ಕೆರೂರ: ಸಮೀಪದ ಅಗಸನಕೊಪ್ಪ ಗ್ರಾಮದ ಹಾಗೂ ಹೂಲಗೇರಿ ಗ್ರಾಮ ಪಂಚಾಯಿತಿ ಸದಸ್ಯ ಸೇರಿ ಹಲವು ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಅಗಸನಕೊಪ್ಪ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರ ಸಮ್ಮುಖದಲ್ಲಿ ಮುಖಂಡರಾದ ಸುಭಾಸ್ ಪೂಜಾರ, ಪಾಂಡಪ್ಪ ಹಿಂದಿನಮನಿ, ಹೂಲಗೇರಿ ಗ್ರಾ.ಪಂ ಸದಸ್ಯ ಪ್ರದೀಪ ಪೂಜಾರ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು.
ಸುಭಾಸ್ ಪೂಜಾರ ಮಾತನಾಡಿ, ‘ಕೆಲವು ಕಾರಣಗಳಿಂದ ಕಾಂಗ್ರೆಸ್ ತೊರೆದಿದ್ದೆವು. ಈಗ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಜನಪರ ಆಡಳಿತ ಮೆಚ್ಚಿ, ಕ್ಷೇತ್ರದ ಶಾಸಕ ಜೆ.ಟಿ. ಪಾಟೀಲ ಅವರ ಕೈ ಬಲಪಡಿಸಲು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮರಳಿದ್ದೇವೆ’ ಎಂದರು.
ಕಾಂಗ್ರೆಸ್ ಮುಖಂಡ ವೆಂಕಣ್ಣ ಹೊಸಮನಿ ಮಾತನಾಡಿ, ಗ್ರಾಮದಲ್ಲಿ ಪಕ್ಷವನ್ನು ಕಟ್ಟಿ ಬೆಳಿಸಿದ ಕಾರ್ಯಕರ್ತರು ಮರಳಿ ಪಕ್ಷಕ್ಕೆ ಬಂದಿರುವುದು ಸಂತಸ ತಂದಿದೆ ಎಂದು ಹೇಳಿದರು.
ಕಾಂಗ್ರೆಸ್ ಕಾರ್ಯಕರ್ತರಾದ ಮೌಲಾಸಾಬ ಕೆರೂರ, ವಕೀಲ ರಂಗನಾಥ ಹಿಂದಿನಮನಿ, ಲಕ್ಷ್ಮಣ ಹೊಸಕೋಟಿ, ನಿಂಗಪ್ಪ ಮೊರಬದ, ದ್ಯಾವನಗೌಡ ಹಿರೇಗೌಡ್ರ, ಪಾಂಡಪ್ಪ ನಡುವಿನಮನಿ, ಬಸನಗೌಡ ಬಿಂಕದಗಟ್ಟಿ, ರೇಣುಕಾ ಚತ್ರಕೋಟಿ, ಈರಣ್ಣ ಗೌಡ್ರ, ರಂಗಪ್ಪ ಎಮ್ಮಿ, ಭರಮಣ್ಣ ಹಮಣಿ, ರಾಮಣ್ಣ ಚತ್ರಕೋಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.