ಮಹಾಲಿಂಗಪುರ: ಸಮೀಪದ ಮದಭಾವಿಯಲ್ಲಿ ರಾಣಿ ಚನ್ನಮ್ಮ ಕಮಿಟಿ ಹಾಗೂ ರಬಕವಿ-ಬನಹಟ್ಟಿ ತಾಲ್ಲೂಕು ಪಂಚಮಸಾಲಿ ಸಮಾಜದಿಂದ ಕಿತ್ತೂರ ಚನ್ನಮ್ಮ 247ನೇ ಜಯಂತ್ಯುತ್ಸವ, 201ನೇ ವಿಜಯೋತ್ಸವ ಹಾಗೂ ಚನ್ನಮ್ಮ ವೃತ್ತದಲ್ಲಿ ಚನ್ನಮ್ಮ ಕಂಚಿನ ಮೂರ್ತಿ ಅನಾವರಣ ಕಾರ್ಯಕ್ರಮ ಅ.4ರಂದು ನಡೆಯಲಿದೆ.
ಪಟ್ಟಣದಲ್ಲಿ ಪಂಚಮಸಾಲಿ ಸಮಾಜದ ಮುಖಂಡರು ಶನಿವಾರ ಕಾರ್ಯಕ್ರಮದ ಪ್ರಚಾರ ಸಾಮಗ್ರಿ ಬಿಡುಗಡೆಗೊಳಿಸಿ ಮಾತನಾಡಿ, ಅಂದು ಬೆಳಿಗ್ಗೆ ಸೀಮಿಲಕ್ಕಮ್ಮ ದೇವಸ್ಥಾನದಿಂದ ಚನ್ನಮ್ಮ ವೃತ್ತದ ವರೆಗೆ ಆರತಿ, ಪೂರ್ಣಕುಂಭ, ರೊಟ್ಟಿ ಬುತ್ತಿ, ಎತ್ತಿನ ಬಂಡಿ ಹಾಗೂ ಸಕಲ ವಾದ್ಯ ಮೇಳದೊಂದಿಗೆ ಚನ್ನಮ್ಮ ಚಿತ್ರದ ಮೆರವಣಿಗೆ ನಡೆಯಲಿದೆ. ನಂತರ ಚನ್ನಮ್ಮ ಮೂರ್ತಿ ಅನಾವರಣಗೊಳ್ಳಲಿದೆ ಎಂದರು.
ಮದಭಾವಿಯ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಕಾರ್ಯಕ್ರಮ ಉದ್ಘಾಟನೆ ನಡೆಯಲಿದ್ದು, ಬಸವ ಜನಮೃತ್ಯುಂಜಯ ಸ್ವಾಮೀಜಿ, ಪುರುಷೋತ್ತಾಮಾನಂದ ಪುರಿ ಸ್ವಾಮೀಜಿ, ಸಿದ್ದಯೋಗಿ ಅಮರೇಶ್ವರ ಸ್ವಾಮೀಜಿ, ನಾಗಯ್ಯ ಮಠಪತಿ ಸಾನಿಧ್ಯ, ಬಸನಗೌಡ ಪಾಟೀಲ ಯತ್ನಾಳ ಅಧ್ಯಕ್ಷತೆ ವಹಿಸುವರು ಎಂದರು.
ಪಂಚಮಸಾಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಧರೆಪ್ಪ ಸಾಂಗಲಿಕರ, ಮದಭಾವಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ ನಾಗನೂರ, ಪರಪ್ಪ ಹುದ್ದಾರ, ಚನ್ನಪ್ಪ ಪಟ್ಟಣಶೆಟ್ಟಿ, ಮಹಾದೇವ ಮಾರಾಪುರ, ಕಮೀಟಿ ಅಧ್ಯಕ್ಷ ಸದಾಶಿವ ಪಟ್ಟಣಶೆಟ್ಟಿ, ಉಪಾಧ್ಯಕ್ಷ ಶಿವಪ್ಪ ಉರಬಿನವರ, ಕಾರ್ಯದರ್ಶಿ ಶ್ರೀಶೈಲ ಒಂಟಿ, ಖಜಾಂಚಿ ವಿನೋದ ಉಳ್ಳೇಗಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.