ADVERTISEMENT

ಅಮೀನಗಡ | ಅಪಘಾತ; ಮೂವರು ಸಾವು

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 6:55 IST
Last Updated 12 ಜನವರಿ 2026, 6:55 IST
<div class="paragraphs"><p>ಸಾವು&nbsp; (ಪ್ರಾತಿನಿಧಿಕ ಚಿತ್ರ)</p></div>

ಸಾವು  (ಪ್ರಾತಿನಿಧಿಕ ಚಿತ್ರ)

   

ಕಮತಗಿ (ಅಮೀನಗಡ): ಪಟ್ಟಣದ ಹೊರವಲಯದ ಎಚ್.ಪಿ. ಪೆಟ್ರೋಲ್ ಪಂಪ್ ಸಮೀಪದ ರಾಯಚೂರ–ಬೆಳಗಾವಿಯ ಹೆದ್ದಾರಿಯಲ್ಲಿ ಶನಿವಾರ ಟ್ರ್ಯಾಕ್ಟರ್ ಮುಂದಿನ ಬಂಪರ್ ಮುರಿದು, ಟ್ರೈಲರ್‌ನಲ್ಲಿ ಕುಳಿತಿದ್ದ ಮೂವರು ರಸ್ತೆಯಲ್ಲಿ ಬಿದ್ದು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಆನೆಕಲ್ ತಾಂಡಾದ ರೋಷನ್ ನಾಯಕ (4), ರುಕ್ಮಿಣಿಬಾಯಿ ನಾಯಕ (36), ಶಿವಾನಿ ನಾಯಕ (6) ಮೃತರು. ಗಾಯಗೊಂಡಿರುವ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಮತಗಿ ಮಾರ್ಗದಿಂದ ಬಾಗಲಕೋಟೆ ಕಡೆಗೆ ಟ್ರ್ಯಾಕ್ಟರ್‌ನಲ್ಲಿ ಹೋಗುತ್ತಿದ್ದಾಗ ಬಂಪರ್ ಮುರಿದಿದ್ದು, ಕೆಳಗೆ ಬಿದ್ದವರ ಮೇಲೆ ಚಕ್ರಗಳು ಹರಿದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಸ್ಥಳಕ್ಕೆ ಅಮೀನಗಡ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.