತಿದೆ. ಜಾರಿ ನಿರ್ದೇಶನಾಲಯವೂ ತನಿಖೆ‌ ಮಾಡುತ್ತಿದೆ.‌ ಸತ್ಯಾಂಶ ಹೊರಬರಲಿದೆ. ಅಲ್ಲಿಯವೆರೆಗೆ ತಾಳ್ಮೆಯಿಂದಿರಬೇಕು‌ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.