ADVERTISEMENT

ತೇರದಾಳ: ಇಳಿಕೆಯತ್ತ ಕೃಷ್ಣೆ– ನಿಟ್ಟುಸಿರು ಬಿಟ್ಟ ಸಂತ್ರಸ್ತರು

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 3:05 IST
Last Updated 26 ಆಗಸ್ಟ್ 2025, 3:05 IST
ತೇರದಾಳ ತಾಲ್ಲೂಕಿನ ತಮದಡ್ಡಿಯಲ್ಲಿ ಕೃಷ್ಣಾ ನದಿಯ ನೀರಿನ ಮಟ್ಟ ಇಳಿಕೆಯಾಗಿದ್ದು, ಜಲಾವೃತವಾದ ಮನೆಯಿಂದ ನೀರು ಮರೆಯಾಗಿರುವು ಸೋಮವಾರ ಕಂಡು ಬಂತು
ತೇರದಾಳ ತಾಲ್ಲೂಕಿನ ತಮದಡ್ಡಿಯಲ್ಲಿ ಕೃಷ್ಣಾ ನದಿಯ ನೀರಿನ ಮಟ್ಟ ಇಳಿಕೆಯಾಗಿದ್ದು, ಜಲಾವೃತವಾದ ಮನೆಯಿಂದ ನೀರು ಮರೆಯಾಗಿರುವು ಸೋಮವಾರ ಕಂಡು ಬಂತು   

ತೇರದಾಳ: ತಾಲ್ಲೂಕಿನ ತಮದಡ್ಡಿ ಹಾಗೂ ಹಳಿಂಗಳಿಯಲ್ಲಿ ಹರಿಯುವ ಕೃಷ್ಣಾ ನದಿಯ ನೀರಿನ ಮಟ್ಟ ಸೋಮವಾರ ಇಳಿಕೆಯಾಗಿದ್ದು, ಸಂತ್ರಸ್ತರು ನಿಟ್ಟುಸಿರು ಬಿಟ್ಟಿದ್ದಾರೆ.

ಮೂರು ಅಡಿಗಳಷ್ಟು ನೀರು ಇಳಿಕೆಯಾಗಿದ್ದು, ಸಂತ್ರಸ್ತರ ಕೆಲವು ಮನೆಗಳು ತೆರೆದುಕೊಂಡಿವೆ. ಇನ್ನೂ ಕೆಲವು ತೋಟದ ದಾರಿಗಳು ಸಂಚಾರಕ್ಕೆ ಮುಕ್ತವಾಗಿವೆ.

ಕಾಳಜಿ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಜಾನುವಾರುಗಳಿಗೂ ಮೇವು ದೊರೆಯುತ್ತಿದೆ. ನೀರು ಇಳಿಯಿತು ಎಂಬ ನಿರಾಳ ಭಾವವೂ ಇದೆ, ಶಾಶ್ವತ ಪರಿಹಾರ ದೊರಕಿಲ್ಲವೆಂಬ ನಿರಾಸೆ ಸಂತ್ರಸ್ತರ ಮನದಲ್ಲಿದೆ.

ADVERTISEMENT

ನೋಡಲ್ ಅಧಿಕಾರಿಗಳು, ಪಿಡಿಒ, ಗ್ರಾಮ ಆಡಳಿತಾಧಿಕಾರಿಗಳು, ಪಶು ವೈದ್ಯರು, ಆಶಾ ಕಾರ್ಯಕರ್ತೆಯರು ಗ್ರಾಮಗಳಲ್ಲೆ ಬೀಡು ಬಿಟ್ಟಿದ್ದಾರೆ.

ನೀರು ಪೂರ್ಣ ಇಳಿಕೆ ಕಂಡು, ಸಂತ್ರಸ್ತರು ಪುನಃ ತಮ್ಮ ಮನೆಗಳಿಗೆ ಸೇರುವವರೆಗೆ ಮೇವು ಹಾಗೂ ಕಾಳಜಿ ಕೇಂದ್ರ ಮುಂದುವರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.