ADVERTISEMENT

ಗುರು, ಶಿಷ್ಯ ಪರಂಪರೆ ಶ್ರೇಷ್ಠವಾದುದು: ಗುರುಸಿದ್ಧೇಶ್ವರ ಸ್ವಾಮೀಜಿ

ಹದಿನಾರು ವರ್ಷಗಳ ನಂತರ ಒಂದಾದ ಸ್ನೇಹಿತರು

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 2:46 IST
Last Updated 6 ಅಕ್ಟೋಬರ್ 2025, 2:46 IST
ಬನಹಟ್ಟಿಯ ಎಸ್ ಟಿ ಸಿ ಕಾಲೇಜಿನಲ್ಲಿ 2006-09ರ ವರೆಗೆ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರು ವಂದನಾ ಮತ್ತು ಸ್ನೇಹಸಂಗಮ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಗುರುಗಳನ್ನು ಸನ್ಮಾನಿಸಿದರು
ಬನಹಟ್ಟಿಯ ಎಸ್ ಟಿ ಸಿ ಕಾಲೇಜಿನಲ್ಲಿ 2006-09ರ ವರೆಗೆ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರು ವಂದನಾ ಮತ್ತು ಸ್ನೇಹಸಂಗಮ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಗುರುಗಳನ್ನು ಸನ್ಮಾನಿಸಿದರು   

ರಬಕವಿ ಬನಹಟ್ಟಿ: ಭಾರತೀಯ ಗುರು ಮತ್ತು ಶಿಷ್ಯ ಪರಂಪರೆ ಶ್ರೇಷ್ಠವಾದುದು, ಜಗತ್ತಿನ ಪ್ರತಿಯೊಬ್ಬ ಶ್ರೇಷ್ಠ ವ್ಯಕ್ತಿಗಳಿಗೆ ಗುರುವೇ ಮೂಲ ಶಕ್ತಿಯಾಗಿರುತ್ತಾರೆ. ಗುರು ಶಕ್ತಿಯ ಮೂಲವಾಗಿರುತ್ತಾರೆ. ಆದರೆ ಕೆಲವರಿಗೆ ಅರಿವೇ ಗುರು ಎಂದು ರಬಕವಿಯ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಸ್ವಾಮೀಜಿ ತಿಳಿಸಿದರು.

ಸ್ಥಳೀಯ ಎಸ್‌ಟಿಸಿ ಕಾಲೇಜಿನಲ್ಲಿ 2006-09ನೇ ಸಾಲಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಶನಿವಾರ ಪದವಿ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಮತ್ತು ಸ್ನೇಹ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಿವೃತ್ತ ಪ್ರಾಚಾರ್ಯ ಎಸ್.ಎಸ್. ಹೂಲಿ ಮಾತನಾಡಿ, ವಿದ್ಯಾರ್ಥಿ ಸಮುದಾಯಕ್ಕೆ ಗುರು ಯಾವಾಗಲೂ ಒಳ್ಳೆಯದನ್ನೆ ಬಯಸುತ್ತಾನೆ. ಭವಿಷ್ಯದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದರು.

ADVERTISEMENT

ವಿದ್ಯಾರ್ಥಿಗಳಾದ ರಾಜು ಗೊಂದಕರ್, ಶಿವಾನಂದ ಹಳ್ಯಾಳ, ಸೀಮಾ ಬರಗಡಗಿ, ಸಂಗೀತಾ ಇಂಗಳೆ, ವಿನಾಯಕ ಜತ್ತಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್.ಬಿ.ಮಟೋಳ್ಳಿ, ಬಿ.ಆರ್.ಬಿರಾದಾರ, ಎಂ.ಪಿ.ತಾನಪ್ಪಗೋಳ, ವೈ.ಡಿ.ಬಾಗಿ, ಗೋಕುಲ ಕಾಬರಾ, ರಮೇಶ ಮಾಗುರಿ, ಗೀತಾ ಸಜ್ಜನ ಅವರನ್ನು ಸನ್ಮಾನಿಸಲಾಯಿತು.

ಪ್ರಾಚಾರ್ಯ ಜಿ.ಅರ್.ಜುನ್ನಾಯ್ಕರ್, ದಯಾನಂದ ಸವದತ್ತಿ, ನಯೀಮ ತಾಂಬೋಳಿ, ರಾಕು ಖಡಕಬಾವಿ, ಪ್ರವೀಣ ಅಬಕಾರ, ಭಕ್ತಿ ಸೋಮಯ್ಯ, ಆನಂದ ಪಟ್ಟಣ, ವಿಶ್ವನಾಥ ಬಂದಿ, ಬಸವರಾಜ ಹೊಸಮನಿ, ಶೀಲಾ ಸಾಬೋಜಿ, ಪ್ರಮಿಳಾ ಮಗದುಮ್, ಸುಪ್ರಿಯಾ ಸವದತ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.