ADVERTISEMENT

ತೇರದಾಳ: ಬಾವಿಗೆ ಬಿದ್ದಿದ್ದ ಎಮ್ಮೆ ರಕ್ಷಿಸಿದ ಅಗ್ನಿಶಾಮಕ ದಳ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 4:17 IST
Last Updated 20 ನವೆಂಬರ್ 2025, 4:17 IST
ತೇರದಾಳ ತಾಲ್ಲೂಕಿನ ಸಸಾಲಟ್ಟಿಯಲ್ಲಿ ಆಳವಾದ ತೆರೆದ ಬಾವಿಗೆ ಬಿದ್ದಿದ್ದ ಎಮ್ಮೆಯೊಂದನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸುರಕ್ಷಿತವಾಗಿ ಮೇಲಕ್ಕೆತ್ತಿದರು
ತೇರದಾಳ ತಾಲ್ಲೂಕಿನ ಸಸಾಲಟ್ಟಿಯಲ್ಲಿ ಆಳವಾದ ತೆರೆದ ಬಾವಿಗೆ ಬಿದ್ದಿದ್ದ ಎಮ್ಮೆಯೊಂದನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸುರಕ್ಷಿತವಾಗಿ ಮೇಲಕ್ಕೆತ್ತಿದರು   

ತೇರದಾಳ: ತಾಲ್ಲೂಕಿನ ಸಸಾಲಟ್ಟಿಯಲ್ಲಿ ಆಳವಾದ ಬಾವಿಗೆ ಬಿದ್ದಿದ್ದ ಎಮ್ಮೆಯನ್ನು ಸುರಕ್ಷಿತವಾಗಿ ಮೇಲೆತ್ತುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಮಂಗಳವಾರ ರಾತ್ರಿ ಯಶಸ್ವಿಯಾಯಿತು.

ಗ್ರಾಮದ ತೋಟದ ವಸತಿಯಲ್ಲಿರುವ ಬನಪ್ಪ ಬೇವನೂರ ಎಂಬುವವರ ಮನೆ ಮುಂದೆ ಕಟ್ಟಿಹಾಕಿದ್ದ ಎಮ್ಮೆಯೊಂದು ಹಗ್ಗ ಹರಿದುಕೊಂಡು ಅಡ್ಡಾಡುವ ವೇಳೆ ಆಯತಪ್ಪಿ ಅಲ್ಲಿದ್ದ 30 ಅಡಿಗೂ ಹೆಚ್ಚು ಆಳವಾದ ತೆರೆದ ಬಾವಿಯಲ್ಲಿ ಬಿದ್ದಿತ್ತು. ಎಮ್ಮೆ ಬಾವಿಯಲ್ಲಿ ಬಿದ್ದಿದ್ದನ್ನು ಗಮನಿಸಿದ ರೈತರು, ಸ್ಥಳೀಯರ ಸಹಾಯದಿಂದ ಅಗ್ನಿಶಾಮಕ ದಳದ ಸಿಬ್ಬಂದಿಗೆ ವಿಷಯ ತಿಳಿಸಿದರು. ಅವರು ಕೂಡಲೇ ಸ್ಥಳಕ್ಕಾಗಮಿಸಿ ಕಾರ್ಯಪ್ರವೃತ್ತರಾದರು. ಸತತ ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಎಮ್ಮೆಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದ್ದಾರೆ. ಆಳದ ಬಾವಿಗೆ ಬಿದ್ದಿದ್ದ ಎಮ್ಮೆಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ರೈತರು ಚಿಕಿತ್ಸೆ ಕೊಡಿಸಿದ್ದಾರೆ.

ಅಗ್ನಿಶಾಮಕ ದಳದ ಠಾಣಾಧಿಕಾರಿ ರಮೇಶ ಚವಟಿ, ಸಿಬ್ಬಂದಿಯಾದ ಎಸ್.ವೈ. ಸಂದ್ರಿಮನಿ, ಎಲ್.ವಿ.ಹಳ್ಳಿ, ಎಚ್.ಎಸ್.ಗೋಕಾಕ, ಎಂ.ಜಿ.ಉದಪುಡಿ, ಸುರೇಶ ಪೂಜಾರಿ, ಮಾರುತಿ ರಾಥೋಡ, ಕಿರಣ ಬಿಸಲನಾಯಕ, ಸ್ಥಳೀಯರಾದ ಅಡಿವೆಪ್ಪ ಪೂಜೇರಿ, ಬಸಲಿಂಗ ಪಾಟೀಲ್, ಬನಪ್ಪ ಸಲಬನ್ನವರ, ಕಲ್ಮೇಶ ಪಾಟೀಲ್, ಲಕ್ಕಪ್ಪ ಸಲಬನ್ನವರ, ಶಿವರುದ್ರಯ್ಯ ಮಠಪತಿ, ಸುನೀಲ ಪರ್ವತನವರ, ಪ್ರಕಾಶ ಶೇಗುಣಸಿ, ರುದ್ರಪ್ಪ ಸಲಬನ್ನವರ ಇದ್ದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.