ADVERTISEMENT

ಬಣಜಿಗರ ಮೀಸಲಾತಿ ರದ್ದಾದರೆ ಉಗ್ರ ಹೋರಾಟ- ಬಸವರಾಜ ಬಡ್ಡಿ

​ಪ್ರಜಾವಾಣಿ ವಾರ್ತೆ
Published 1 ಮೇ 2022, 2:57 IST
Last Updated 1 ಮೇ 2022, 2:57 IST
ಹುನಗುಂದ ಪಟ್ಟಣದ ಗುರುಬಸವ ಪತ್ತಿನ ಸಹಕಾರಿ ಬ್ಯಾಂಕನಲ್ಲಿ ಬಣಜಿಗ ಸಮುದಾಯದ ಮುಖಂಡರು ಸುದ್ದಿಗೋಷ್ಟಿ ನಡೆಸಿದರು.
ಹುನಗುಂದ ಪಟ್ಟಣದ ಗುರುಬಸವ ಪತ್ತಿನ ಸಹಕಾರಿ ಬ್ಯಾಂಕನಲ್ಲಿ ಬಣಜಿಗ ಸಮುದಾಯದ ಮುಖಂಡರು ಸುದ್ದಿಗೋಷ್ಟಿ ನಡೆಸಿದರು.   

ಹುನಗುಂದ: ಬಣಜಿಗ ಸಮುದಾಯದ 2-ಎ ಮೀಸಲಾತಿ ರದ್ದು ಮಾಡಿದರೆ ಉಗ್ರ ಹೋರಾಟ ಮಾಡಲಾಗುವುದೆಂದು ಹುನಗುಂದ- ಇಳಕಲ್‌ ತಾಲ್ಲೂಕು ಬಣಜಿಗ ಸಮಾಜದ ಅಧ್ಯಕ್ಷ ಬಸವರಾಜ ಬಡ್ಡಿ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟವು ಬಣಜಿಗ ಜಾತಿಯವರು ಪ್ರವರ್ಗ 2ಎ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ, ಅದನ್ನು ರದ್ದುಪಡಿಸಿ ಎಂದು ಇತ್ತೀಚಿಗೆ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಇದನ್ನು ನಮ್ಮ ತಾಲ್ಲೂಕು ಘಟಕ ತೀವ್ರವಾಗಿ ಖಂಡಿಸುತ್ತದೆ. ನಮ್ಮ ಬಣಜಿಗ ಸಮುದಾಯದಲ್ಲಿ ಬಡವರು ಮತ್ತು ಮಧ್ಯಮವರ್ಗದವರು ಇದ್ದೇವೆ ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂದು 2011ರಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಮೀಸಲಾತಿ ನೀಡಿದ್ದಾರೆ ಎಂದರು.

ಗಂಗಾಧರ ಶೆಟ್ಟರ್, ಅಂದಾನಪ್ಪ ಹವಾಲ್ದಾರ, ಮಹಾಬಳೇಶ ಮರಟದ, ಸಂಗಣ್ಣ ಚಿನಿವಾಲರ, ಬಸವರಾಜ ಕೆಂದೂರ, ಅರುಣೋದಯ ದುದ್ಗಿ, ಸಂಗಣ್ಣ ಜೀರಿಗೆ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.