ADVERTISEMENT

ಉದಯೋನ್ಮುಖ ಕಲಾವಿದರನ್ನು ಪ್ರೋತ್ಸಾಯಿಸಿ

ಡಾ.ಶಿವಕುಮಾರ ಸ್ವಾಮೀಜಿ ಸಲಹೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 3:10 IST
Last Updated 20 ಅಕ್ಟೋಬರ್ 2020, 3:10 IST
ಇಳಕಲ್‍ ಅನುಭವ ಮಂಟಪದಲ್ಲಿ ಭಾನುವಾರ ಸಂಜೆ 'ಕನ್ನಡದ ಭಕ್ತ' ರ‍್ಯಾಪ್ ಸಂಗೀತ ಸಿ.ಡಿಯನ್ನು ಪ್ರವೀಣ ಹೂಲಗೇರಿ ಬಿಡುಗಡೆ ಮಾಡಿದರು. ಶಿವಕುಮಾರ ಶ್ರೀಗಳು, ಬಸವರಾಜ ಗವಿಮಠ. ಯಕ್ಷ ಹಾಗೂ ಹುಲ್ಲಪ್ಪ ಹುಲ್ಲೂರ ಇದ್ದಾರೆ
ಇಳಕಲ್‍ ಅನುಭವ ಮಂಟಪದಲ್ಲಿ ಭಾನುವಾರ ಸಂಜೆ 'ಕನ್ನಡದ ಭಕ್ತ' ರ‍್ಯಾಪ್ ಸಂಗೀತ ಸಿ.ಡಿಯನ್ನು ಪ್ರವೀಣ ಹೂಲಗೇರಿ ಬಿಡುಗಡೆ ಮಾಡಿದರು. ಶಿವಕುಮಾರ ಶ್ರೀಗಳು, ಬಸವರಾಜ ಗವಿಮಠ. ಯಕ್ಷ ಹಾಗೂ ಹುಲ್ಲಪ್ಪ ಹುಲ್ಲೂರ ಇದ್ದಾರೆ   

ಇಳಕಲ್: ಉದಯೋನ್ಮುಖ ಕಲಾವಿದರು ಬೆಳೆಯಲು ಸಹೃದಯಿ ಪ್ರೇಕ್ಷಕರ ಪ್ರೋತ್ಸಾಹ ಅತ್ಯಗತ್ಯ. ಸಿದ್ದನಕೊಳ್ಳದ ಮಠದಲ್ಲಿ ಯುವ ಕಲಾವಿದರಿಗೆ ಸಿದ್ದಶ್ರೀ ಪ್ರಶಸ್ತಿ ನೀಡಿ ಪ್ರೋತ್ಸಾಯಿಸುತ್ತೇವೆ ಎಂದು ಸಿದ್ದನಕೊಳ್ಳ ಮಠದ ಪೀಠಾಧಿಪತಿ ಡಾ.ಶಿವಕುಮಾರ ಸ್ವಾಮೀಜಿ ಹೇಳಿದರು.

ಭಾನುವಾರ ಸಂಜೆ ಇಲ್ಲಿಯ ವಿಜಯ ಮಹಾಂತೇಶ ಅನುಭವ ಮಂಟಪದಲ್ಲಿ ನಡೆದ 'ಕನ್ನಡದ ಭಕ್ತ' ರ‍್ಯಾಪ್ ಸಂಗೀತದ ಸಿ.ಡಿ ಹಾಗೂ ಬಾಗಲಕೋಟೆಯ ಯಶ್ ಮೆಲೋಡಿಯಸ್ ತಂಡದ ಮನರಂಜನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಮೊದಲ ಪ್ರಯತ್ನದಲ್ಲಿಯೇ ಉತ್ತಮ ಹಾಡುಗಳು ಹಾಗೂ ನೃತ್ಯ ಹೊರಹೊಮ್ಮಿದೆ. ಯುವ ಕಲಾವಿದ ಯಕ್ಷನನ್ನು ನಾಯಕನಾಗಿಸಿ 'ಕನ್ನಡದ ಭಕ್ತ' ಹೆಸರಿನ ಚಿತ್ರ ನಿರ್ಮಿಸುವುದಾಗಿ ಭರವಸೆ ನೀಡಿದರು.

ವಿಜಯ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಸವರಾಜ ಗವಿಮಠ ಮಾತನಾಡಿ, ಹಿಂದೆ ರಾಜರು ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದರು. ಈಗ ಪ್ರೇಕ್ಷಕರು ಬೆಂಬಲಿಸಬೇಕು. ಹುಲ್ಲಪ್ಪ ಹಳ್ಳೂರ ಅವರು ತಮ್ಮ ಮಗನಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ. ಕನ್ನಡ ಭಕ್ತ ಸಿ.ಡಿಗೆ ಸಾಹಿತ್ಯ ಮತ್ತು
ನಿರ್ದೇಶನ ನೀಡಿದ ಮಹಾಂತೇಶ ಬಡಿಗೇರ, ನೃತ್ಯ ಸಂಯೋಜನೆ ಮಾಡಿದ ರಮೇಶ ಕುಂಬಾರ ಪ್ರತಿಭಾವಂತರಾಗಿದ್ದು, ಅವರಿಗೆ ಉತ್ತಮ ಭವಿಷ್ಯವಿದೆ ಎಂದರು.

ADVERTISEMENT

ಇಳಕಲ್‌ ಸಹಕಾರಿ ಬ್ಯಾಂಕ್ ನಿರ್ದೇಶಕ ಪ್ರವೀಣ ಹೂಲಗೇರಿ ಸಿ.ಡಿ ಬಿಡುಗಡೆ ಮಾಡಿದರು. ಕಾಂಗ್ರೆಸ್ ಮುಖಂಡರಾದ ಸರಸ್ವತಿ ಈಟಿ ಮಾತನಾಡಿದರು. ನಿರ್ಮಾಪಕ ಹುಲ್ಲಪ್ಪ ಹಳ್ಳೂರ ಅಧ್ಯಕ್ಷತೆ ವಹಿಸಿದ್ದರು. ತೃಪ್ತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪ್ರಭಾವತಿ ಹಳ್ಳೂರ, ಕಸಾಪ ಇಳಕಲ್ ಘಟಕದ ಗೌರವ ಕಾರ್ಯದರ್ಶಿ ಮುತ್ತು ಬೀಳಗಿ, ನಗರಸಭೆ ಸದಸ್ಯ ಮೌಲೇಶ ಬಂಡಿವಡ್ಡರ, ಶರಣಪ್ಪ ಅಮರಾವತಿ, ಹನಮಂತ ತುಂಬಗಿ, ವಿರೇಶ ಎಂ.ಬಿ, ವೆಂಕಟೇಶ ವಡ್ಡರ, ಎಂ.ಆರ್. ಪಾಟೀಲ ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ನಡೆದ ಬಾಗಲಕೋಟೆಯ ಯಶ್ ಮೆಲೋಡಿಯಸ್ ತಂಡದ ಸಂಗೀತ ಕಾರ್ಯಕ್ರಮ ಪ್ರೇಕ್ಷಕರ ಮನಸೂರೆಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.