ADVERTISEMENT

ಮಹಾಲಿಂಗಪುರ | ಹೆಸ್ಕಾಂಗೆ ನಾಲ್ಕು ಕೋಟಿಗೂ ಅಧಿಕ ಬಿಲ್‌ ಬಾಕಿ!

​ಪ್ರಜಾವಾಣಿ ವಾರ್ತೆ
Published 8 ಜುಲೈ 2023, 5:00 IST
Last Updated 8 ಜುಲೈ 2023, 5:00 IST
ಮಹಾಲಿಂಗಪುರ ಹೆಸ್ಕಾಂ ಕಚೇರಿ.
ಮಹಾಲಿಂಗಪುರ ಹೆಸ್ಕಾಂ ಕಚೇರಿ.   

ಮಹೇಶ ಮನ್ನಯ್ಯನವರಮಠ

ಮಹಾಲಿಂಗಪುರ: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ಸ್ಥಳೀಯ ಸಂಸ್ಥೆಗಳು ₹4 ಕೋಟಿಗೂ ಅಧಿಕ ವಿದ್ಯುತ್ ಬಿಲ್‌ ಬಾಕಿ ಉಳಿಸಿಕೊಂಡಿವೆ.

ಮಹಾಲಿಂಗಪುರ ಪುರಸಭೆ, ಕೆಸರಗೊಪ್ಪ, ನಂದಗಾಂವ, ಸೈದಾಪುರ, ಒಂಟಗೋಡಿ, ಮದಭಾಂವಿ, ನಾಗರಾಳ, ಢವಳೇಶ್ವರ ಗ್ರಾಮ ಪಂಚಾಯ್ತಿಗಳು ಬರೋಬ್ಬರಿ ₹4.35 ಕೋಟಿ ಉಳಿಸಿಕೊಂಡಿವೆ. ರನ್ನಬೆಳಗಲಿ ಪಟ್ಟಣ ಪಂಚಾಯ್ತಿ ಮಾತ್ರ ನಿಯಮಿತವಾಗಿ ಬಿಲ್ ಪಾವತಿಸುತ್ತಿದೆ.

ADVERTISEMENT
ವಿದ್ಯುತ್ ಬಾಕಿ ಉಳಿಸಿಕೊಂಡಿರುವ ಸ್ಥಳೀಯ ಸಂಸ್ಥೆಗಳಿಗೆ ಪ್ರತಿ ತಿಂಗಳು ನೋಟಿಸ್ ನೀಡಲಾಗುತ್ತದೆ. ಜನರಿಗೆ ನೀರಿನ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಸಂಪರ್ಕ ಕಡಿತ ಮಾಡುತ್ತಿಲ್ಲ. 
ಸುರೇಶ ಮುರಗೋಡ, ಹೆಸ್ಕಾಂ ಎಇಇ, ಮಹಾಲಿಂಗಪುರ

ಕುಡಿಯುವ ನೀರು ಪೂರೈಕೆ ಹಾಗೂ ಬೀದಿ ದೀಪಕ್ಕೆ ಬಳಸುವ ವಿದ್ಯುತ್ ಬಿಲ್ ಬಾಕಿ ಉಳಿದಿದ್ದು, ಇದರಿಂದ ಹೆಸ್ಕಾಂಗೆ ಆರ್ಥಿಕ ಹೊರೆ ಆಗುತ್ತಿದೆ.

ಬಾಕಿ ವಿವರ

ಮಹಾಲಿಂಗಪುರ ಪುರಸಭೆ ಕುಡಿಯುವ ನೀರು ಪೂರೈಕೆಗೆ ₹64.16 ಲಕ್ಷ, ಬೀದಿದೀಪಕ್ಕೆ ₹19.37 ಲಕ್ಷ, ಒಂಟಗೋಡಿ ಗ್ರಾಮ ಪಂಚಾಯ್ತಿ ಅತಿ ಹೆಚ್ಚು ಅಂದರೆ ₹1.89 ಕೋಟಿ ಬಾಕಿ ಉಳಿಸಿಕೊಂಡಿದೆ

ಕೆಸರಗೊಪ್ಪ ಗ್ರಾಮ ಪಂಚಾಯ್ತಿ ₹25.44 ಲಕ್ಷ, ನಂದಗಾಂವ,ಗ್ರಾಮ ಪಂಚಾಯ್ತಿ ₹2.03 ಲಕ್ಷ, ಸೈದಾಪುರ ಗ್ರಾಮ ಪಂಚಾಯ್ತಿ ₹24.23 ಲಕ್ಷ, ಮದಭಾಂವಿ ಗ್ರಾಮ ಪಂಚಾಯ್ತಿ ₹53.77 ಲಕ್ಷ, ನಾಗರಾಳ ಗ್ರಾಮ ಪಂಚಾಯ್ತಿ ₹51.24 ಲಕ್ಷ ಹಾಗೂ ಢವಳೇಶ್ವರ ಗ್ರಾಮ ಪಂಚಾಯ್ತಿ ₹6.97 ಲಕ್ಷ ಪಾವತಿಸಬೇಕಿದೆ.

ತೆರಿಗೆ ಸಂಗ್ರಹ ಕಡಿಮೆ

ಗ್ರಾಮ ಪಂಚಾಯ್ತಿಗಳ ವಿದ್ಯುತ್ ಬಿಲ್ ಪಾವತಿಗೆ ಸರ್ಕಾರ ನೀಡುವ ಅನುದಾನ ಕಡಿಮೆ ಇರುವುದರಿಂದ ಪ್ರತಿ ತಿಂಗಳು ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಾಗದೆ ಬಾಕಿ ಉಳಿದುಕೊಂಡು ಬರುತ್ತಿವೆ. ಗ್ರಾಮಗಳಲ್ಲಿ ತೆರಿಗೆ ಸಂಗ್ರಹವೂ ಕಡಿಮೆಯಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಮಹಾಲಿಂಗಪುರ ಹೆಸ್ಕಾಂ ಕಚೇರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.