ADVERTISEMENT

ಮುಧೋಳ: ಅಕ್ರಮ ಮರಳು ದಂಧೆ ನಿಲ್ಲಿಸಲು ರೈತ ಸಂಘದ ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ಜನವರಿ 2025, 14:38 IST
Last Updated 28 ಜನವರಿ 2025, 14:38 IST
ಮುಧೋಳದಲ್ಲಿ ಮಂಗಳವಾರ ರೈತಸಂಘದಿಂದ ನದಿಯಲ್ಲಿ ಮರಳು ದಂಧೆ ನಿಲ್ಲಿಸಲು ಆಗ್ರಹಿಸಿ ತಹಶೀಲ್ದಾರ್ ಅವರಿಗೆ ಮನವಿಸಲ್ಲಿಸಲಾಯಿತು
ಮುಧೋಳದಲ್ಲಿ ಮಂಗಳವಾರ ರೈತಸಂಘದಿಂದ ನದಿಯಲ್ಲಿ ಮರಳು ದಂಧೆ ನಿಲ್ಲಿಸಲು ಆಗ್ರಹಿಸಿ ತಹಶೀಲ್ದಾರ್ ಅವರಿಗೆ ಮನವಿಸಲ್ಲಿಸಲಾಯಿತು   

ಮುಧೋಳ: ತಾಲ್ಲೂಕಿನಲ್ಲಿ ಹರಿಯುತ್ತಿರುವ ಘಟಪ್ರಭಾ ನದಿಯ ಪಾತ್ರದುದ್ದಕ್ಕೂ ಹಗಲು ರಾತ್ರಿ ಅನ್ನದೇ ನಡೆಯುತ್ತಿರುವ ಅಕ್ರಮ ಮರಳು ದಂಧೆಯನ್ನು ನಿಲ್ಲಿಸಲು ಆಗ್ರಹಿಸಿ ರೈತ ಸಂಘದ ಪದಾಧಿಕಾರಿಗಳು ಮಂಗಳವಾರ ತಹಶೀಲ್ದಾರ್ ಹಾಗೂ ಸಿಪಿಐಗೆ ಮನವಿ ಸಲ್ಲಿಸಿದರು.

ರೈತ ಸಂಘದ ಮುಖಂಡ ಸುಭಾಷ ಶಿರಬೂರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಇದೇ ರೀತಿ ರಾಜಾರೋಷವಾಗಿ ಮರಳು ಕಳ್ಳತನ ನಡೆದರೆ ಒಂದು ತಿಂಗಳಲ್ಲಿ ನದಿಯಲ್ಲಿ ಮರಳೇ ಇರುವುದಿಲ್ಲ ಎನ್ನುವ ಸ್ಥಿತಿ ಉಂಟಾಗುತ್ತದೆ. ಇದರಿಂದ ಪರಿಸರಕ್ಕೆ ಭಾರಿ ಪ್ರಮಾಣದ ಹಾನಿಯಾಗುವ ಸಾಧ್ಯತೆ ಇದೆ. ನದಿಯ ಆರೋಗ್ಯ ಹದಗೆಡುವುದರ ಜೊತೆಗೆ, ಜಲಚರಗಳಿಗೆ ಅಪಾಯ ಎದುರಾಗಿದೆ. ಈ ವಿಷಯವನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ತಿಳಿಸಲಾಗಿದೆ. ಈ ಕುರಿತು ಜಿಲ್ಲಾಡಳಿತ ಕ್ರಮ ಕೈಗೊಳ್ಳದಿದ್ದರೆ ಸಂಘ ಬೀದಿಗೀಳಿದು ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವಂತ ಕಾಂಬಳೆ, ವಕೀಲ ಯಲ್ಲಪ್ಪ ಹೆಗಡೆ, ಸುರೇಶ್ ಚಿಂಚಲಿ, ಹನುಮಂತ ನಬಾಬ, ಮಹೇಶಗೌಡ ಪಾಟೀಲ, ಲಕ್ಕಪ್ಪ ಸುನಗದ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.