ADVERTISEMENT

ಜಮಖಂಡಿ | ಅನ್ಯ ಕೆಲಸಗಳಿಗೆ ಶಿಕ್ಷಕರ ಬಳಕೆ: ಬೋಧನೆಗೆ ಹಿನ್ನಡೆ

ಆರ್.ಎಸ್.ಹೊನಗೌಡ
Published 13 ಡಿಸೆಂಬರ್ 2025, 4:27 IST
Last Updated 13 ಡಿಸೆಂಬರ್ 2025, 4:27 IST
ಜಮಖಂಡಿಯಲ್ಲಿ ಈಚೆಗೆ ಬಿಎಲ್‌ಒಗಳು ಸೇರಿ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದರು
ಜಮಖಂಡಿಯಲ್ಲಿ ಈಚೆಗೆ ಬಿಎಲ್‌ಒಗಳು ಸೇರಿ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದರು   

ಜಮಖಂಡಿ: ಶಿಕ್ಷಕರಿಗೆ ಚುಣಾವಣೆ ಕೆಲಸಗಳು, ಜಾತಿ ಸಮೀಕ್ಷೆ ಸೇರಿದಂತೆ ಹಲವಾರು ಅನ್ಯ ಕೆಲಸಗಳ ಜವಾಬ್ದಾರಿಯನ್ನು ಕೋಡುತ್ತಿರುವದರಿಂದ ವಿದ್ಯಾರ್ಥಿಗಳ ಬೋಧನೆಗೆ ಹಿನ್ನಡೆಯಾಗುತ್ತಿದೆ. ತಮಗೆ ನೀಡಿರುವ ಜವಾಬ್ದಾರಿಯನ್ನು ಶಿಕ್ಷಕರ ಕೊರತೆಯ ನಡುವೆ ನಿಭಾಯಿಸಲು ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ. ಶಿಕ್ಷಕರನ್ನು ಬಳಸಬಾರದು ಎಂದು ಸರ್ಕಾರದ ಆದೇಶವಿದ್ದರೂ ಅದು ಪಾಲನೆಯಾಗುತ್ತಿಲ್ಲ.

ಬೇಸಿಗೆಯಲ್ಲಿ ಪರಿಶಿಷ್ಟ ಜಾತಿಯ ಒಳಮೀಸಲಾತಿ ಸಮೀಕ್ಷೆ ಅದು ಮುಗಿಯುತ್ತಿದ್ದಂತೆ ದಸರಾ ರಜೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ, ಅದು ಮುಗಿದಿದೆ. ಈಗ ಮತದಾರರ ಪಟ್ಟಿ ಪರಿಷ್ಕರಣೆಯ ಕೆಲಸವನ್ನು ನೀಡಲಾಗಿದೆ.

ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ 2002ರಲ್ಲಿ ಮತದಾರ ಪಟ್ಟಿಯ ಕುಟುಂಬದ ಮುಖ್ಯಸ್ಥರ ಹೆಸರನ್ನು ಗುರುತಿಸಿ 2025ರ ಅವರ ಕುಟುಂಬದ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಜೋಡನೆ ಮಾಡುವದು ತುಂಬಾ ಕಷ್ಟದ ಕೆಲಸವಾಗುತ್ತಿದೆ. ಇದು ಮುಗಿಯದ ಕೆಲಸವಾಗಿದೆ ಎನ್ನುತ್ತಿದ್ದಾರೆ ಶಿಕ್ಷಕರು.

ADVERTISEMENT

ಬಿಎಲ್‌ಒಗಳ ಮೇಲುಸ್ತುವಾರಿಯಾಗಿ ಗ್ರಾಮ ಲೆಕ್ಕಾಧಿಕಾರಿಗಳನ್ನು ನೇಮಕ ಮಾಡಿದ್ದಾರೆ. ಗ್ರಾಮ ಲೆಕ್ಕಾಧಿಕಾರಿಗಳಿಗೆ ಒತ್ತಡ ಹಾಕಿ ಜೋಡನೆ ಕಾರ್ಯವನ್ನು ಮಾಡಲು ಮೇಲಾಧಿಕಾರಿಗಳು ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಆದರೆ, ಬಿಎಲ್‌ಒಗಳು ತಮ್ಮ ಶಾಲೆ ಬಿಟ್ಟ ಜೊಡನೆ ಕೆಲಸ ಮಾಡಲು ಮುಂದಾಗುತ್ತಿಲ್ಲ. ಇದರಿಂದ ಗ್ರಾಮ ಲೆಕ್ಕಾಧಿಕಾರಿಗಳು ನಡುವೆ ಸಿಕ್ಕು ಪರದಾಡುವಂತಾಗಿದೆ. ಕೆಲ ಗ್ರಾಮ ಲೆಕ್ಕಾಧಿಕಾರಿಗಳು ಒತ್ತಡಕ್ಕೆ ಮಣಿದು ತಾವೇ ಕೆಲಸ ನಿರ್ವಹಿಸುವಂತಾಗಿದೆ ಎಂದು ಗ್ರಾಮ ಲೆಕ್ಕಾಧಿಕಾರಿಯೊಬ್ಬರು ತಿಳಿಸಿದರು.

