ADVERTISEMENT

ಕಲಾವಿದರಿಗೆ ದಿನಸಿ ವಿತರಣೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2021, 17:15 IST
Last Updated 17 ಜೂನ್ 2021, 17:15 IST
ಇಳಕಲ್‍ನ ಅನುಭವ ಮಂಟಪದ ಆವರಣದಲ್ಲಿ ಅಜೀಂ ಪ್ರೇಮ್‍ಜಿ ಫೌಂಡೇಷನ್‍ ಸಿಬ್ಭಂದಿಯನ್ನು ವೃತ್ತಿ ರಂಗಭೂಮಿ ಕಲಾವಿದರು ಸನ್ಮಾನಿಸಿದರು
ಇಳಕಲ್‍ನ ಅನುಭವ ಮಂಟಪದ ಆವರಣದಲ್ಲಿ ಅಜೀಂ ಪ್ರೇಮ್‍ಜಿ ಫೌಂಡೇಷನ್‍ ಸಿಬ್ಭಂದಿಯನ್ನು ವೃತ್ತಿ ರಂಗಭೂಮಿ ಕಲಾವಿದರು ಸನ್ಮಾನಿಸಿದರು   

ಇಳಕಲ್: ಕೋವಿಡ್‍ ಜೀವ ಹಾಗೂ ಬದುಕನ್ನು ಕಸಿದುಕೊಂಡಿದೆ. ನಾಟಕದಂತಹ ಪ್ರದರ್ಶನ ಕಲೆಯನ್ನೇ ಅವಲಂಬಿಸಿರುವ ಕಲಾವಿದರ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಅಜೀಂ ಪ್ರೇಮ್‍ಜಿ ಫೌಂಡೇಷನ್‍ ಕಲಾವಿದರಿಗೆ ದಿನಸಿ ಕಿಟ್‍ ವಿತರಿಸಿ ಉತ್ತಮ ಕಾರ್ಯ ಮಾಡಿದೆ ಎಂದು ಸ್ನೇಹರಂಗದ ಅಧ್ಯಕ್ಷ ಬಸವರಾಜ ಮಠದ ಶ್ಲಾಘಿಸಿದರು.

ಗುರುವಾರ ಇಲ್ಲಿಯ ಅನುಭವ ಮಂಟಪದ ಆವರಣದಲ್ಲಿ ಅಜೀಂ ಪ್ರೇಮ್‍ಜಿ ಫೌಂಡೇಷನ್‍ ನೀಡಿದ ದಿನಸಿ ಕಿಟ್‍ಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಜಯ ಮಹಾಂತೇಶ್ವರ ಶ್ರೀಮಠದಲ್ಲಿ ಕಿಟ್‍ಗಳ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಗುರುಮಹಾಂತ ಸ್ವಾಮೀಜಿ, ಅಜೀಂ ಪ್ರೇಮ್‍ಜಿ ಅವರು ತಮ್ಮ ಫೌಂಡೇಷನ್ ಮೂಲಕ ಸಾಕಷ್ಟು ದಾನ, ಸೇವಾ ಕಾರ್ಯಗಳನ್ನು ಮಾಡುತ್ತಾರೆ. ಇಳಕಲ್‍ನ ವೃತ್ತಿ ರಂಗಭೂಮಿಯ ಕಲಾವಿದರಿಗೆ ನೆರವು ನೀಡಿದ್ದು, ಇನ್ನಷ್ಟು ದಾನಿಗಳಿಗೆ ಪ್ರೇರಣೆ ನೀಡಲಿದೆ ಎಂದರು.

ADVERTISEMENT

ಮಹಾಂತೇಶ ಗಜೇಂದ್ರಗಡ, ಫೌಂಡೇಷನ್ ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.