ಬಾಗಲಕೋಟೆ: ಸರ್ಕಾರ ಸತ್ತ ಹೆಣವಾಗಿದ್ದು, ಇವರು ರಣಹದ್ದುಗಳಂತೆ ಭ್ರಷ್ಟಾಚಾರ ಮಾಡಿ ಹರಿದುಕೊಂಡು ತಿನ್ನುತ್ತಿದ್ದಾರೆ ಎಂದು ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಟೀಕಿಸಿದರು.
ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯ ಸಚಿವರು, ಶಾಸಕರು ಡಿನ್ನರ್ ಪಾರ್ಟಿಯಲ್ಲಿ ಮುಳುಗಿದ್ದಾರೆ. ಅಧಿಕಾರಕ್ಕಾಗಿ ರಣಹದ್ದುಗಳಂತೆ ಕಚ್ಚಾಡುತ್ತಿದ್ದಾರೆ ಎಂದು ವಿಶ್ಲೇಷಿಸಿದರು.
ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಆಗಿ ಮುಂದುವರೆಯಬೇಕೆಂದು ಅವರ ಬೆಂಬಲಿಗರು ಹೇಳಿದರೆ, ದಲಿತರು ಮುಖ್ಯಮಂತ್ರಿ ಆಗಬೇಕು ಪರಮೇಶ್ವರ ಮನೆಯಲ್ಲಿ ಸಭೆ ನಡೆಸುತ್ತಾರೆ. ಸತೀಶ್ ಜಾರಕಿಹೊಳಿ ಮನೆಯಲ್ಲಿಯೂ ಮೀಟಿಂಗ್ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಲಿಂಗಾಯತರು ಪ್ರತ್ಯೇಕವಾಗಿ ಸಭೆ ಮಾಡಬೇಕು ಎಂದು ಆಲೋಚನೆ ಮಾಡಿದ್ದೇವೆ ಎನ್ನುತ್ತಿದ್ದಾರೆ. ಈ ರೀತಿ ಗೌಡರು ಒಂದು ಕಡೆಗೆ, ಲಿಂಗಾಯತರು ಮತ್ತೊಂದು ಕಡೆಗೆ, ದಲಿತರು ಮಗದೊಂದು ಕಡೆ ಎನ್ನುವಂತೆ ಮೂರು ಗುಂಪುಗಳಾಗಿ ಖುರ್ಚಿಗಾಗಿ ಬಡಿದಾಡುತ್ತಿದ್ದಾರೆ. ಆಡಳಿತ ಸುಗಮವಾಗಿ ನಡೆಯುತ್ತಿಲ್ಲ. ಆಡಳಿತದ ಕಡೆಗೆ ಯಾರದ್ದು ಮನಸ್ಸಿಲ್ಲ ಎಂದು ಟೀಕಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.