ADVERTISEMENT

ಜಮಖಂಡಿ: ನಗರಸಭೆ ಬಜೆಟ್‌ಗೆ ಡಿ.ಸಿ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2024, 15:34 IST
Last Updated 2 ಮಾರ್ಚ್ 2024, 15:34 IST
ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಮಖಂಡಿ ನಗರಸಭೆ ಬಜೆಟ್‌ಗೆ ಡಿ.ಸಿ ಜಾನಕಿ ಅನುಮೋದನೆ ನೀಡಿದರು 
ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಮಖಂಡಿ ನಗರಸಭೆ ಬಜೆಟ್‌ಗೆ ಡಿ.ಸಿ ಜಾನಕಿ ಅನುಮೋದನೆ ನೀಡಿದರು    

ಜಮಖಂಡಿ: ನಗರಸಭೆಯ 2024-25ನೇ ಸಾಲಿನ ಅಂದಾಜು ಬಜೆಟ್‌ಗೆ ಜಿಲ್ಲಾಧಿಕಾರಿ ಹಾಗೂ ನಗರಸಭೆ ಆಡಳಿತಾಧಿಕಾ ಕೆ.ಜಾನಕಿ ಅನುಮೋದನೆ ನೀಡಿದರು.

ನಗರದ ಸರ್ವತೋಮುಖ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಒಟ್ಟು ₹ 28.48ಕೋಟಿ ಅಂದಾಜು ಆದಾಯ ನಿರೀಕ್ಷಿಸಲಾಗಿದ್ದು, ಅದರಂತೆ ₹ 28.44 ವೆಚ್ಚ ಸೇರಿ ₹ 4.03 ಲಕ್ಷ ಉಳಿತಾಯ ಬಜೆಟ್‌ಗೆ ಅನುಮೋದನೆ ನೀಡಿ ಠರಾವು ಅಂಗೀಕರಿಸಿದ್ದಾರೆ ಎಂದು ನಗರಸಭೆ ಪೌರಾಯುಕ್ತೆ ಲಕ್ಷ್ಮಿ ಅಷ್ಟಗಿ ತಿಳಿಸಿದರು.

ಎರಡನೇ ಸುತ್ತಿನ ಸಾರ್ವಜನಿಕ ಸಭೆ ಕರೆದು ಸಾರ್ವಜನಿಕರು, ಸಂಘ-ಸಂಸ್ಥೆಗಳಿಂದ ನಗರಕ್ಕೆ ಅವಶ್ಯವಿರುವ ಅಭಿವೃದ್ಧಿ ಯೋಜನೆಗಳಿಗೆ ನೀಡಿದ ಸಲಹೆ ಸೂಚನೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಎಸ್.ಎಫ್.ಸಿ. ಯೋಜನೆಯಡಿ ಬಿಡುಗಡೆ ಆಗಬಹುದಾದ ಅನುದಾನಕ್ಕೆ ನಿಯಮಾನುಸಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜನಾಂಗದ ಕಲ್ಯಾಣಕ್ಕಾಗಿ ನಿಗದಿಪಡಿಸಿದ ಶೇ 24.10, ಇತರೇ ಕಡುಬಡಜನರ ಕಲ್ಯಾಣಕ್ಕಾಗಿ ಶೇ 7.25, ಅಂಗವಿಕಲರಿಗಾಗಿ ಶೇ5 ರಷ್ಟು ಮೊತ್ತ ಕಾಯ್ದಿರಿಸಲಾಗಿದೆ ಎಂದರು.

ADVERTISEMENT

ವಿವಿಧ ಮೂಲಗಳಿಂದ ಬಂದ ಸಂಪನ್ಮೂಲಗಳನ್ನು ಕ್ರೂಢಿಕರಿಸಿ ಹಾಗೂ ಸರ್ಕಾರದಿಂದ ಬರುವ ಅನುದಾನಗಳನ್ನು ಸೇರಿಸಿ ಮೂಲಸೌಕರ್ಯ ಸಮರ್ಪಕವಾಗಿ ಕಲ್ಪಿಸುವ ಹಿತದೃಷ್ಟಿಯಿಂದ, ನಗರದ ಜನಸಂಖ್ಯೆಗೆ ಅನುಗುಣವಾಗಿ ಶೌಚಾಲಯಗಳ ನಿರ್ಮಾಣ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬಸ್ ನಿಲ್ದಾಣ, ನಗರದ ರಸ್ತೆ, ಚರಂಡಿಗಳು ಹಾಗೂ ಕುಡಿಯುವ ನೀರಿನ ವ್ಯವಸ್ಥೆ, ಬೀದಿ ದೀಪ ನಿರ್ವಹಣೆ, ಉದ್ಯಾನಗಳ ಅಭಿವೃದ್ಧಿ ಸೇರಿದಂತೆ ಹಲವುರು ಕಾಮಗಾರಿ ಮಾಡಲಾಗುವುದು ಎಂದು ಹೇಳಿದರು.

ಕಚೇರಿ ವ್ಯವಸ್ಥಾಪಕ ಸಿ.ಎಲ್.ಬಿಳ್ಳೂರ, ಸೋಮನಾಥ ದೇವರಮನಿ, ಕುಸುಮಾ ಸೊಪ್ಪಡ್ಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.