ಹುಕ್ಕೇರಿ: ತಾಲ್ಲೂಕಿನಲ್ಲಿನ ಸಹಕಾರ ಸಂಸ್ಥೆಗಳನ್ನು ನಾಲ್ಕೈದು ದಶಕದಿಂದ ಉಳಿಸಿ ಬೆಳೆಸಿಕೊಂಡು ಬರುವಲ್ಲಿ ಕತ್ತಿ ಮತ್ತು ಪಾಟೀಲ್ ಕುಟುಂಬ ಪ್ರಾಮಾಣಿಕವಾಗಿ ಪ್ರಯತ್ನಿಸಿವೆ. ಈಗ ಸನ್ನಿವೇಶ ಬದಲಾಗಿದ್ದು, ತಾಲ್ಲೂಕಿನ ಜನರು ತಮಗೆ ಸಂಪೂರ್ಣ ಬೆಂಬಲ ಕೊಟ್ಟು ಅಧಿಕಾರಕ್ಕೆ ತರುವಲ್ಲಿ ಸಹಕರಿಸಬೇಕು’ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಮೇಶ್ ಕತ್ತಿ ಹೇಳಿದರು.
ತಾಲ್ಲೂಕಿನ ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಸ್ಥೆಗಳ ಆಡಳಿತ ಮಂಡಳಿ ನಿರ್ದೇಶಕರು ಮತ್ತು ಸದಸ್ಯರ ಸಭೆಯಲ್ಲಿ ಸೋಮವಾರ ಮಾತನಾಡಿದರು.
ತಾಲ್ಲೂಕಿನಲ್ಲಿ ನಡೆಯುವ ಚುನಾವಣೆಯಲ್ಲಿ ಮತ್ತು ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಹಣಕ್ಕೆ ಮರುಳಾಗದೆ, ಕೆಲಸ ಮಾಡುವವರನ್ನು ಬೆಂಬಲಿಸಿ ಎಂದರು.
ಅಧಿಕಾರಕ್ಕೆ ಬಂದ ತಕ್ಷಣವೇ ಹಣ ಮರುಪಾವತಿ?: ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘಕ್ಕೆ ಚುನಾವಣೆ ಜರುಗಿದಲ್ಲಿ, ನಿರಂತರ ಜ್ಯೋತಿ ಯೋಜನೆಯಡಿ ಈಗಿನ ಆಡಳಿತ ಮಂಡಳಿ ರೈತರಿಂದ ವಸೂಲಿ ಮಾಡಿದ ಹಣವನ್ನು ತಾವು ಅಧಿಕಾರಕ್ಕೆ ಬಂದ ತಕ್ಷಣವೇ ಮರಳಿಸುವುದಾಗಿ ಕತ್ತಿ ಭರವಸೆ ನೀಡಿದರು.
ಮಾಜಿ ಸಚಿವ ಎ.ಬಿ.ಪಾಟೀಲ್ ಮಾತನಾಡಿ, ಇಡೀ ಜಿಲ್ಲೆಯಲ್ಲಿ ಹುಕ್ಕೇರಿ ತಾಲ್ಲೂಕು ಸಹಕಾರ ಕ್ಷೇತ್ರಕ್ಕೆ ಮಾದರಿ. ಆದರೆ ಈಗ ಕಲುಷಿತ ವಾತಾವರಣ ಸೃಷ್ಟಿಯಾಗುತ್ತಿದೆ. ಕೈಯಲ್ಲಿರುವ ಸಂಸ್ಥೆಗಳನ್ನು ಕಳೆದುಕೊಂಡು ಮುಂದೆ ಪಶ್ಚಾತ್ತಾಪ ಪಡಬೇಡಿ’ ಎಂದು ಸಲಹೆ ನೀಡಿದರು.
ಮುಖಂಡರಾದ ಪ್ರಥ್ವಿ ಕತ್ತಿ, ಪವನ್ ಕತ್ತಿ, ಮಹಾವೀರ ನಿಲಜಗಿ, ಸತ್ಯಪ್ಪ ನಾಯಿಕ, ಬಾಬು ಪೂಜೇರಿ, ರಾಚಯ್ಯ ಹಿರೇಮಠ, ಗಜಾನನ ಕ್ವಳ್ಳಿ, ಆರ್.ಬಿ.ಪಾಟೀಲ್, ಬಿ.ಎ.ಪೂಜಾರ್, ದುಂಡಗೌಡ ಪಾಟೀಲ್, ಬಿ.ಎಸ್.ಸುಲ್ತಾನಪುರ, ಸುನೀಲ ಪರ್ವತರಾವ್, ಕಲಗೌಡ ಪಾಟೀಲ್, ರಾಯಪ್ಪ ಡೂಗ್ ಸೇರಿದಂತೆ ವಿವಿಧ ಪಿಕೆಪಿಎಸ್‌ಗಳ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು, ಸದಸ್ಯರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಅಕ್ಟೋಬರ್ 19 ರಂದು ನಡೆಯುವ ಚುನಾವಣೆಯಲ್ಲಿ ಹಣಕ್ಕೆ ಮರುಳಾಗದೆ ಬ್ಯಾಂಕ್ ಉಳಿಸಿ ಬೆಳೆಸುವ ವ್ಯಕ್ತಿಗಳನ್ನು ಆಯ್ಕೆ ಮಾಡಿರಮೇಶ್ ಕತ್ತಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.