ಇದರ ಜೊತೆಗೆ ಶಿಕ್ಷನ ಇಲಾಖೆಯ ಹಲವಾರು ಟ್ರೆನಿಂಗ್, ಕ್ರೀಡಾಕೂಟ, ಬೀಸಿಯೂಟಕ್ಕೆ ತತ್ತಿ ತರುವದು, ಬಾಳೆಹಣ್ಣು, ತರಕಾರಿ ತಂದು ಬಿಸಿಯೂಟ ತಯಾರಿಸುವದು, ಬಿಸಿಯೂಟಕ್ಕೆ ಮಕ್ಕಳ ಹಾಜರಾತಿಯನ್ನು ಆನ್‌ಲೈನ್‌ನಲ್ಲಿ ಹಾಕುವದು, ಎಲ್‌ಬಿಎ, ಎಫ್‌ಎಲ್‌ಎನ್, ಓದು ಕರ್ನಾಟಕ ಹಾಗೂ ಮರು ಸಿಂಚನ, ಕಲಿಕಾದೀಪ, ಪ್ರತಿಭಾ ಕಾರಂಜಿ, ಕಲಿಕಾ ಹಬ್ಬ, ಸಸ್ಯ ಶಾಮಲಾ, ಎಸ್ ಡಿಎಂಸಿ ಪುಷ್ಠಿ, ವಿದ್ಯಾವಾಹಿನಿ, ಕಲಿಕೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತರುವದು ಈ ಯೋಜನೆಗಳನ್ನು ಮಾಡಿರುವ ಬಗ್ಗೆ ದಾಖಲೆಗಳ ಸಮೇತ ನೀಡುವುದು ಸೇರಿದಂತೆ ಹಲವಾರು ಕೆಲಸ ನಿಭಾಯಿಸುವದೇ ಹೆಚ್ಚಾಗುತ್ತಿದೆ.

’ಉತ್ತಮ ಫಲಿತಾಂಶ ಬರಬೇಕಾದರೆ ಶಿಕ್ಷಕರನ್ನು ಶೈಕ್ಷಣಿಕ ಕೆಲಸಕ್ಕೆ ಮಾತ್ರ ಬಳಸಿಕೊಳ್ಳಬೇಕು ಎಂದು ಬಿಇಒ ಅಶೋಕ ಬಸಣ್ಣವರಗೆ ಮನವಿ ಸಲ್ಲಿಸಲಾಗಿದೆ. ಆದರೂ ಶಿಕ್ಷಕರಿಗೆ ಅನ್ಯ ಕೆಲಸದ ಒತ್ತಡ ಕಡಿಮೆಯಾಗುತ್ತಿಲ್ಲ. ಬೇರೆ ತಾಲ್ಲೂಕಿನಲ್ಲಿ ಶಿಕ್ಷಕರನ್ನು ಕಡಿಮೆ ಬಳಸಿಕೊಂಡಿದ್ದಾರೆ. ಕೂಡಲೇ ತಹಶೀಲ್ದಾರರು ಬಿಎಲ್ಒಗಳನ್ನು ಕೈಬಿಡಬೇಕು’ ಎಂದು ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಸಿ ಜಿ ಕಡಕೋಳ ಒತ್ತಾಯಿಸಿದರು.

ಸರ್ಕಾರದ ಕೆಲಸ ಆಗಿರುವದರಿಂದ ಕೆಲಸ ಮಾಡುವುದು ಅನಿವಾರ್ಯ. ಶಿಕ್ಷಕರು ಬೋಧನೆ ಮಾಡಬೇಕಾಗಿರುವದರಿಂದ ಮಾನಸಿ ವಿಚಾರವಾಗಿ ನೆಮ್ಮದಿ ಹಾಗೂ ಒತ್ತಡರಹಿತವಾಗಿದ್ದರೆ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಬೇರೆಯಲು ಅನೂಕೂಲವಾಗುತ್ತದೆ. ಬೇರೆ ಇಲಾಖೆ ಅಧಿಕಾರಿಗಳನ್ನು ಬಳಸಿಕೊಳ್ಳಲು ತಹಶೀಲ್ದಾರರಿಗೆ ಮನವಿ ಮಾಡಲಾಗಿದೆ
ಅಶೋಕ ಬಸಣ್ಣವರ, ಬಿಇಒ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.