ಮುಧೋಳ: ನನಗೆ ಸೇವೆ ಮಾಡಲು ಅವಕಾಶ ಕಲ್ಪಿಸಿ, ನನ್ನನ್ನು ಬೆಳಿಸಿದ ಕ್ಷೇತ್ರದ ಮತದಾರರ ಋಣ ತೀರಿಸಲು ಹತ್ತು ಜನ್ಮವೇ ಬೇಕು. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ಧಕ್ಕೆ ಆಗದಂತೆ ನಡೆದುಕೊಂಡಿದ್ದೇನೆ. ಎಲ್ಲ ಸಮಾಜಗಳ ಮುಖಂಡರ, ಪಕ್ಷದ ನಾಯಕರ ಹಾಗೂ ಕಾರ್ಯಕರ್ತರ ಶ್ರಮದಿಂದ ನಾನು ಬೆಳೆದಿದ್ದೇನೆ ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ನಗರದ ಕಾರಜೋಳರ ಗೃಹ ಕಚೇರಿ ಹತ್ತಿರದ ಮೈದಾನದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಗುರುವಾರ ಏರ್ಪಡಿಸಿದ್ದ ಕಾರಜೋಳರ 74ನೇ ಜನ್ಮ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಈ ಭಾಗದ ರೈತರ ಬಯಕೆಯಾಗಿದ್ದ ಮಂಟೂರ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆ ನನಸಾಗಿ ರೈತರ ಹೊಲಗಳಿಗೆ ನೀರು ಸಿಗುವಂತಾಗಿರುವುದು ಸಂತಸ ತಂದಿದೆ. ರೈತರು ನೀರನ್ನು ಹಿತ, ಮಿತವಾಗಿ ಬಳಿಸಿ ಕೊನಯ ರೈತನಿಗೂ ದೊರಕುವಂತೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸಂಗಣ್ಣ ಕಾತರಕಿ, ಅಂಬಿಗರ ಚೌಡಯ್ಯ ಚೌಡಯ್ಯ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ನಾಗಪ್ಪ ಅಂಬಿ, ಬಿಜೆಪಿ ಅಧ್ಯಕ್ಷ ಹಣಮಂತ ತುಳಸಿಗೇರಿ, ಡಾ.ರವಿ ನಂದಗಾಂವಿ, ರಸ್ತೆ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಕೆ.ಆರ್.ಮಾಚಪ್ಪನವರ, ಜಿಲ್ಲಾ ಉಪಾಧ್ಯಕ್ಷ ನಾರಾಯಣ ಯಡಹಳ್ಳಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಾಮಣ್ಣ ತಳೇವಾಡ, ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಮಳಲಿ, ಶ್ರೀಶೈಲಗೌಡ ಪಾಟೀಲ, ಭೀಮನಗೌಡ ಪಾಟೀಲ, ಕಲ್ಲಪ್ಪಣ್ಣ ಸಬರದ, ರಾಘು ಸಿಂಧೆ, ಅರುಣ ಕಾರಜೋಳ ಮುಂತಾದವರು ಇದ್ದರು.
ಮಲಾಪುರದ ಗೋಶಾಲೆ ಹಾಗೂ ನಗರದ ಗಣೇಶ ದೇವಾಲಯದಲ್ಲಿ ಕಾರ್ಯಕರ್ತರು ಆಯುಷ್ಯ ವೃದ್ಧಿಸಲು ಕೈಗೊಂಡ ಪೂಜೆಯಲ್ಲಿ ಕಾರಜೋಳ ಭಾಗಿಯಾಗಿದ್ದರು.
ಯುವಮೋರ್ಚಾ ಕಾರ್ಯಕರ್ತರಿಂದ ರಕ್ತದಾನ ಶಿಬಿರ ನಡೆಯಿತು.
ಸಾವಿರಾರು ಜನರು ನೆಚ್ಚಿನ ನಾಯಕನಿಗೆ ಶುಭ ಕೋರಿ, ಕೇಕ್ ಕತ್ತರಿಸಿ, ಸಂಭ್ರಮಾಚರಿಸಿದರು. ಹಾರ ತುರಾಯಿ, ಶಾಲು ಹೊದಿಸಿ, ಸಿಹಿ ತಿನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.