ADVERTISEMENT

ವೆಬ್‍ಸೈಟ್‍ನಲ್ಲಿ ಮಹಿಳಾ ಉದ್ಯಮಿಗಳ ನೋಂದಣಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 6:00 IST
Last Updated 10 ಫೆಬ್ರುವರಿ 2026, 6:00 IST
Venugopala K.
   Venugopala K.

ಬಾಗಲಕೋಟೆ: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಡಿ ಗೃಹಲಕ್ಷ್ಮೀ ಡಿಜಿಟಲ್ ಮಾರ್ಕೆಟಿಂಗ್ (gruhalakshmidigital.org) ವೆಬ್‍ಸೈಟ್ ಬಿಡುಗಡೆ ಮಾಡಲಾಗಿದ್ದು, ಈ ವೆಬ್‍ಸೈಟ್‍ನಲ್ಲಿ ಮಹಿಳಾ ಉದ್ಯಮಿಗಳು ನೋಂದಣಿ ಮಾಡಿಕೊಳ್ಳಬಹುದಾಗಿದೆ.

ವಿವಿಧ ವಸ್ತುಗಳನ್ನು ಉತ್ಪಾದಿಸುವ ಘಟಕಗಳ ಮಹಿಳಾ ಉದ್ಯಮಿಗಳು, ಸ್ವಯಂ ಉದ್ಯೋಗ ನಡೆಸುತ್ತಿರುವ ಮಹಿಳೆಯರು, ಉದ್ಯಮಿಗಳ ವಿವರ, ಉತ್ಪಾದಿಸುವ ವಸ್ತುಗಳ ಫೋಟೊಗಳನ್ನು ವೆಬ್‍ಸೈಟ್‍ನಲ್ಲಿ ಅಪ್‌ಲೋಡ್ ಮಾಡಬಹುದಾಗಿದೆ. 

ಈ ವೆಬ್‍ಸೈಟ್‍ನಲ್ಲಿ ಮಹಿಳಾ ಉದ್ದಿಮೆದಾರರ ಹೆಸರು, ಉತ್ಪಾದನೆ ಮಾಡುತ್ತಿರುವ ವಸ್ತುನಿನ ಹೆಸರು, ವಿಳಾಸ, ಇ-ಮೇಲ್ ಐಡಿ, ದೂ.ಸಂ. ನೀಡಬೇಕು. ಮಾಹಿತಿಗೆ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಗಲಕೋಟೆ (08354-297464) ಅಥವಾ ಜಿಲ್ಲಾ ಅಭಿವೃದ್ಧಿ ನಿರೀಕ್ಷಕರು, ಕರ್ನಾಟಕ ರಾಜ್ಯ ಮಹಿಳಾ ಅಬಿವೃದ್ಧಿ ನಿಗಮ ಕಚೇರಿ ಬಾಗಲಕೋಟೆ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.