
ಗುಳೇದಗುಡ್ಡ: ಪಟ್ಟಣದಲ್ಲಿ ಎರಡನೇ ಹಂತದ 24/7 ಕುಡಿಯುವ ನೀರಿನ ಯೋಜನೆಯಾದ ಜಲಜೀವನ್ ಮಷಿನ್ ಸಾಕಾರಗೊಳಿಸಲು ಪಟ್ಟಣದ ಶೇ 90ರಷ್ಟು ಪ್ರಮುಖ ರಸ್ತೆಗಳನ್ನು ಅಗೆದು ಪೈಪ್‍ಲೈನ್ ಹಾಕಲಾಗಿದ್ದು ಅಗೆದ ರಸ್ತೆಯನ್ನು ಮುಚ್ಚದೇ ಹಾಗೆ ಬಿಟ್ಟಿದ್ದು ಬೈಕ್ ಹೋಗದಷ್ಟು ತೊಂದರೆಯಾಗಿದೆ. ಬೇಗನೆ ದುರಸ್ತಿಮಾಡಬೇಕೆಂದು ಪಟ್ಟಣದ ನಾಗರಿಕರು ಆಗ್ರಹಿಸಿದ್ದಾರೆ.
ಸಾರ್ವಜನಿಕವಾಗಿ ಕುಡಿಯುವ ನೀರು ನಲ್ಲಿಗಳಿಂದ ರಸ್ತೆಗೆ ಬಂದು ಅಗೆದ ರಸ್ತೆ ತುಂಬಿ ನಡೆದಾಡದ ಸ್ಥಿತಿ ನಿರ್ಮಾಣವಾಗಿದೆ. ಈಚೆಗೆ ಸುರಿದ ಮಳೆಯಿಂದಲೂ ನೀರು ರಸ್ತೆಯಲ್ಲಿ ನಿಂತು ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಸಂಬಂಧಿಸಿದವರು ದುರಸ್ತಿಮಾಡಬೇಕಾದ ಅವಶ್ಯಕತೆ ಇದೆ. ಪಟ್ಟಣದ ಬನ್ನಿಕಟ್ಟಿ,ಸರ್ಕಾರಿ ಬಾಲಕಿಯರ ಕಾಲೇಜು ರಸ್ತೆ, ಮುಖ್ಯ ರಸ್ತೆ ಬಿಟ್ಟು ಇತರೆ ಪಟ್ಟಣದ ಎಲ್ಲ ಸಣ್ಣ ರಸ್ತೆ,ಸಂದಿಗಳನ್ನು ಅಗೆದು ಹಾಗೆಯೇ ಬಿಡಲಾಗಿ.ವಯಸ್ಥಾದವರು,ಬೈಕ್ ಸವಾರರು,ಪಾದಚಾರಿಗಳು ನಡೆದಾಡಲು ಒಂದು ರಸ್ತೆಯಿಂದ ಇನ್ನೊಂದು ಹೋಗಲು ತೀವ್ರ ತೊಂದರೆಯಾಗಿದೆ.ಅದನ್ನು ಕೂಡಲೇ ಮುಚ್ಚಿಸಬೇಕೆಂದು ಈರಣ್ಣ ಅಲದಿ ಮುಂತಾದವರು ಆಗ್ರಹಿಸುತ್ತಾರೆ.
’ಪಟ್ಟಣದಲ್ಲಿ ರಸ್ತೆ ಅಗೆದು ನೀರಿಗಾಗಿ ಪೈಪ್ ಹಾಕಿ ಹಾಗೆಯೇ ಬಿಟ್ಟಿದ್ದು ನಮ್ಮ ಗಮನಕ್ಕೆ ಬಂದಿದೆ ಸಂಬಂಧಿಸಿದವರಿಗೆ ಮಾತಾಡಿ ಸರಿಪಡಿಸಲಾಗುವುದು’ ಎಂದು ಪುರಸಭೆ ಅಧ್ಯಕ್ಷೆ ಜ್ಯೋತಿ ಗೋವನಕೊಪ್ಪ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.