ರಬಕವಿ ಬನಹಟ್ಟಿ: ಭಾರತೀಯ ಅಂಚೆ ಇಲಾಖೆಯವರು ನೂತನವಾಗಿ ಎಪಿಟಿ 2.0 ಆಧುನಿಕ ಅಂಚೆ ತಂತ್ರಾಂಶವನ್ನು ನಿರ್ಮಾಣ ಮಾಡಿದ್ದು, ಇದರಿಂದಾಗಿ ಅಂಚೆ ಇಲಾಖೆಯಿಂದ ಪತ್ರಗಳನ್ನು ಮತ್ತು ಪಾರ್ಸಲ್ ಕಳಿಸುವವರಿಗೆ ಅನುಕೂಲವಾಗಲಿದೆ. ಈ ತಂತ್ರಾಂಶದಿಂದ ಇಲಾಖೆಯ ಸಿಬ್ಬಂದಿ ವರ್ಗದವರಿಗೂ ಮತ್ತು ಸಾರ್ವಜನಿಕರಿಗೂ ಕೂಡಾ ಅನುಕೂಲವಾಗಲಿದೆ ಎಂದು ಬಾಗಲಕೋಟೆ ಜಿಲ್ಲಾ ಅಂಚೆ ಇಲಾಖೆಯ ಅಧೀಕ್ಷಕ ಎಚ್.ಬಿ. ಹಸಬಿ ತಿಳಿಸಿದರು.
ಸೋಮವಾರ ಇಲ್ಲಿನ ಅಂಚೆ ಕಛೇರಿಯಲ್ಲಿ ಆಳವಡಿಸಲಾದ ನೂತನ ತಂತ್ರಾಂಶಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳ ಸಾಹಿತಿ ಜಯವಂತ ಕಾಡದೇವರ ಮಾತನಾಡಿದರು. ಉಪ ಅಂಚೆ ಅಧಿಕಾರಿ ಶ್ರೀಶೈಲ ಮೊಕದ್ದಮ, ವಿನಾಯಕ ಭಸ್ಮೆ, ವೀರಭದ್ರ ಮುಗಳ್ಯಾಳ, ಸಾವಿತ್ರಿ ಮಠದ, ಕಾಡು ಗುಣಕಿ, ಮಹಾಂತೇಶ ಬೆಣಕನಾಳ, ಹನಮಂತ ಕಲಾದಗಿ, ಮಹಾವೀರ ಗುರ್ಲಾಪುರ, ಇಮಾಮಹುಸೇನ್ ಮುನ್ನೊಳ್ಳಿ, ಗಜಲಾ ಬಿಸನಾಳ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.