ADVERTISEMENT

ತೇರದಾಳ | ರೈತರ ಬೆನ್ನೆಲುಬಾದ ಸಹಕಾರ ಸಂಘ

ಸಹಕಾರ ಸಪ್ತಾಹ ದಿನಾಚರಣೆ: ಸಿದ್ದು ಸವದಿ ತೇರದಾಳ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 2:23 IST
Last Updated 16 ನವೆಂಬರ್ 2025, 2:23 IST
ತೇರದಾಳದಲ್ಲಿ ಜರುಗಿದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ದಿನಾಚರಣೆ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು
ತೇರದಾಳದಲ್ಲಿ ಜರುಗಿದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ದಿನಾಚರಣೆ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು   

ತೇರದಾಳ: ‘ರೈತ ದೇಶದ ಬೆನ್ನೆಲುಬಾದರೆ, ಸಹಕಾರ ಸಂಘಗಳು ಆತನ ಬೆನ್ನೆಲುಬಿನಂತೆ ಕಾರ್ಯನಿರ್ವಹಿಸುವ ಮೂಲಕ ದೇಶದ ಆರ್ಥಿಕತೆ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತಿವೆ’ ಎಂದು ಶಾಸಕ ಸಿದ್ದು ಸವದಿ ಹೇಳಿದರು.

ಇಲ್ಲಿನ ಅಲ್ಲಮಪ್ರಭು ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ತೇರದಾಳ ಹಾಗೂ ರಬಕವಿ-ಬನಹಟ್ಟಿ ತಾಲ್ಲೂಕುಗಳ ಸಹಕಾರ ಹಾಗೂ ಸೌಹಾರ್ದ ಸಂಘಗಳ ಆಶ್ರಯದಲ್ಲಿ ಶನಿವಾರ ಜರುಗಿದ 72ನೇ ಸಹಕಾರ ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಸಂಘದ ಸದಸ್ಯರಲ್ಲದವರಿಗೆ ಸಾಲ ನೀಡುವ ಹಾಗೂ ವಿವಿಧ ನಿಯಮಾವಳಿಗಳನ್ನು ಮೀರಿದ ಬಹಳಷ್ಟು ಸಹಕಾರಗಳು ದಿವಾಳಿಯಾದ ಉದಾಹರಣೆಗಳಿವೆ. ಸಹಕಾರದಲ್ಲಿ ಡಿಪಾಜಿಟ್ ಮಾಡಿದ ಹಣ ಬೇರೆ ಉದ್ದೇಶಗಳಿಗೆ ಬಳಕೆಯಾದರೂ ಅದು ನಷ್ಟದತ್ತ ಸಾಗುತ್ತದೆ. ಪ್ರಮುಖ ಸಹಕಾರ ಧುರೀಣರೊಬ್ಬರು ತಮ್ಮ ಸಹಕಾರಿಯಲ್ಲಿನ ಸದಸ್ಯರ ಡಿಪಾಜಿಟ್ ಹಣ ಸಿನೆಮಾ ನಿರ್ಮಾಣಕ್ಕೆ ಬಳಸುವ ಮೂಲಕ ದುರ್ಬಳಕೆಯಾಯಿತು’ ಎಂದರು.

ADVERTISEMENT

ಸಹಕಾರ ಸಂಘಗಳ ಲೆಕ್ಕಪರಿಶೋಧನೆ ಸಹಾಯಕ ನಿರ್ದೇಶಕ ಸುನೀಲ ಪತ್ತಾರ ಮಾತನಾಡಿದರು. ಹಿರೇಮಠದ ಗಂಗಾಧರ ದೇವರು ಸಾನ್ನಿಧ್ಯ ವಹಿಸಿದ್ದರು.

ಧ್ವಜಾರೋಹಣ ನೆರವೇರಿಸಿ, ಸಹಕಾರ ಪಿತಾಮಹ ಸಿದ್ದನಗೌಡ ಪಾಟೀಲರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಶಂಕರ ಬಟಕುರ್ಕಿ, ಚಂದ್ರಶೇಖರ ಆದಬಸಪ್ಪಗೋಳ, ಮಲ್ಲಿಕಾರ್ಜುನ ಹುಂಡೆಕಾರ, ವಿಜಯಲಕ್ಷ್ಮೀ ಪಾಟೀಲ್, ಶೀತಲಕುಮಾರ ದೇಸಾಯಿ, ಸುಭಾಸ ಗಾತಾಡಿ, ಕಾಶೀನಾಥ ಕಾಲತಿಪ್ಪಿ ಇದ್ದರು.

ಸಹಕಾರ ರಂಗದಲ್ಲಿ ಸೇರಿಕೊಂಡರೆ ಸಮಾಜ ಸೇವೆ ಹಾಗೂ ರಾಜಕೀಯವಾಗಿ ಬೆಳೆಯಲು ಅವಕಾಶ ದೊರೆಯುತ್ತದೆ
ಲಕ್ಕಪ್ಪ ಪಾಟೀಲ ವಿಜಯಪುರ- ಬಾಗಲಕೋಟ ಹಾಲು ಒಕ್ಕೂಟದ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.