ADVERTISEMENT

ವಿಶ್ವ ಆಳುವ ಶಕ್ತಿ ಮಗುವಿಗಿದೆ: ಕುರೇರ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 5:44 IST
Last Updated 4 ಫೆಬ್ರುವರಿ 2026, 5:44 IST
ಗುಳೇದಗುಡ್ಡದ ನೆಹರೂ ಅಂತರರಾಷ್ಟ್ರೀಯ ಪಬ್ಲಿಕ್‌ ಶಾಲೆಯಲ್ಲಿ ಶನಿವಾರ ಜರುಗಿದ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿದರು
ಗುಳೇದಗುಡ್ಡದ ನೆಹರೂ ಅಂತರರಾಷ್ಟ್ರೀಯ ಪಬ್ಲಿಕ್‌ ಶಾಲೆಯಲ್ಲಿ ಶನಿವಾರ ಜರುಗಿದ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿದರು   

ಗುಳೇದಗುಡ್ಡ: ‘ಮಗುವಿಗೆ ಅವರ ಶಕ್ತಿ ಅರಿಯುವಂತೆ ಶಿಕ್ಷಕರು ಮಾಡಬೇಕು. ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮಾರ್ಗದರ್ಶನ ನೀಡಬೇಕು. ಮಗುವಿನ ಸರ್ವಾಂಗೀನ ವಿಕಾಸವಾದರೆ ವಿಶ್ವ ಆಳುವ ಶಕ್ತಿ ಮಗುವಿನಲ್ಲಿದೆ’ ಎಂದು ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಹೇಳಿದರು.

ಪಟ್ಟಣದ ನೆಹರೂ ಅಂತರರಾಷ್ಟ್ರೀಯ ಪಬ್ಲಿಕ್‌ ಶಾಲೆಯಲ್ಲಿ ಶನಿವಾರ ಜರುಗಿದ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.

‘ಮಗುವಿಗೆ ಆಸಕ್ತಿ ಕ್ಷೇತ್ರ ಗುರುತಿಸಿ ಮಾರ್ಗದರ್ಶನ ನೀಡಬೇಕು. ಶಿಕ್ಷಣದಲ್ಲಿ ಮೌಲ್ಯ ಮತ್ತು ಸಂಸ್ಕಾರ ನೀಡಬೇಕು ಮತ್ತು ಮೊಬೈಲ್‌ ಗೀಳಿನಿಂದ ದೂರ ಇಟ್ಟಾಗ ಉತ್ತಮ ಸಾಧನೆ ಮಾಡಲು ಸಾಧ್ಯ’ ಎಂದು ಹೇಳಿದರು.

ADVERTISEMENT

ಜಿಲ್ಲಾ ಪೊಲೀಸ್‌ ವರಿಷ್ಠಧಿಕಾರಿ ಸಿದ್ದಾರ್ಥ ಗೋಯಲ್‌ ಮಾತನಾಡಿ, ‘ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಮತ್ತು ಸಂಸ್ಥೆಯ ಪಾತ್ರ ದೊಡ್ಡದು. ಮಕ್ಕಳು ಆನ್‌ಲೈನ್‌ ಗೇಮ್‌ ಆಡದಂತೆ ನೋಡಿಕೊಳ್ಳಬೇಕು. ಮಕ್ಕಳಿಗೆ ಹಲವು ಉತ್ತಮ ಅಭಿರುಚಿ ಬೆಳೆಸಿ ಸಾಧನೆಯನ್ನು ಮಾಡುವ ವಾತಾವರಣ ಕಲ್ಪಿಸಬೇಕು’ ಎಂದು ಹೇಳಿದರು.

ಚಿತ್ರನಟಿ ಶರಣ್ಯ ಶೆಟ್ಟಿ ಮಾತನಾಡಿದರು. ಎಸ್.‌ಎಸ್.‌ಎಲ್‌.ಸಿ ಸಾಧಕರನ್ನು, ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದ ಸಾಧಕರನ್ನು ಗೌರವಿಸಲಾಯಿತು. ವಿರೇಶ ಅಂಗಡಿ ರಚಿಸಿದ ‘ಚಾಲುಕ್ಯ ಪ್ರವಾಸಿ ಮಾರ್ಗದರ್ಶಿ’ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು. ನಂತರ ಇತ್ತೀಚಿಗೆ ನಿಧನರಾದ ಬಾಗಲಕೋಟೆ ಶಾಸಕ ದಿ.ಎಚ್.ವೈ. ಮೇಟಿಯವರ ಚಿತ್ರಕ್ಕೆ ಪುಷ್ಪಾರ್ಪಣೆ ಮಾಡಲಾಯಿತು.

ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹೊಳೆಬಸು ಶೆಟ್ಟರ, ಕುಮಾರೇಶ್ವರ ಸಹಕಾರ ಸಂಘದ ಅಧ್ಯಕ್ಷ ಎಂ.ಬಿ. ಹಂಗರಗಿ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪಿ.ಆರ್.ಗೌಡರ, ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಸರಗಣಾಚಾರಿ, ಉಪಾಧ್ಯಕ್ಷ ವಿರೇಶ ಚಿಂದಿ, ಮಲ್ಲಿಕಾರ್ಜುನ ಮೇಟಿ, ಪಕ್ವಾನ್‌ ಗ್ರುಫ್‌ ಮುಖ್ಯಸ್ಥ ಪವನ್‌ ಸೀಮಿಕೇರಿ, ಪ್ರಾಚಾರ್ಯ ಮಹೇಶ ಸರೋದೆ, ಎಂ.ಬಿ. ಕುಬಕಡ್ಡಿ, ಶಿವಾನಂದ ಯರಗಲ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.