ADVERTISEMENT

ಸೋಂಕಿತರ ಸಂಖ್ಯೆ ಏರಿಕೆ, ಹೆಚ್ಚಿದ ಆತಂಕ

ಜಮಖಂಡಿ: ಒಟ್ಟು 10 ಮಂದಿಗೆ ಕೋವಿಡ್–19 ಧೃಢ

​ಪ್ರಜಾವಾಣಿ ವಾರ್ತೆ
Published 4 ಮೇ 2020, 15:27 IST
Last Updated 4 ಮೇ 2020, 15:27 IST
ಲಾಕ್‌ಡೌನ್ ಪರಿಣಾಮ ಜಮಖಂಡಿ ನಗರದ ರಸ್ತೆಗಳು ಬಿಕೋ ಎನ್ನುತ್ತಿವೆ
ಲಾಕ್‌ಡೌನ್ ಪರಿಣಾಮ ಜಮಖಂಡಿ ನಗರದ ರಸ್ತೆಗಳು ಬಿಕೋ ಎನ್ನುತ್ತಿವೆ   

ಜಮಖಂಡಿ: ನಗರದಲ್ಲಿ 10 ಮಂದಿಗೆ ಕೋವಿಡ್–19 ಸೋಂಕು ದೃಢಪಟ್ಟಿರುವುದು ತಾಲ್ಲೂಕಿನ ಜನರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

ನಗರದ ಮೊದಲಿಗೆ ಪೊಲೀಸ್ ಕ್ವಾಟ್ರಸ್‌ ನಿವಾಸಿಯೊಬ್ಬರಿಗೆ(ಪಿ-263) ಸೋಂಕು ಕಾಣಿಸಿಕೊಂಡಿತ್ತು. ನಂತರ ಎಟಿಎಂ ಭದ್ರತಾ ಸಿಬ್ಬಂದಿಗೆ (ಪಿ-373) ತಗುಲಿತ್ತು. ನಂತರ ಇಲ್ಲಿನಅವಟಿಗಲ್ಲಿಯ ಸೆಂಟ್ರಿಂಗ್ ಗುತ್ತಿಗೆದಾರಗೆ (ಪಿ-381) ಕೋವಿಡ್ 19 ದೃಢಪಟ್ಟಿತ್ತು. ಅವರಿಗೆ ಕೋವಿಡ್-19 ಸೋಂಕು ತಗುಲಿದ ಮೂಲ ಇನ್ನೂ ನಿಗೂಢವಾಗಿದೆ. ರೋಗಿಗಳು ತಮ್ಮ ಚಲನವಲನದ ಬಗ್ಗೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಅವರು ಐಸೊಲೇಶನ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಒಳಗೆ ಹೋಗಿ ವಿಚಾರಣೆ ನಡೆಸಲುಪೊಲೀಸರಿಗೆ ಸಾಧ್ಯವಾಗುತ್ತಿಲ್ಲ, ಇದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

ಜಮಖಂಡಿಯಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ವ್ಯಕ್ತಿವಿಜಯಪುರಕ್ಕೆ ಹೋಗಿ ಬಂದಿದ್ದರು ಎಂದು ಹೇಳಲಾಗುತ್ತಿದೆ. ಈಗ ಅವರ 22 ವರ್ಷದ ಮಗ (ಪಿ-523) ಹಾಗೂ ಸಹೋದರನ 20 ವರ್ಷದ ಪುತ್ರಿಗೆ (ಪಿ-521), ಸಹೋದರಿಗೆ (ಪಿ-597) ಸೋಂಕು ದೃಢಪಟ್ಟಿದೆ.

ADVERTISEMENT

ಜಮಖಂಡಿಯ ಕಾಟಕ್ ಗಲ್ಲಿಯ 46 ವರ್ಷದ (ಪಿ-456) ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಆದರೆ ಅವರಿಗೆ ಯಾವುದೇ ಪ್ರವಾಸದ ಇತಿಹಾಸವಿಲ್ಲ. ಇನ್ನಷ್ಟೇ ಅವರ ಸಂಪರ್ಕಕ್ಕೆ ಬಂದವರ ಮಾಹಿತಿ ಕಲೆ ಹಾಕಬೇಕಿದೆ. ರೋಗಿ ಸಂಖ್ಯೆ 456 ಅವರ 32 ವರ್ಷದ ಪತ್ನಿ(ಪಿ-508), ಹಾಗೂ 12 ವರ್ಷದ ಮಗಳಿಗೆ(ಪಿ-509) ಸೋಂಕು ದೃಢಪಟ್ಟಿದೆ. ಮನೆಯ ಪಕ್ಕದ11 ವರ್ಷದ (ಪಿ-522) ಬಾಲಕನಿಗೂ ಸೋಂಕು ತಗುಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.