ADVERTISEMENT

ಸತ್ಯಕಾಮರ ಪುಣ್ಯಾರಾಧನೆ: ಭಕ್ತಿಯೇ ನಂಬಿಕೆಗೆ ಮೂಲ, ಜಿಜ್ಞಾಸೆ ಸಲ್ಲ- ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 15:57 IST
Last Updated 20 ಅಕ್ಟೋಬರ್ 2024, 15:57 IST
ಸಮೀಪದ ಕಲ್ಹಳ್ಳಿ ಗ್ರಾಮದ ಸುಮ್ಮನೆ ಮನೆಯಲ್ಲಿ ಭಾನುವಾರ ಸತ್ಯಕಾಮ ಪ್ರತಿಷ್ಠಾದಿಂದ ಏರ್ಪಡಿಸಿದ್ದ ಸತ್ಯಕಾಮರ ಪುಣ್ಯಾರಾಧನೆಯಲ್ಲಿ ವಿಜಯಪೂರ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿಯವರು ಮಾತನಾಡಿದರು.
ಸಮೀಪದ ಕಲ್ಹಳ್ಳಿ ಗ್ರಾಮದ ಸುಮ್ಮನೆ ಮನೆಯಲ್ಲಿ ಭಾನುವಾರ ಸತ್ಯಕಾಮ ಪ್ರತಿಷ್ಠಾದಿಂದ ಏರ್ಪಡಿಸಿದ್ದ ಸತ್ಯಕಾಮರ ಪುಣ್ಯಾರಾಧನೆಯಲ್ಲಿ ವಿಜಯಪೂರ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿಯವರು ಮಾತನಾಡಿದರು.   

ಜಮಖಂಡಿ: ವೇದದ ಒಂದೊಂದು ಶಬ್ದ ಸಾವಿರ ಶಬ್ಧಕ್ಕೆ ಸಮ ಎಂದು ವಿಜ್ಞಾನಿಗಳು ಹೇಳಿದ್ದಾರೆ ಎಂದು ವಿಜಯಪುರ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಸಮೀಪದ ಕಲ್ಹಳ್ಳಿ ಗ್ರಾಮದ ಸುಮ್ಮನೆ ಮನೆಯಲ್ಲಿ ಭಾನುವಾರ ಸತ್ಯಕಾಮ ಪ್ರತಿಷ್ಠಾದಿಂದ ಏರ್ಪಡಿಸಿದ್ದ ಸತ್ಯಕಾಮರ ಪುಣ್ಯಾರಾಧನೆಯಲ್ಲಿ ಮಾತನಾಡಿದ ಅವರು, ಪೂಜೆ ಭಕ್ತಿಯೋಗಕ್ಕೆ ಸಂಬಂಧಿಸಿದೆ, ಭಕ್ತಿಯೋಗದಲ್ಲಿ ಪ್ರಶ್ನೆಗೆ ಜಾಗವಿಲ್ಲ ನಂಬಿಕೆಗೆ ಮಾತ್ರ ಅವಕಾಶವಿದೆ. ಭಕ್ತಿಯೋಗದಲ್ಲಿ ಪರಮಾತ್ಮನೆ ಸರ್ವ ಶಕ್ತ, ಜಿಜ್ಞಾಸೆಯಲ್ಲಿ ಪೂಜೆಯನ್ನು ಬಿಡಬಾರದು ಎಂದರು.

ಎಲ್ಲರಿಗೂ ಭಾವ ಭಕ್ತಿಯನ್ನು ಹೆಚ್ಚಿಸುವಂತೆ ಮಾಡಬೇಕು ವಿನಃ ವಿಘ್ನವಾಗಬಾರದು ಎಂದು ರಾಮಕೃಷ್ಣರು ತಿಳಿಸಿದ್ದಾರೆ.  ಆದರೆ ಅದು ಮತಾಂಧತೆಗೆ ಹೋಗಬಾರದು. ಭಕ್ತಿಯಲ್ಲಿ ತಲ್ಲೀನತೆ ಬೀರಬೇಕು, ರಾಮಾವತಾರ ಹನುಮಂತನ ಭಕ್ತಿಗೆ, ಕೃಷ್ಣಾವತಾರ ಗೋಪಿಕೆಯರ ಭಕ್ತಿಗೆ ಸರಿಸಾಟಿ ಯಾವುದಿಲ್ಲ. ವಿಗ್ರಹಗಳು ಕೇವಲ ಕಲ್ಲಿನಿಂದ ಆಗಿರುವ ಆಕೃತಿಗಳಲ್ಲ, ಅದರಲ್ಲಿ ಭಕ್ತಿ ಭಾವ ಅಡಗಿದೆ. ಒಂದೊಂದು ಭಾವದ ಪರಿಚಯವಾಗಬೇಕಾದರೆ ಒಂದೊಂದು ಸಾವಿರ ಜನ್ಮಬೇಕು ಎಂದರು.

