ADVERTISEMENT

ಬಾದಾಮಿ: ಸ್ಮಾರಕಗಳ ಸುತ್ತ ಸೈಕಲ್ ಜಾಥಾ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 3:56 IST
Last Updated 9 ಆಗಸ್ಟ್ 2025, 3:56 IST
ಬಾದಾಮಿ ಸಮೀಪದ ವಿಶ್ವಪರಂಪರೆ ಪಾರಂಪರಿಕ ತಾಣ ಪಟ್ಟದಕಲ್ಲಿನಲ್ಲಿ ಮೈಸೂರ ಅಥ್ಲೆಟಿಕ್ ಕ್ಲಬ್ ಸದಸ್ಯರು ಸೈಕಲ್ ಜಾಥಾ ಕೈಗೊಂಡರು.
ಬಾದಾಮಿ ಸಮೀಪದ ವಿಶ್ವಪರಂಪರೆ ಪಾರಂಪರಿಕ ತಾಣ ಪಟ್ಟದಕಲ್ಲಿನಲ್ಲಿ ಮೈಸೂರ ಅಥ್ಲೆಟಿಕ್ ಕ್ಲಬ್ ಸದಸ್ಯರು ಸೈಕಲ್ ಜಾಥಾ ಕೈಗೊಂಡರು.   

ಬಾದಾಮಿ: ‘ಯುವಕರಿಂದ ಪಾರಂಪರಿಕ ಸ್ಮಾರಕಗಳ ಮತ್ತು ಪರಿಸರ ಸಂರಕ್ಷಣೆ ಜಾಗೃತಿಗೆ ಸ್ಮಾರಕಗಳ ಸುತ್ತ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ’ ಎಂದು ಮೈಸೂರ ವಾಚನಾಲಯದ ಡಿಡಿ ಮಂಜುನಾಥ ಹೇಳಿದರು.

79ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಹರಘರ್ ತಿರಂಗಾ ಅಭಿಯಾನದ ಅಂಗವಾಗಿ ಮೈಸೂರು ಅಥ್ಲೆಟಿಕ್ ಕ್ಲಬ್ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸಹಯೋಗದಲ್ಲಿ ಪಾರಂಪರಿಕ ಸ್ಮಾರಕಗಳಲ್ಲಿ ಒಂದು ವಾರ ಸೈಕಲ್ ಮೂಲಕ ಸಂಚರಿಸಲಿದ್ದೇವೆ ಎಂದು ಅವರು ಶುಕ್ರವಾರ ಪಟ್ಟದಕಲ್ಲಿನಲ್ಲಿ ಹೇಳಿದರು.

ಬಾದಾಮಿ, ಪಟ್ಟದಕಲ್ಲು, ಐಹೊಳೆ, ಕೂಡಲಸಂಗಮ, ಹಂಪಿ ಮತ್ತು ಅಂಜನಾದ್ರಿಬೆಟ್ಟದ ವರೆಗೆ ಅಂದಾಜು 140 ಕಿ.ಮೀ. ಸೈಕಲ್ ಮೂಲಕ ಹೋಗುತ್ತೇವೆ ಎಂದರು.

ADVERTISEMENT

ಮೈಸೂರು ಅಥ್ಲೆಟಿಕ್ ಕ್ಲಬ್ ಸದಸ್ಯರಾದ ವಾಣಿಜ್ಯ ತೆರಿಗೆ ನಿವೃತ್ತ ಡಿಸಿ ರಮೇಶ ನರಸಿಂಹಯ್ಯ, ನಿವೃತ್ತ ಎಸಿಪಿ, ಧನಂಜಯ, ಡಿಜೈನ್ ಎಂಜಿನಿಯರ್ ದೀಪಕ, ಜೆಜೆಎಸ್ ಮೆಡಿಕಲ್ ಸಂಸ್ಥೆಯ ಪ್ರಾಧ್ಯಾಪಕ ಚಂದ್ರಕಾಂತ ಹುನಗುಂದ, ಎಂಜಿನಿಯರ್ ಅನೀಲ, ಸ್ಟಾಂಪ್ಸ್ ರಿಜಿಸ್ಟ್ರೇಷನ್ ಅಧಿಕಾರಿ ವೇಣುಗೋಪಾಲ, ಜಯದೇವ ಆಸ್ಪತ್ರೆ ಸರ್ಜನ್ ಡಾ. ಶಿವಾನಂದ, ಪ್ರಾಚಾರ್ಯ ವಿಶಾಲ ಪಾಟೀಲ, ಹೃದಯ ತಜ್ಞ ವೀಣು ಜೋಹನ, ಕಲಾವಿದೆ ರಮ್ಯ, ಪ್ರಾಧ್ಯಾಪಕ ಅನಂದ, ವ್ಯವಸ್ಥಾಪಕ ಸೋಹಮ್ ಬಾಬು, ಆರ್.ಬಿ.ಐ ಅಧಿಕಾರಿ ಸಾದಿಕ್ , ಕಲಾವಿದ ರವೀಂದ್ರ ಗುಂಡುರಾವ್ ಜಾಥಾದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.