ADVERTISEMENT

ಹೊಳೆಹುಚ್ಚೇಶ್ವರ ಜಾತ್ರೆ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 4:06 IST
Last Updated 30 ಜನವರಿ 2026, 4:06 IST
ಹುಚ್ಚೇಶ್ವರ ಶ್ರೀ
ಹುಚ್ಚೇಶ್ವರ ಶ್ರೀ   

ಗುಳೇದಗುಡ್ಡ: ಕೋಟೆಕಲ್‌ ಹೊಳೆ ಹುಚ್ಚೇಶ್ವರ ಜಾತ್ರಾ ಮಹೋತ್ಸವ ಜ.30ರಂದು ಜರುಗಲಿದೆ.

ಜ.30ರಂದು ಶಿವರುದ್ರಪ್ಪ ಮಲ್ಲಪ್ಪ ಹೆಗಡೆ ಅವರ ಮನೆಯಿಂದ ವಿವಿಧ ವಾದ್ಯಮೇಳ, ಜಾನಪದ ಕಲಾ ತಂಡಗಳೊಂದಿಗೆ ರಥದ ಕಳಸದ ಮೆರವಣಿಗೆ ನಡೆಯಲಿದೆ. 13ನೇ ಹೊಳೆಹುಚ್ಚೇಶ್ವರ ಶ್ರೀ ಸಾನ್ನಿಧ್ಯ ವಹಿಸುವರು. ಕುಟುಕನಕೇರಿ ಭಕ್ತರಿಂದ ರಥದ ಹಗ್ಗದ ಮೆರವಣಿಗೆ ನಡೆಯಲಿದೆ. ಬರಗುಂಡಿ ಬಂಧುಗಳಿಂದ ಪಂಜಿನ ಮೆರವಣಿಗೆ ನಡೆಯಲಿದೆ.

ಸಂಜೆ 7.30ಕ್ಕೆ ಮಹಾರಥೋತ್ಸವ ಜರುಗಲಿದ್ದು, ಗಂಗಾವತಿ ಕಲ್ಮಠದ ಕೊಟ್ಟೂರು ಶ್ರೀ, ಉಪ್ಪಿನಬೆಟಗೇರಿ ಕುಮಾರ ವಿರೂಪಾಕ್ಷ ಶ್ರೀ‌, ಮುನವಳ್ಳಿ ಮುರುಘರಾಜೇಂದ್ರ ಶ್ರೀ, ಮುರುಘಾಮಠದ ಕಾಶಿನಾಥ ಶ್ರೀ, ಅಮರೇಶ್ವರ ಮಠದ ನೀಲಕಂಠ ಶಿವಾಚಾರ್ಯ ಶ್ರೀ ಸಾನ್ನಿಧ್ಯ ವಹಿಸುವರು. ರಾತ್ರಿ 10 ಗಂಟೆಗೆ ಮಾರುತೇಶ್ವರ ನಾಟ್ಯ ಸಂಘದಿಂದ ನಾಟಕ ಪ್ರದರ್ಶನ ನಡೆಯಲಿದೆ.

ADVERTISEMENT

ಜ.31ರಂದು ಹೊಳೆಹುಚ್ಚೇಶ್ವರ ಮಠದ ಹತ್ತಿರದ ಬಯಲು ಜಾಗದಲ್ಲಿ ಕುಸ್ತಿಪಂದ್ಯಾವಳಿ ನಡೆಯಲಿದೆ. ಸಂಜೆ 7 ಗಂಟೆಗೆ
ಮಂಟಾ ಬಂಧುಗಳಿಂದ ಅಗ್ಗಿ ಹಾಯುವ ಕಾರ್ಯಕ್ರಮವಿದೆ. ಹೊಸಹಳ್ಳಿಯ ಬೂದೀಶ್ವರ ಶ್ರೀ ಅಮೀನಗಡದ ಶಂಕರ ರಾಜೇಂದ್ರ ಶ್ರೀ, ಒಪ್ಪತ್ತೇಶ್ವರ ಮಠದ ಒಪತ್ತೇಶ್ವರ ಶ್ರೀ, ಮರಡಿಮಠ ಕಾಡಸಿದ್ದೇಶ್ವರ ಶ್ರೀ ಸಾನ್ನಿಧ್ಯ ವಹಿಸವರು. ರಾತ್ರಿ 10 ಗಂಟೆಗೆ ಹೊಳೆ ಹುಚ್ಚೇಶ್ವರ ನಾಟ್ಯ ಸಂಘದಿಂದ ನಾಟಕ ಪ್ರದರ್ಶನ ನಡೆಯಲಿದೆ.

ಫೆ.1ರಂದು ಸಂಜೆ 7 ಗಂಟೆಗೆ ಸಂಗೀತ ಕಾರ್ಯಕ್ರಮ ಜರುಗಲಿದೆ ಎಂದು ಹುಚ್ಚೇಶ್ವರ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.