ADVERTISEMENT

‘ಪರಂಪರೆಯ ರಕ್ಷಣೆ ಎಲ್ಲರ ಹೊಣೆ’

ಐಹೊಳೆ: ವಿಶ್ವ ಪರಂಪರಾ ಸಪ್ತಾಹಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 16:36 IST
Last Updated 20 ನವೆಂಬರ್ 2020, 16:36 IST
ಅಮೀನಗಡ ಸಮೀಪದ ಐತಿಹಾಸಿ ತಾಣ ಐಹೊಳೆಯಲ್ಲಿ ಹಮ್ಮಿಕೊಂಡಿರುವ ವಿಶ್ವ ಪರಂಪರಾ ಸಪ್ತಾಹವನ್ನು ನಿವೃತ್ತ ಪ್ರಾಧ್ಯಾಪಕ ಡಾ. ಶೀಲಾಕಾಂತ ಪತ್ತಾರ ಉದ್ಘಾಟಿಸಿದರು
ಅಮೀನಗಡ ಸಮೀಪದ ಐತಿಹಾಸಿ ತಾಣ ಐಹೊಳೆಯಲ್ಲಿ ಹಮ್ಮಿಕೊಂಡಿರುವ ವಿಶ್ವ ಪರಂಪರಾ ಸಪ್ತಾಹವನ್ನು ನಿವೃತ್ತ ಪ್ರಾಧ್ಯಾಪಕ ಡಾ. ಶೀಲಾಕಾಂತ ಪತ್ತಾರ ಉದ್ಘಾಟಿಸಿದರು   

ಐಹೊಳೆ (ಅಮೀನಗಡ): ಚಾಲುಕ್ಯರ ದೇವಾಲಯಗಳ ಸಂರಕ್ಷಣೆ ಮಹತ್ವದ್ದಾಗಿದ್ದು ಪರಂಪರೆಯ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಶೀಲಾಕಾಂತ ಪತ್ತಾರ ಹೇಳಿದರು.

ಅವರು ಸಮೀಪದ ಐತಿಹಾಸಿ ತಾಣ ಐಹೊಳೆಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣೆ ಇಲಾಖೆಯಿಂದ ನವೆಂಬರ್ 19 ರಿಂದ ನವೆಂಬರ್ 25ರ ವರೆಗೆ ಹಮ್ಮಿಕೊಂಡಿರುವ ವಿಶ್ವ ಪರಂಪರಾ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದರು.

ದೇವಾಲಯಗಳನ್ನು ನಿರ್ಮಿಸಿದಂತಹ ಶಿಲ್ಪಿಗಳ ಕುರಿತು ಮಹತ್ವದ ವಿಷಯಗಳನ್ನು ತಿಳಿಸಿದರು. ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಛಾಯಾಚಿತ್ರ ಪ್ರದರ್ಶನವು ಸ್ಮಾರಕಗಳ ಕುರಿತು ಸಾರ್ವಜನಿಕರಿಗೆ ದರ್ಶನ ನೀಡುವಂತಿವೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಧಾರವಾಡ ವಲಯದ ಆಡಳಿತಾಧಿಕಾರಿ ಕಲಾ ನಂಬಿರಾಜ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಸ್ಮಾರಕಗಳ ಸಂರಕ್ಷಣೆಯಲ್ಲಿ ಇಲಾಖೆಯ ಜೊತೆಗೆ ಸಾರ್ವಜನಿಕರು ಸಹಕರಿಸಬೇಕು ಹಾಗೂ ಸ್ಮಾರಕಗಳ ಆವರಣದಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು. ಸ್ಮಾರಕಗಳಿಗೆ ಧಕ್ಕೆಯಾಗದ ಹಾಗೆ ನೋಡಿಕೊಳ್ಳಬೇಕು. ಇಲಾಖೆಯ ಸಿಬ್ಬಂದಿ ಮತ್ತು ಪ್ರವಾಸಿಗರು ಈ ಒಂದು ವಾರದಲ್ಲಿ ಆಯೋಜಿಸಿರುವ ಛಾಯಾಚಿತ್ರ ಪ್ರದರ್ಶನದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಸಹಾಯಕ ಪುರಾತತ್ವ ಅಧಿಕಾರಿಗಳು ಡಾ. ದೇವರಾಜ ಎಸ್. ಎಂ ಪ್ರಾಸ್ತಾವಿಕವಾಗಿ ಮಾತನಾಡಿ, ವಿಶ್ವ ಪರಂಪರಾ ಸಪ್ತಾಹದ ಮುಖ್ಯ ಉದ್ದೇಶಗಳು ಹಾಗೂ ಛಾಯಾಚಿತ್ರ ಪ್ರದರ್ಶನದ ಕುರಿತು ಮಾಹಿತಿ ನೀಡಿದರು.

ಐಹೊಳೆಯ ಪುರಾತತ್ವ ವಸ್ತುಸಂಗ್ರಹಾಲಯ ಅಧಿಕಾರಿ ಶರತ್ ಗೋಸ್ವಾಮಿ ಸ್ವಾಗತಿಸಿ, ಛಾಯಾಚಿತ್ರ ಪ್ರದರ್ಶನದ ಪ್ರಾಮುಖ್ಯತೆ ಕುರಿತು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.