ADVERTISEMENT

ಬಾಗಲಕೋಟೆ: ಮತ್ತಿಬ್ಬರಿಗೆ ಕೋವಿಡ್-19 ಸೋಂಕು ದೃಢ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2020, 8:09 IST
Last Updated 18 ಏಪ್ರಿಲ್ 2020, 8:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಾಗಲಕೋಟೆ: ಜಿಲ್ಲೆಯಲ್ಲಿ ಮತ್ತೆ ಇಬ್ಬರಿಗೆ ಕೋವಿಡ್-19 ಸೋಂಕು ಶನಿವಾರ ದೃಢಪಟ್ಟಿದೆ. ಇದರಿಂದ ಸೋಂಕಿತರ ಸಂಖ್ಯೆ 16ಕ್ಕೆ ಹೆಚ್ಚಳಗೊಂಡಿದೆ. ಇವರಲ್ಲಿ ಬಾಗಲಕೋಟೆ ನಗರದ 75 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ.

65 ವರ್ಷದ ಪಿ-367 ಸೋಂಕಿತ ವ್ಯಕ್ತಿಯು ಪಿ-186ರ ವ್ಯಕ್ತಿಯ ಜೊತೆ ದ್ವಿತೀಯ ಸಂಪರ್ಕ ಹೊಂದಿದ್ದಾರೆ.

48 ವರ್ಷದ ಪಿ-368 ಸೋಂಕಿತ‌ ಮಹಿಳೆ ಪಿ-186 ಜೊತೆ ದ್ವಿತೀಯ ಸಂಪರ್ಕ ಹೊಂದಿದ್ದರು.

ADVERTISEMENT

ಕಳೆದ ಎರಡು ದಿನಗಳಲ್ಲಿ ಜಿಲ್ಲೆಯಿಂದ ಒಟ್ಟು 320 ಸ್ಯಾಂಪಲ್ ಗಳನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ. ಅದರಲ್ಲಿ 222 ಸ್ಯಾಂಪಲ್ ನೆಗಟಿವ್ ಇದ್ದು, ಎರಡು ಪ್ರಕರಣ ದೃಢಪಟ್ಟಿವೆ.

ಬಾಕಿ 96 ಜೊತೆಗೆ ಶನಿವಾರ ಕಳುಹಿಸಲಾದ 94 ಸೇರಿ ಒಟ್ಟು ಇನ್ನು 190 ಸ್ಯಾಂಪಲ್ ಗಳ ವರದಿ ಬರಬೇಕಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ರಾಜೇಂದ್ರ ತಿಳಿಸಿದ್ದಾರೆ.

ಸೋಂಕಿತ ವ್ಯಕ್ತಿಗಳನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.