ಮಹಾಲಿಂಗಪುರ: ‘ಶುಚಿತ್ವಕ್ಕೆ ಆದ್ಯತೆ ಕೊಡದೇ ಉದಾಸೀನ ಪ್ರವೃತ್ತಿ ಬೆಳೆಸಿಕೊಳ್ಳುವುದರಿಂದ ರೋಗಗಳಿಗೆ ತುತ್ತಾಗಬೇಕಾಗುತ್ತದೆ. ಉದ್ಯಾನದ ಶುಚಿತ್ವಕ್ಕೆ ಹೆಚ್ಚು ಮಹತ್ವ ನೀಡಿ ಆರೋಗ್ಯವಂತ ನಾಡು ನಿರ್ಮಾಣಕ್ಕೆ ಸಹಕರಿಸಬೇಕು’ ಎಂದು ಪುರಸಭೆ ಸಮುದಾಯ ಸಂಘಟನಾಧಿಕಾರಿ ಸಿ.ಎಸ್. ಮಠಪತಿ ಹೇಳಿದರು.
ಕೇಂದ್ರ ಪುರಸ್ಕೃತ ಅಮೃತ 2.0 ಯೋಜನೆಯ ಅಮೃತ ಮಿತ್ರ ಕಾರ್ಯಕ್ರಮದಡಿ ಪಟ್ಟಣದ ಪುರಸಭೆ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಪರಿಕರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಪಟ್ಟಣದ ರಬಕವಿ ರಸ್ತೆ ಹಾಗೂ ಮಹಾಂತೇಶ ನಗರದಲ್ಲಿನ ತಲಾ ಎರಡು ಉದ್ಯಾನಗಳ ನಿರ್ವಹಣೆಗೆ ನಾಲ್ಕು ಮಹಿಳಾ ಸ್ವ-ಸಹಾಯ ಸಂಘಗಳನ್ನು ಯೋಜನೆಯಡಿ ಆಯ್ಕೆ ಮಾಡಲಾಗಿದೆ. ಉದ್ಯಾನಗಳ ನಿರ್ವಹಣೆಗೆ ಪರಿಕರ ವಿತರಿಸಿ ಶುಚಿತ್ವಕ್ಕೆ ಆದ್ಯತೆ ನೀಡಲಾಗುತ್ತಿದೆ’ ಎಂದರು.
ದುರ್ಗಾದೇವಿ, ಮಹಾಲಕ್ಷ್ಮಿ, ಹುಲಿಗೆಮ್ಮ ಹಾಗೂ ಸಮೃದ್ಧಿ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರಿಗೆ ಪರಿಕರಗಳನ್ನು ವಿತರಿಸಲಾಯಿತು. ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಮುಖ್ಯಾಧಿಕಾರಿ ಎನ್.ಎ.ಲಮಾಣಿ, ಸದಸ್ಯ ಶೇಖರ ಅಂಗಡಿ, ಸುನೀಲಗೌಡ ಪಾಟೀಲ, ಎಸ್.ಎನ್.ಪಾಟೀಲ, ಎಂ.ಎಂ.ಮುಗಳಖೋಡ, ಮನೋಜ ಹಂಚಾಟೆ, ಪ್ರೀತಿ ಹುಲಕುಂದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.