ADVERTISEMENT

ಬೆಂಗಳೂರ ವೇದ ದೇವಾಂಗ ಆಚಾರ್ಯೆ ಅಮೃತವರ್ಷಿಣಿಯವರು ವೇದಕಾಲದಲ್ಲಿ ಸ್ತ್ರೀಯರ ಕುರಿತು ಮಾತನಾಡಿ ಭಾರತೀಯರ ಪರಂಪರೆ ವೇದಗಳಲ್ಲಿ ಮಹಿಳೆಯರಿಗೆ ಸ್ಥಾನ ನೀಡಿಲ್ಲವೆಂದು ಎಲ್ಲಿಯೂ ಹೇಳಿಲ್ಲ, ಪರಕೀಯರ ಆಕ್ರಮಣ ಕಾಲದಲ್ಲಿ ಅಧ್ಯಯನ ಮಹಿಳೆಯರಿಗೆ ಇಲ್ಲವೆಂದು ಬಂದಿರಬಹುದು. ಆದರೆ ಅದು ಮೊದಲಿನಿಂದ ಬಂದಿಲ್ಲ. ನಾಲ್ಕು ವೇದಗಳಲ್ಲಿ ಮಹಿಳೆಯರ ಬಗ್ಗೆ ವೇದಗಳೇ ಹೇಳುತ್ತವೆ ಅದರ ಅಧ್ಯಯನದಿಂದ ಮಾತ್ರ ತಿಳಿಯುತ್ತದೆ ಎಂದರು.

ಮಹಿಳೆ ಎಂದರೆ ಯಾವಾಗಲೂ ಪರಿಶುದ್ಧ, ವೇದಗಳು ಮಹಿಳೆಯರನ್ನು ದೂರ ಸರಿಸಿಲ್ಲ. ನಿತ್ಯ ಕರ್ಮಗಳನ್ನು ಮಾಡಲು ವೇದಗಳು ಅವಕಾಶಗಳನ್ನು ನೀಡಿವೆ. ಕುಟುಂಬಗಳು ಒಡೆಯದಂತೆ ನೋಡುವುದನ್ನು ಮಹಿಳೆಗೆ ವೇದಗಳು ನೀಡಿದೆ. ಎಲ್ಲರಿಗೂ ಆಹಾರವೇ ಮೊದಲು ಆದ್ಯತೆ ಇದೆ ಎಂದರು.

ಅಂಬಾ ಜಗಜ್ಜನನೀ ಮತ್ತು ಅಷ್ಟಲಕ್ಷ್ಮೀ ವೈಭವ ನೃತ್ಯ, ಹೊಳೆ ಆಲೂರು ಜ್ಞಾನಸಿಂಧು ಅಂಧ ಮಕ್ಕಳಿಂದ ಸಂಗೀತ ಯೋಗ ಮತ್ತು ಮಲ್ಲಕಂಬ ಪ್ರದರ್ಶನ ಜರುಗಿದವು.

ಶಿಕ್ಷಣ ತಜ್ಞ ಗುರುರಾಜ ಕರ್ಜಗಿಯವರು ಶ್ರೀದುರ್ಗಾ ಸಪ್ತಶತಿಯ ದರ್ಶನ ಕುರುತು ಮಾತನಾಡಿದರು. ಸತ್ಯಕಾಮ ಪ್ರತಿಷ್ಠಾನದ ಸಂಚಾಲಕಿ ವೀಣಾ ಬನ್ನಂಜೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.