ADVERTISEMENT

ಗುಳೇದಗುಡ್ಡ | 'ನೀರು ಶುದ್ಧೀಕರಣ ಘಟಕದ ನ್ಯೂನತೆ ಸರಿಪಡಿಸಿ'

ಮಾಜಿ ಶಾಸಕ ರಾಜಶೇಖರ ಶೀಲವಂತ ಸಲಹೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 2:59 IST
Last Updated 18 ಜುಲೈ 2025, 2:59 IST
ಕಮತಗಿಯ ನೀರು ಶುದ್ಧೀಕರಣ ಘಟಕವನ್ನು ಮಾಜಿ ಶಾಸಕ ರಾಜಶೇಖರ ಶೀಲವಂತ ಹಾಗೂ ನಗರ ಸುಧಾರಣಾ ಸಮೀತಿಯವರು ಪರೀಶೀಲಿಸಿದರು
ಕಮತಗಿಯ ನೀರು ಶುದ್ಧೀಕರಣ ಘಟಕವನ್ನು ಮಾಜಿ ಶಾಸಕ ರಾಜಶೇಖರ ಶೀಲವಂತ ಹಾಗೂ ನಗರ ಸುಧಾರಣಾ ಸಮೀತಿಯವರು ಪರೀಶೀಲಿಸಿದರು   

ಗುಳೇದಗುಡ್ಡ : ‘ವಿಜ್ಞಾನಿಗಳ ನೇತೃತ್ವದಲ್ಲಿ ಇಲ್ಲಿನ ನೀರನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಲಾಗಿದೆ. ಈ ಶುದ್ಧೀಕರಣ ಘಟಕದ ವಾಸ್ತವ ಸ್ಥಿತಿ ನೋಡಿದರೆ ಗುಳೇದಗುಡ್ಡ ಪಟ್ಟಣಕ್ಕೆ ಸರಬರಾಜು ಮಾಡುವ ನೀರು ಕಲುಷಿತವಾಗಿದೆ ಎಂದು ಅರಿವಿಗೆ ಬಂತು. ಇಲ್ಲಿನ ನ್ಯೂನತೆಗಳನ್ನು ಸಂಬಂಧಿಸಿದ ಅಧಿಕಾರಿಗಳು ಸರ್ಕಾರದ ಗಮನಕ್ಕೆ ತಂದು ಸರಿಪಡಿಸುವ ಕೆಲಸ ಮಾಡಬೇಕು’ ಎಂದು ಮಾಜಿ ಶಾಸಕ ರಾಜಶೇಖರ ಶೀಲವಂತ ಹೇಳಿದರು.

ಅವರು ಕಮತಗಿ ವ್ಯಾಪ್ತಿಯಲ್ಲಿ ಇರುವ ನೀರು ಸಂಗ್ರಹದ ಶುದ್ಧೀಕರಣ ಘಟಕಕ್ಕೆ ಮಂಗಳವಾರ ಭೇಟಿ ನೀಡಿ ಮಾತನಾಡಿದರು. ನೀರು ಶುದ್ಧೀಕರಣ ಘಟಕದ ಕೆಮಿಕಲ್ ಎಂಜಿನಿಯರ್‌ಗೆ ಅವರಿಗೆ ಸಂಬಂಧಿಸಿದ ವಿಷಯವಾಗಿದೆ. ಇಲ್ಲಿ ನಿರ್ವಹಣೆ ಅವೈಜ್ಞಾನಿಕವಾಗಿದೆ. ಅದನ್ನು ಸರಿ ಮಾಡುವ ಅವಶ್ಯಕತೆ ಇದೆ. ಶುದ್ಧ ನೀರು ಪೂರೈಸುವ ಜವಾಬ್ದಾರಿ ಸರ್ಕಾರದ್ದು ಎಂದು ಹೇಳಿದರು.

ಇಲ್ಲಿ ಪಟ್ಟಣಕ್ಕೆ ಬೇಕಾದ ನೀರು ಸಂಗ್ರಹ ಸಾಮರ್ಥ್ಯ ಕಡಿಮೆ ಇದೆ. ಇಲ್ಲಿಂದ ಸರಬರಾಜಾಗುವ ನೀರು ಕಲುಷಿತವಾಗಿದೆ ಎಂದು ನಗರ ಸುಧಾರಣಾ ಸಮೀತಿಯವರು ಅಭಿಪ್ರಾಯಪಟ್ಟರು.

ADVERTISEMENT

ಪುರಸಭೆ ಸದಸ್ಯ ಪ್ರಶಾಂತ ಜವಳಿ, ನಗರ ಸುಧಾರಣಾ ಸಮಿತಿಯ ಅಶೋಕ ಹೆಗಡೆ, ರಂಗಪ್ಪ ಶೇಬನಕಟ್ಟಿ, ಗಣೇಶ ಶೀಲವಂತ, ಪೊಲೀಸಪ್ಪ ರಾಮದುರ್ಗ, ವಸಂತಸಾ ಧೋಂಗಡೆ, ಕಮಲಕಿಶೋರ ಮಾಲಪಾಣಿ, ಮಧುಸೂದನ ರಾಂಧಡಾ, ಶಿವಯೋಗೆಪ್ಪ ಮುರಗೋಡ, ಶ್ರೀಕಾಂತ ಭಾವಿ, ಭುವನೇಶ್ವರ ಪೂಜಾರ, ಸಂಗಣ್ಣ ಹುನಗುಂದ, ಮಲ್ಲೇಶಪ್ಪ ಲಗಳಿ, ಶ್ರೀಕಾಂತ ಮಲಜಿ, ಸುರೇಶ ತಿಪ್ಪಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.