ADVERTISEMENT

ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರದ ಪಾಠ ಅಗತ್ಯ: ಎ.ಜಿ ನ್ಯಾಮಗೌಡ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 7:38 IST
Last Updated 2 ಫೆಬ್ರುವರಿ 2026, 7:38 IST
ಜಮಖಂಡಿ: ತಾಲ್ಲೂಕಿನ ಚಿಕ್ಕಪಡಸಲಗಿ ಗ್ರಾಮದಲ್ಲಿ ಜಗದ್ಗುರು ತೊಂಟದಾರ್ಯ ವಿದ್ಯಾಪೀಠ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢ ಶಾಲೆ ಚಿಕ್ಕಪಡಸಲಗಿಯಲ್ಲಿ 1999-2002 ನೇ ಸಾಲಿನ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳು ಹಮ್ಮಿಕೊಂಡ ಗುರುವಂದನಾ ಹಾಗೂ ಸ್ನೇಹ ಸಂಗಮ ಕಾರ್ಯಕ್ರಮ ಉದ್ಘಾಟಿಸಿದರು.

ಜಮಖಂಡಿ: ‘ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಮಕ್ಕಳಿಗೆ ಪಾಲಕರು ಕಲಿಸಬೇಕು, ಗುರುಗಳಿಗೆ, ಹಿರಿಯರಿಗೆ ಗೌರವ ನೀಡಬೇಕು’ ಎಂದು ಶಾಲಾ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಎ ಜಿ ನ್ಯಾಮಗೌಡ ಹೇಳಿದರು.

ತಾಲ್ಲೂಕಿನ ಚಿಕ್ಕಪಡಸಲಗಿ ಗ್ರಾಮದಲ್ಲಿ ಜಗದ್ಗುರು ತೊಂಟದಾರ್ಯ ವಿದ್ಯಾಪೀಠಶಿವಶರಣ ಹರಳಯ್ಯ ಸ್ಮಾರಕ ಪ್ರೌಢ ಶಾಲೆಯಲ್ಲಿ 1999-2002ನೇ ಸಾಲಿನಲ್ಲಿ ಕಲಿತ 8 ರಿಂದ 10ನೇ ತರಗತಿ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಸ್ನೇಹ ಸಂಗಮಕಾರ್ಯಕ್ರಮದಲ್ಲಿ ಮಾತನಾಡಿದರು.

ಪಾಠ ಕಲಿಸಿದ ಗುರುಗಳನ್ನು ಸನ್ಮಾನಿಸಿ ಗುರುವಂದನೆ ಸಲ್ಲಿಸಿದರು.
ಸಾನಿಧ್ಯವನ್ನು ಮಾತೋಶ್ರೀ ಅಕ್ಕಮಹಾದೇವಿ ಅಮ್ಮನವರು, ಪರಮಗೊಂಡ ದಾನಗೌಡ, ಪಿ. ಎಮ್. ಪಾಟೀಲ, ಬಿ. ಎಲ್. ಜಾಲೋಜಿ ಇದ್ದರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.