
ಇಳಕಲ್: ಬಾಗಲಕೋಟೆಯಲ್ಲಿ ಈಚೆಗೆ ಶಿವಾಜಿ ಜಯಂತಿ ಮೆರವಣಿಗೆಯ ಮೇಲೆ ಕಲ್ಲು ತೂರಿ, ಗಲಭೆ ಸೃಷ್ಟಿಸಿದವರನ್ನು ಬಂಧಿಸಿ, ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ಕ್ಷತ್ರೀಯ ಮರಾಠ ಷರಿಷತ್‌ನ ತಾಲ್ಲೂಕು ಘಟಕದಿಂದ ತಹಶೀಲ್ದಾರ್ ಅಮರೇಶ ಪಮ್ಮಾರ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ ಕೊರೆನವರ ಮಾತನಾಡಿ, ‘ಮೆರವಣಿಗೆ ವೇಳೆ ಗಲಭೆ ಮಾಡಿ, ಶಿವಾಜಿ ಮಹಾರಾಜರಿಗೆ ಹಾಗೂ ಹಿಂದೂ ಸಮಾಜಕ್ಕೆ ಅವಮಾನ ಮಾಡಲಾಗಿದೆ. ಈ ಬಗ್ಗೆ ಕಠಿಣ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.
ಪರಿಷತ್ತಿನ ಗಣೇಶರಾವ್ ಮೋರೆ, ಅವಿನಾಶ್ ಕದಂ, ಪ್ರಕಾಶ ಜಾಧವ, ರಾಮು ಖಾಡೆ, ಪ್ರಹ್ಲಾದ ಆರೇರ, ಮುತ್ತಣ್ಣ ಆರೇರ, ವಿನಾಯಕ ಕೇಶಣ್ಣವರ, ಭರತ್ ಸಾಳಂಕೆ, ಮೌನೇಶ್ ಕೋರೆನವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.