ADVERTISEMENT

ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2024, 15:54 IST
Last Updated 20 ನವೆಂಬರ್ 2024, 15:54 IST

ಕುಳಗೇರಿ ಕ್ರಾಸ್: ಇಲ್ಲಿನ ಚಿರ್ಲಕೊಪ್ಪ ಜವಹಾರ ನವೋದಯ ವಿದ್ಯಾಲಯದ 9ನೇ ಹಾಗೂ 11ನೇ ತರಗತಿ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಅವಧಿಯನ್ನು ನವೆಂಬರ್‌ 26ರವರೆಗೆ ವಿಸ್ತರಿಸಲಾಗಿದೆ.

2024-25ನೇ ಸಾಲಿನಲ್ಲಿ 8ನೇ ಹಾಗೂ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ‘ಲ್ಯಾಟಿರಲ್ ಎಂಟ್ರಿ’ ಪ್ರವೇಶ ಪರೀಕ್ಷೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ನ.27, 28ರಂದು ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ.

9ನೇ ತರಗತಿಗೆ https://cbseitms.nic.in/2024/nvsix ಈ ಲಿಂಕ್‌ ಮೂಲಕ ಹಾಗೂ 11ನೇ ತರಗತಿಗೆ https://cbseitms.nic.in/2024/nvsx­i11ಈ ಲಿಂಕ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ವಿದ್ಯಾಲಯದ ಪ್ರಭಾರ ಪ್ರಾಚಾರ್ಯ ಎಸ್.ಎಸ್. ಆಸ್ಸಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.