ADVERTISEMENT

ಕ್ಷೇತ್ರದ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುವೆ: ವಿಜಯಾನಂದ ಕಾಶಪ್ಪನವರ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2025, 14:21 IST
Last Updated 3 ಮಾರ್ಚ್ 2025, 14:21 IST
ಮತಕ್ಷೇತ್ರದ ಕ್ಷೇತ್ರದ ಶ್ರಯೋಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುವೆ: ವಿಜಯಾನಂದ ಕಾಶಪ್ಪನವರ
ಮತಕ್ಷೇತ್ರದ ಕ್ಷೇತ್ರದ ಶ್ರಯೋಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುವೆ: ವಿಜಯಾನಂದ ಕಾಶಪ್ಪನವರ   

ಹುನಗುಂದ: ವಿದ್ಯಾರ್ಥಿಗಳು, ರೈತರು ಹಾಗೂ ಎಲ್ಲ ವರ್ಗದ ಜನರ ಅಭಿವೃದ್ದಿ ಸೇರಿದಂತೆ ಮತಕ್ಷೇತ್ರದ ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಇಲ್ಲಿನ ವಿಜಯ ಮಹಾಂತೇಶ ವೃತ್ತದಲ್ಲಿ ಪೌರಾಡಳಿತ ನಿರ್ದೇಶನಾಲಯ, ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ಪುರಸಭೆ ಕಾರ್ಯಾಲಯ ಸಹಯೊಗದಲ್ಲಿ 2022-23ನೇ ಸಾಲಿನ ಎಸ್‌ಎಫ್‌ಸಿ ವಿಶೇಷ ಅನುದಾನದಡಿಯಲ್ಲಿ ಪುರಸಭೆ ವ್ಯಾಪ್ತಿಯ ರಾಯಚೂರ-ಬಾಚಿ ರಾಜ್ಯ ಹೆದ್ದಾರಿ-20ರ ಡಿವೈಡರ್‌ನಲ್ಲಿ ಅಳವಡಿಸಲಾದ ವಿದ್ಯುತ್ ಬೀದಿ-ದೀಪಗಳ ನವೀಕರಣ ಹಾಗೂ ಹೊಸ ವಿದ್ಯುತ್ ಕಂಬಗಳ ಕಾಮಗಾರಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪಟ್ಟಣದಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಬೇಕೆನ್ನುವ ಬಹುದಿನಗಳ ಜನರ ಬೇಡಿಕೆಯ ಜೊತೆಗೆ ನ್ಯಾಯಾಲಯದಿಂದ ಎನ್‌ಎಚ್ ರಸ್ತೆಯವರೆಗೆ ತಿರಂಗಾ ಬಣ್ಣದ ಲೈಟ್‌ಗಳನ್ನು ಅಳವಡಿಸಿ ಈ ದೀಪಗಳನ್ನು ನವೀಕರಿಸಿದ ವಿದ್ಯುತ್ ಬೆಳಗಿಸಿ ನಗರವನ್ನು ಅಲಂಕರಿಸಲಾಗಿದೆ ಎಂದರು.

ADVERTISEMENT

ಪುರಸಭೆ ಅಧ್ಯಕ್ಷೆ ಭಾಗ್ಯಶ್ರೀ ರೇವಡಿ ಮಾತನಾಡಿ, ರಾಜ್ಯ ಹೆದ್ದಾರಿ 20 ಮತ್ತು ನಗರದ ಕೆಲವು ವಾರ್ಡ್‌ಗಳಲ್ಲಿ ಹೈಮಾಸ್ಕ್‌ ಜೊತೆಗೆ ಕೆಲವು ವಾರ್ಡ್‌ಗಳಲ್ಲಿ ಸಿಸಿ ರಸ್ತೆ ನಿರ್ಮಿಸುವಂತೆ ನಮ್ಮ ಪುರಸಭೆಯಿಂದ ಬೇಡಿಕೆ ಇಟ್ಟಾಗ ಶಾಸಕ ವಿಜಯಾನಂದ ಕಾಶಪ್ಪನವರ ಸ್ಪಂದಿಸಿ ಸರ್ಕಾರದಿಂದ ಅನುದಾನ ಕೊಡಿಸಿ ಅಭಿವೃದ್ದಿಗೆ ಸಾಥ್‌ ನೀಡುತ್ತಿದ್ದಾರೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಲ್ಲೂಕು ಪಂಚಾಯಿತಿ ಇಒ ಮುರಳೀಧರ ದೇಶಪಾಂಡೆ, ಉಪಾಧ್ಯಕ್ಷೆ ರಾಜಮ್ಮ ಬದಾಮಿ, ಶಿವಾನಂದ ಕಂಠಿ, ಬಸವರಾಜ ಗೊಣ್ಣಾಗರ, ಮಹ್ಮದ ದೋಟಿಹಾಳ, ಶೇಖರಪ್ಪ ಬಾದವಾಡಗಿ, ಪಂಚ ಗ್ಯಾರಂಟಿಗಳ ತಾಲ್ಲೂಕು ಅಧ್ಯಕ್ಷ ಮುತ್ತಣ್ಣ ಕಲಗೋಡಿ, ಮಹಾಂತೇಶ ಅವಾರಿ, ಜಬ್ಬಾರ ಕಲಬುರ್ಗಿ, ಮಹಿಬೂಬ ಸರಕಾವಸ್, ಲಿಂಬಣ್ಣ ಮುಕ್ಕಣ್ಣವರ, ಪುರಸಭೆ ಸಿಬ್ಬಂದಿ ಮಹಾಂತೇಶ ತಾರಿವಾಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.