ಮುಧೋಳ ತಾಲ್ಲೂಕಿನ ಮಿರ್ಜಿ ಬ್ಯಾರೇಜ್ ಘಟಪ್ರಭಾ ನದಿ ಪ್ರವಾಹದಿಂದ ಮುಳುಗಡೆಯಾಗಿರುವುದು
ಮುಧೋಳ: ನಿರಂತರ ಮಳೆಯಿಂದ ಘಟಪ್ರಭಾ ನದಿಯ ಹಿಡಕಲ್ ಜಲಾಶಯ ಶೇ 100 ಭರ್ತಿಯಾಗಿದೆ. ಘಟಪ್ರಭಾ ನದಿ ಪ್ರವಾಹದಿಂದ ತಾಲ್ಲೂಕಿನ 8 ಬ್ಯಾರೇಜ್‌ಗಳು ಮುಳುಗಡೆಯಾಗಿವೆ.
ಜಲಾಶಯದ ಒಟ್ಟು ಸಾಮರ್ಥ್ಯ 51.0 ಟಿಎಂಸಿ ಅಡಿಯಾಗಿದ್ದು ಭರ್ತಿಯಾಗಿದೆ.
ಮಿರ್ಜಿ ಬ್ಯಾರೇಜ್ - , ಚನ್ನಾಳ ಬ್ಯಾರೇಜ್ – ನಾಗರಾಳ, ಜಾಲಿಬೇರಿ ಬ್ಯಾರೇಜ್ –ಸೊರಗಾಂವ, ಜಿರಗಾಳ ಬ್ಯಾರೇಜ್ – ಗುಲಗಾಲಜಂಬಗಿ, ಅಂತಾಪುರ ಬ್ಯಾರೇಜ್- ಜಂಬಗಿ ಕೆಡಿ, ಕಸಬಾ ಜಂಬಗಿ ಬ್ಯಾರೇಜ್- ಇಂಗಳಗಿ ಯಡಹಳ್ಳಿ, ಆಲಗುಂಡಿ ಬಿ.ಕೆ. ಬ್ಯಾರೇಜ್- ಜೂನ್ನೂರ ಹಾಗೂ ತಿಮ್ಮಾಪುರ ಬ್ಯಾರೇಜ್ – ಬಿದರಿ ಮುಳುಗಡೆಯಾಗಿವೆ.
ತಾಲ್ಲೂಕಿನ ಮಾಚಕನೂರ ಗ್ರಾಮದ ಐತಿಹಾಸಿಕ ಹೊಳೆಬಸವೇಶ್ವರ ದೇವಸ್ಥಾನ ಜಲಾವೃತವಾಗಿದೆ.
ಪ್ರವಾಹ ಹೆಚ್ಚಾಗುತ್ತ ಸಾಗಿದರೆ ತಾಲ್ಲೂಕಿನ ಮಿರ್ಜಿ, ಮಳಲಿ, ಒಂಟಗೋಡಿ, ಉತ್ತೂರ, ಮಾಚಕನೂರ ಬುದ್ನಿ ಬಿ.ಕೆ, ಆಲಗುಂಡಿ ಬಿ.ಕೆ. ಗ್ರಾಮಗಳಿಗೆ ನೀರು ಬರುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.