ತೇರದಾಳ: ಕಳೆದ ಲೋಕಸಭೆ ಚುನಾವಣೆ ಸೇರಿದಂತೆ ಈ ಮೊದಲು ಬಿಜೆಪಿ ಪಕ್ಷದವರು ತಮ್ಮ ತತ್ವ ಸಿದ್ದಾಂತವನ್ನು ಹಾಗೂ ಹಿಂದೂ ಮತದಾರರನ್ನು ಕಡೆಗಣಿಸಿದ್ದರಿಂದ ದೇಶದಲ್ಲಿ ಹಿನ್ನೆಡೆ ಹಾಗೂ ರಾಜ್ಯದಲ್ಲಿ ಅಧಿಕಾರವನ್ನು ಕಳೆದುಕೊಂಡಿದ್ದಾರೆ ಎಂದು ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಪ್ರಮೋದ ಮುತಾಲಿಕ ಹೇಳಿದರು.
ಪಟ್ಟಣದ ಪುರಸಭೆ ಸದಸ್ಯ ಸಚೀನ ಕೊಡತೆ ಅವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಮೂಲ ಬಿಜೆಪಿ ಪಕ್ಷದ ಸಿದ್ದಾಂತವನ್ನು ಗಾಳಿಗೆ ತೂರಿ ಇಂದು ಪಕ್ಷವೂ ಭ್ರಷ್ಟಾಚಾರಿಗಳನ್ನು ಸೇರಿದಂತೆ ಹಲವರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದು, ಪಕ್ಷಕ್ಕಾಗಿ ದುಡಿದವರಿಗೆ ಬೇಸರ ಮೂಡಿಸಿದೆ. ವಿಶೇಷವಾಗಿ ಹಿಂದೂ ಮತದಾರರ ಕಡೆಗಣನೆ ನಡೆದಿದೆ ಎಂದ ಅವರು, ಶ್ರೀರಾಮ ಸೇನೆ ಆರಂಭಿಸಿದ ಲವ್ ಜಿಹಾದ್ಗೆ ಇಂದು ದೇಶದ ಮೂರು ರಾಜ್ಯಗಳು ಕಾನೂನು ಮಾಡಿವೆ, ಹಲವು ರಾಜ್ಯಗಳು ಅದನ್ನು ಎತ್ತಿ ಹಿಡಿದಿವೆ. ರಾಜ್ಯದಲ್ಲಿ ಜಿಲ್ಲೆಗೊಂದರಂತೆ ಆರಂಭಿಸಿದ ಗೋಶಾಲೆಯನ್ನು ಇಂದಿನ ಕಾಂಗ್ರೆಸ್ ನೇತ್ರತ್ವದ ರಾಜ್ಯ ಸಕರ್ಾರ ಆರಂಭಿಸಲು ಆಸಕ್ತಿ ಹೊಂದಿಲ್ಲ. ಗ್ಯಾರಂಟಿಗೆ ಹಣ ಹೊಂದಿಸಲು ಸಕರ್ಾರ ಹೆಣಗಾಡುತ್ತಿದ್ದು, ಅಭಿವೃದ್ಧಿ ಕನಸಿನ ಮಾತು ಎಂದರು.
ಅಲ್ಲಮಪ್ರಭು ಗೋಶಾಲೆಗೆ ಭೇಟಿ ನೀಡಿ, ಅಲ್ಲಿ ಕಾರ್ಯಕರ್ತರ ಸಭೆ ನಡೆಸಿದರು. ಮುಖಂಡರಾದ ಶಂಕರ ಕುಂಬಾರ, ಸದಾಶಿವ ಮಾಳಿ, ಪ್ರಕಾಶ ಹೊಸಮನಿ, ಸಿದ್ದು ಅಮ್ಮಣಗಿ, ಬಬ್ರು ಹಜಾರೆ, ಅಮೀತ ಪಾರಗಾಂವಕರ, ರಮೇಶ ಕಿತ್ತೂರ, ಸಂಜು ಪಿಸಾಳೆ, ಚನ್ನಪ್ಪ ಬೆಳಕೂಡ, ಸದಾಶಿವ ಕೊಡತೆ, ಶ್ರೀಶೈಲ ಗುಂಜಗಾಂವಿ ಸೇರಿದಂತೆ ಹಲವು ಕಾರ್ಯಕರ್ತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.