
ಮಹಾಲಿಂಗಪುರ: ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಸಮೀಪದ ಬಿಸನಾಳ ಗ್ರಾಮದಲ್ಲಿ ಅಪ್ಪು ಸ್ಪೋಟ್ರ್ಸ್ ಕ್ಲಬ್ ಹಾಗೂ ಜಿಲ್ಲಾ ಅಮೇಚೂರ್ ಅಸೋಸಿಯೇಶನ್ ವತಿಯಿಂದ ಎರಡು ದಿನಗಳವರೆಗೆ ಹಮ್ಮಿಕೊಂಡ 60 ಕೆ.ಜಿ. ಮ್ಯಾಟ್ ಕಬಡ್ಡಿ ಪಂದ್ಯಾವಳಿಯಲ್ಲಿ ಅರಳಿಮಟ್ಟಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.
ಶನಿವಾರ ನಡೆದ ಅಂತಿಮ ಪಂದ್ಯದಲ್ಲಿ ಶಿರೋಳ ತಂಡವನ್ನು 4 ಅಂಕಗಳಿಂದ ಅರಳಿಮಟ್ಟಿ ತಂಡ ಸೋಲಿಸಿ ₹20 ಸಾವಿರ ನಗದು ಬಹುಮಾನ ಪಡೆದುಕೊಂಡಿತು. ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಶಿರೋಳ ತಂಡಕ್ಕೆ ₹15 ಸಾವಿರ, ತೃತೀಯ ಸ್ಥಾನ ಪಡೆದ ನಿಂಗಾಪುರ ಎಸ್.ಕೆ. ತಂಡಕ್ಕೆ ₹10 ಸಾವಿರ ಹಾಗೂ ಚತುರ್ಥ ಸ್ಥಾನ ಪಡೆದ ಮುಧೋಳ ತಂಡಕ್ಕೆ ₹5 ಸಾವಿರ ನಗದು ಬಹುಮಾನವನ್ನು ಸಮಾರೋಪ ಸಮಾರಂಭದಲ್ಲಿ ವಿತರಿಸಲಾಯಿತು.
ಶಾಸಕ ಸಿದ್ದು ಸವದಿ, ದುಂಡಪ್ಪ ಚನ್ನಾಳ, ಹಣಮಂತ ಮೋಪಗಾರ, ಮಹಾಲಿಂಗಪ್ಪ ಸನದಿ, ಪಿಯೂಸ್ ಓಸ್ವಾಲ್, ಮಲ್ಲಪ್ಪ ಭದ್ರಶೆಟ್ಟಿ, ಮಹಾಲಿಂಗ ನಾಯ್ಕ, ಲಾಲಸಾಬ ಪೆಂಡಾರಿ, ಆನಂದ ತಮದಡ್ಡಿ, ರಜಾಕ ಪೆಂಡಾರಿ, ಮಹಾದೇವ ಜಾಡರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.